ದೆಹಲಿ ಹಾಗೂ ಉತ್ತರಾಖಂಡದಲ್ಲಿ ಮುಂದಿನ 2-3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಇಂದು ಬೆಳಗ್ಗೆಯಿಂದಲೇ ತಾಪಮಾನದಲ್ಲಿ ಭಾರಿ ಕುಸಿತ ಕಂಡಿದೆ. ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ ಮತ್ತು ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಬುಧವಾರ ಗುಡುಗು ಸಹಿತ ಲಘುವಾಗಿ ಮಧ್ಯಮ ತೀವ್ರತೆಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ವಾಯುವ್ಯ ದೆಹಲಿ, ನೈಋತ್ಯ ದೆಹಲಿ (ಮುಂಡಕಾ, ಜಾಫರ್‌ಪುರ್, ನಜಾಫ್‌ಗಢ), ಎನ್‌ಸಿಆರ್ (ಬಹದ್ದೂರ್‌ಗಢ) ಚಾರ್ಕಿ ದಾದ್ರಿ, ಮಟ್ಟನ್‌ಹೇಲ್, ಜಜ್ಜರ್ (ಹರಿಯಾಣ) ಮತ್ತು ಪ್ರತ್ಯೇಕ ಸ್ಥಳಗಳ ಪಕ್ಕದ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.
ದೆಹಲಿ, NCR (ಹಿಂಡನ್ ಏರ್ ಫೋರ್ಸ್ ಸ್ಟೇಷನ್, ಗಾಜಿಯಾಬಾದ್, ಇಂದಿರಾಪುರಂ) ಕರ್ನಾಲ್, ಮೆಹಮ್, ರೋಹ್ಟಕ್, ಭಿವಾನಿ (ಹರಿಯಾಣ) ಹಸ್ತಿನಾಪುರ, ಚಂದ್‌ಪುರ, ಅಮ್ರೋಹಾ (ಯುಪಿ) ನ ಕೆಲವು ಸ್ಥಳಗಳ ಪಕ್ಕದ ಪ್ರದೇಶಗಳು ಮುಂದಿನ 2 ಗಂಟೆಗಳಲ್ಲಿ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮತ್ತಷ್ಟು ಓದಿ: India Weather Updates: ಮಾರ್ಚ್ ಮೊದಲ ವಾರದಲ್ಲಿ ಈ ರಾಜ್ಯಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಲಿದೆ ಗರಿಷ್ಠ ತಾಪಮಾನ
ಮಂಗಳವಾರ ಸಂಜೆ ಡೆಹ್ರಾಡೂನ್ ಮತ್ತು ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮುನ್ಸೂಚನೆಯ ಪ್ರಕಾರ, 3,500 ಮೀ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿ ನೆಲೆಗೊಂಡಿರುವ ಎತ್ತರದ ಪ್ರದೇಶಗಳಲ್ಲಿ ತುಂಬಾ ಹಗುರವಾದ ಹಿಮಪಾತವು ಬೀಳುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ತುಮಕೂರಿನ ಕೊನೆಹಳ್ಳಿಯಲ್ಲಿ 10.4 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರಿನ ಎಚ್ಎಎಲ್ನಲ್ಲಿ 29.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ