AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್ ಸರ್ಕಾರ ಮತ್ತು ರಾಜ್ಯಪಾಲರಿಗೆ ಸುಪ್ರೀಂಕೋರ್ಟ್ ಛೀಮಾರಿ

ರಾಜ್ಯಪಾಲರಿಗೆ ಮಾಹಿತಿ ನೀಡಲು ಮುಖ್ಯಮಂತ್ರಿ ಸಾಂವಿಧಾನಿಕವಾಗಿ ಬದ್ಧರಾಗಿದ್ದಾರೆ ಮತ್ತು "ಮಾಹಿತಿ ನೀಡದಿರುವುದು ಅವರ ಸಾಂವಿಧಾನಿಕ ಕರ್ತವ್ಯಕ್ಕೆ ವಿರುದ್ಧವಾಗಿದೆ" ಎಂದು ನ್ಯಾಯಾಲಯ ಹೇಳಿ

ಪಂಜಾಬ್ ಸರ್ಕಾರ ಮತ್ತು ರಾಜ್ಯಪಾಲರಿಗೆ ಸುಪ್ರೀಂಕೋರ್ಟ್ ಛೀಮಾರಿ
ಭಗವಂತ್ ಮಾನ್- ಪಂಜಾಬ್ ರಾಜ್ಯಪಾಲ
ರಶ್ಮಿ ಕಲ್ಲಕಟ್ಟ
|

Updated on: Feb 28, 2023 | 11:25 PM

Share

ದೆಹಲಿ: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (Aam Aadmi Party) ಸರ್ಕಾರ ಮತ್ತು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ (Banwarilal Purohit) ನಡುವಿನ ಇತ್ತೀಚಿನ ಜಟಾಪಟಿ ಸಾಂವಿಧಾನಿಕ ಕ್ರಮದ ಅಗತ್ಯವನ್ನು ಸೂಚಿಸುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ಮಂಗಳವಾರ ಹೇಳಿದ್ದು, ಎರಡೂ ಕಡೆಯವರಿಗೆ ಛೀಮಾರಿ ಹಾಕಿದೆ. “ಸಾಂವಿಧಾನಿಕ ಪ್ರಾಧಿಕಾರವು ತನ್ನ ಕರ್ತವ್ಯವನ್ನು ಪೂರೈಸುವಲ್ಲಿ ವಿಫಲವಾದರೆ ಇನ್ನೊಬ್ಬರು ಸಂವಿಧಾನದ ಅಡಿಯಲ್ಲಿ ತನ್ನ ವಿಶಿಷ್ಟ ಕರ್ತವ್ಯವನ್ನು ಪೂರೈಸದಿರಲು ಸಮರ್ಥನೆಯಾಗುವುದಿಲ್ಲ” ಎಂದು ಪ್ರಕರಣದ ವಿಚಾರಣೆಯ ಪೀಠದ ನೇತೃತ್ವದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.

“ನಾವು ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿರಬಹುದು. ರಾಜ್ಯಪಾಲರ ಕಚೇರಿಯು ಪಕ್ಷದಿಂದಲ್ಲ, ಆದರೆ ನಾವು ಸಾಂವಿಧಾನಿಕ ಸಂವಾದವನ್ನು ಹೊಂದಿರಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಜಟಾಪಟಿ ನಡೆಯುತ್ತಿದ್ದು, ರಾಜ್ಯಪಾಲ ಪುರೋಹಿತ್ ಬಜೆಟ್ ಅಧಿವೇಶನಕ್ಕಾಗಿ ರಾಜ್ಯ ವಿಧಾನಸಭೆಯನ್ನು ಕರೆಯುವುದನ್ನು ವಿಳಂಬಗೊಳಿಸಿದ್ದರು.

ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಬರೆದ ಪತ್ರದಲ್ಲಿ, ರಾಜ್ಯಪಾಲರು ಅಧಿವೇಶನವನ್ನು ಕರೆಯಲು ಯಾವುದೇ ಆತುರವಿಲ್ಲ ಎಂದು ಸೂಚಿಸಿದ್ದು ರಾಜಭವನದಿಂದ ಬರೆದ ಪತ್ರಕ್ಕೆ “ಅವಹೇಳನಕಾರಿ” ಪ್ರತಿಕ್ರಿಯೆ ನೀಡಿದ್ದನ್ನು ಮುಖ್ಯಮಂತ್ರಿಗೆ ನೆನಪಿಸಿದ್ದಾರೆ.

ರಾಜ್ಯಪಾಲರಿಗೆ ಮಾಹಿತಿ ನೀಡಲು ಮುಖ್ಯಮಂತ್ರಿ ಸಾಂವಿಧಾನಿಕವಾಗಿ ಬದ್ಧರಾಗಿದ್ದಾರೆ ಮತ್ತು “ಮಾಹಿತಿ ನೀಡದಿರುವುದು ಅವರ ಸಾಂವಿಧಾನಿಕ ಕರ್ತವ್ಯಕ್ಕೆ ವಿರುದ್ಧವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಇಷ್ಟೇ ಅಲ್ಲದೆ ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿದ ರೀತಿ ಸರಿ ಇಲ್ಲ. ಮತ್ತೊಂದೆಡೆ, ಹಾಗೆ ಮಾಡಿದ ಮುಖ್ಯಮಂತ್ರಿಯ ನಿರ್ಲಕ್ಷ್ಯವು ಬಜೆಟ್ ಅಧಿವೇಶನವನ್ನು ಕರೆಯಲು ವಿಳಂಬ ಮಾಡುವ ಮೂಲಕ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಮಾಡದಿರಲು ಅವಕಾಶ ನೀಡುವುದಿಲ್ಲ.” ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಇದನ್ನೂ ಓದಿ: ಸಿಸೋಡಿಯಾ,ಜೈನ್ ರಾಜೀನಾಮೆ; ಶೀಘ್ರದಲ್ಲೇ ದೆಹಲಿ ಸಚಿವ ಸಂಪುಟಕ್ಕೆ ಇಬ್ಬರು ಸಚಿವರ ಸೇರ್ಪಡೆ: ಎಎಪಿ

ರಾಜ್ಯಪಾಲರು ಅಸೆಂಬ್ಲಿಯನ್ನು ಕರೆಯುವಲ್ಲಿ ಸಂವಿಧಾನದ ಆರ್ಟಿಕಲ್ 174 ರ ಅಡಿಯಲ್ಲಿ ವಿವೇಚನಾ ಅಧಿಕಾರವನ್ನು ಅನುಭವಿಸುವುದಿಲ್ಲ ಎಂದು ಪೀಠ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು ಸಚಿವ ಸಂಪುಟದ ನಿರ್ಧಾರ ಮತ್ತು ಟ್ವೀಟ್ ಮತ್ತು ಫೆಬ್ರವರಿ 14 ರ ಪತ್ರವನ್ನು ಉಲ್ಲೇಖಿಸಿ ಕಾನೂನು ಸಲಹೆ ಪಡೆಯುವ ಬಗ್ಗೆ ಮಾತನಾಡಿದರು. ಇವುಗಳು “ಅಸಾಂವಿಧಾನಿಕವಾಗಿವೆ.ಸದನವನ್ನು ಕರೆಯುವ ಬಗ್ಗೆ ಕಾನೂನು ಸಲಹೆ ಪಡೆಯುವ ಪ್ರಶ್ನೆಯೇ ಇಲ್ಲ. ಅವರು ಕರ್ತವ್ಯ ಬದ್ಧರಾಗಿದ್ದರು” ಎಂದು ನ್ಯಾಯಾಲಯ ಹೇಳಿದೆ.

“ಪ್ರಜಾಪ್ರಭುತ್ವದ ರಾಜಕೀಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸ್ವೀಕಾರಾರ್ಹ ಮತ್ತು ಸಮಚಿತ್ತದಿಂದ ಕೆಲಸ ಮಾಡಬೇಕು. ಈ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಹೊರತು, ಸಾಂವಿಧಾನಿಕ ಮೌಲ್ಯಗಳ ಪರಿಣಾಮಕಾರಿ ಅನುಷ್ಠಾನವು ಅಪಾಯಕ್ಕೆ ಸಿಲುಕುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ರಾಜ್ಯ ಸರ್ಕಾರವು ನ್ಯಾಯಾಲಯದ ಮೊರೆ ಹೋಗುತ್ತಿದ್ದಂತೆ, ರಾಜ್ಯಪಾಲರು ವಿಧಾನಸಭೆಯನ್ನು ಕರೆದರು ಎಂದು ರಾಜಭವನವನ್ನು ಪ್ರತಿನಿಧಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಗಮನಕ್ಕೆ ತಂದರು. ಪ್ರಸ್ತುತ ಸನ್ನಿವೇಶದಲ್ಲಿ ಆ ಕಾರ್ಯಗಳು ಈಗಾಗಲೇ ನಡೆದಿರುವುದರಿಂದ ರಾಜ್ಯದ ಅರ್ಜಿಯು ಅನ್ವಯಿಸುವುದಿಲ್ಲ ಎಂದು ಅವರು ಸೂಚಿಸಿದರು.

“ಒಂದೆಡೆ, ರಾಜ್ಯದ ಆಡಳಿತವನ್ನು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಮುಖ್ಯಮಂತ್ರಿಗೆ ವಹಿಸಲಾಗಿದೆ, ಅದು ಸಾಮೂಹಿಕ ಜವಾಬ್ದಾರಿಯನ್ನು ಒತ್ತಾಯಿಸುತ್ತದೆ, ಸರ್ಕಾರವು ನೇಮಿಸಿದ ಸಾಂವಿಧಾನಿಕ ಪ್ರಾಧಿಕಾರವಾಗಿ ರಾಜ್ಯಪಾಲರಿಗೆ ಮಾರ್ಗದರ್ಶನ ಮತ್ತು ಸಲಹೆ ನೀಡುವ ಕರ್ತವ್ಯವನ್ನು ವಹಿಸಲಾಗಿದೆ” ಎಂದು ಸಿಜೆಐ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ