ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ ಏಳು ಅಂಗಡಿಗಳ ಶಟರ್‌ಗಳನ್ನು ಮುರಿದು ಕಳ್ಳತನ ಮಾಡಲಾಗಿದೆ. ಕುಂಬಾರಪೇಟೆ, ಹಸನಾಪುರ, ಗಾಂಧಿ ವೃತ್ತಗಳಲ್ಲಿನ ಅಂಗಡಿಗಳು ಈ ಕಳ್ಳತನಕ್ಕೆ ಬಲಿಯಾಗಿವೆ. ಕಳ್ಳತನದ ಪ್ರಮಾಣ ಹೆಚ್ಚುತ್ತಿರುವುದರಿಂದ ನಾಗರಿಕರಲ್ಲಿ ಆತಂಕ ಹೆಚ್ಚಿದೆ. ಇತ್ತೀಚೆಗೆ ದೇವಾಪುರ ಮತ್ತು ಗಾಂಧಿ ವೃತ್ತದಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾದಗಿರಿ, ಮಾರ್ಚ್ 02: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಲಾಗಿದೆ. ಸುರುಪುರ ಪಟ್ಟಣದ ಕುಂಬಾರಪೇಟೆ, ಹಸನಾಪುರ, ಗಾಂಧಿ ವೃತ್ತ ಸೇರಿದಂತೆ ಹಲವು ಅಂಗಡಿಗಳಲ್ಲಿ ಕಳ್ಳತನವಾಗಿದೆ. ಸುರಪುರ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. 3 ತಿಂಗಳ ಹಿಂದೆ ದೇವಾಪುರ ಗ್ರಾಮದಲ್ಲೂ ಮನೆಗಳ್ಳತನವಾಗಿತ್ತು. 2 ತಿಂಗಳ ಹಿಂದೆ ಸುರಪುರದ ಗಾಂಧಿ ವೃತ್ತದಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Latest Videos