AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿಯ ವನತಾರ ಪ್ರಾಣಿ ಸಂರಕ್ಷಣಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಇದರ ವಿಶೇಷತೆಗಳು ಹಲವು

PM Narendra Modi visits Vantara: ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ನಿರ್ವಹಿಸುತ್ತಿರುವ ವನತಾರ ವನ್ಯಜೀವಿ ಸಂರಕ್ಷಣಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಿದ್ದಾರೆ. ಗುಜರಾತ್ ಭೇಟಿಯ ಭಾಗವಾಗಿ ಪ್ರಧಾನಿಗಳು ವನತಾರಗೆ ಹೋಗಿ ಬಂದಿದ್ದಾರೆ. ವನತಾರ 3,000 ಎಕರೆ ಪ್ರದೇಶದಲ್ಲಿದ್ದು, ಇಲ್ಲಿ ವಿವಿಧೆಡೆಯಿಂದ ರಕ್ಷಿಸಲಾದ ವನ್ಯಜೀವಿಗಳನ್ನು ಅರಣ್ಯ ಪರಿಸರದಲ್ಲಿ ಸೂಕ್ತ ಹಾರೈಕೆಯೊಂದಿಗೆ ಬೆಳೆಸಲಾಗುತ್ತಿದೆ.

ಅಂಬಾನಿಯ ವನತಾರ ಪ್ರಾಣಿ ಸಂರಕ್ಷಣಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಇದರ ವಿಶೇಷತೆಗಳು ಹಲವು
ವನತಾರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 02, 2025 | 3:50 PM

Share

ಅಹ್ಮದಾಬಾದ್, ಮಾರ್ಚ್ 2: ಅಂಬಾನಿ ಕುಟುಂಬದವರು ಸ್ಥಾಪಿಸಿ ನಿರ್ವಹಿಸುತ್ತಿರುವ ವನತಾರ ಪ್ರಾಣಿ ಸಂರಕ್ಷಣಾಲಯ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ (ಮಾ. 2) ಭೇಟಿ ನೀಡಿದ್ದಾರೆ. ಗುಜರಾತ್​ನ ಜಾಮನಗರ್ ಜಿಲ್ಲೆಯಲ್ಲಿರುವ ಈ ವನತಾರ ರಿಲಾಯನ್ಸ್ ಜಾಮನಗರ್ ರಿಫೈನರಿ ಕಾಂಪ್ಲೆಕ್ಸ್​ನ ವಿಶಾಲ ಪ್ರದೇಶದಲ್ಲಿ 3,000 ಎಕರೆ ಜಾಗದಲ್ಲಿ ನಿರ್ಮಿತವಾಗಿದೆ. ಮುಕೇಶ್ ಅಂಬಾನಿ ಅವರ ಕಿರಿಯ ಮಗ, ಕಳೆದ ವರ್ಷ ವಿವಾಹಿತರಾದ ಅನಂತ್ ಅಂಬಾನಿ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ಇರುವ ಕಾರ್ಯಕ್ರಮಗಳಲ್ಲಿ ವನತಾರ ಕೂಡ ಒಂದು. ಶನಿವಾರ ಗುಜರಾತ್​ಗೆ ಬಂದ ನರೇಂದ್ರ ಮೋದಿ ಅವರು ಸೋಮನಾಥ ಜಿಲ್ಲೆಯ ಸೋಮನಾಥ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ. ಅದೇ ಜಿಲ್ಲೆಯಲ್ಲಿರುವ ಗಿರ್ ವನ್ಯಜೀವಿಧಾಮದ ಬಳಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ನಾಳೆಯ ಕಾರ್ಯಕ್ರಮವಾಗಿದ್ದು, ಪ್ರಧಾನಿಳು ಜಂಗಲ್ ಸಫಾರಿಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಭಾರತದ ಈ ಡ್ರೋನ್ ಯೋಜನೆ ಮೆಚ್ಚಿದ ಎಂಐಟಿ ಪ್ರೊಫೆಸರ್; ಡ್ರೋನ್ ದೀದಿಯರೊಂದಿಗೆ ಜೆ ಫ್ಲೆಮಿಂಗ್ ಸಂವಾದ

ವನತಾರಗೆ ಪ್ರಾಣಿಮಿತ್ರ ಪ್ರಶಸ್ತಿ… ಈ ಪ್ರಾಣಿ ಸಂರಕ್ಷಣಾಲಯದ ವಿಶೇಷತೆಗಳು ಹಲವು…

ಅನಂತ್ ಅಂಬಾನಿ ಸ್ಥಾಪಿಸಿದ ವನತಾರ ಪ್ರಾಣಿ ಸಂರಕ್ಷಣಾಲಯದ ಕಾರ್ಯಗಳನ್ನು ಗುರುತಿಸಿ ‘ಪ್ರಾಣಿಮಿತ್ರ’ ಎನ್ನುವ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ವನತಾರದ ಭಾಗವಾದ ರಾಧೇಕೃಷ್ಣ ಟೆಂಪಲ್ ಎಲಿಫ್ಯಾಂಟ್ ವೆಲ್​ಫೇರ್ ಟ್ರಸ್ಟ್​ಗೆ ಈ ಪ್ರಶಸ್ತಿ ಕೊಡಲಾಗಿದೆ.

ವನತಾರದಲ್ಲಿ ಆನೆ ಪಾಲನೆಗೆ ಪ್ರತ್ಯೇಕ ಕೇಂದ್ರ ಇದ್ದು, ಅದರಲ್ಲಿ ವಿವಿಧೆಡೆಯಿಂದ ಪ್ರಾಣಾಪಾಯದಿಂದ ಪಾರು ಮಾಡಲಾದ 240 ಆನೆಗಳಿಗೆ ಆಶ್ರಮ ಕೊಡಲಾಗಿದೆ. ಸರ್ಕಸ್, ಕಟ್ಟಿಗೆ ಉದ್ದಿಮೆ, ಪ್ರವಾಸಿಗರ ಸೇವೆ ಇತ್ಯಾದಿ ಕಾರ್ಯಗಳಿಗೆ ಬಂಧಿಯಾಗಿದ್ದ ಆನೆಗಳನ್ನು ಸಂರಕ್ಷಿಸಿ, ವನತಾರದ ಈ ಪ್ರದೇಶದಲ್ಲಿ ಸ್ವಾಭಾವಿಕ ಪರಿಸರದಲ್ಲಿ ವಾಸಿಸಲು ಅನುಕೂಲ ಮಾಡಿಕೊಡಲಾಗಿದೆ. ಅರಣ್ಯ ಪ್ರದೇಶದೊಳಗೆಯೇ, 998 ಎಕರೆ ಜಾಗದಲ್ಲಿ ಆನೆಗಳ ಸ್ವಚ್ಛಂದ ವಾಸಕ್ಕೆ ಏರ್ಪಾಡು ಮಾಡಲಾಗಿದೆ.

ಇದನ್ನೂ ಓದಿ: ಆ್ಯಪಲ್ ಉತ್ಪನ್ನಗಳಿಗಾಗಿ, ಚೀನಾ, ವಿಯೆಟ್ನಾಂಗೆ ಭಾರತದಿಂದ ಎಲೆಕ್ಟ್ರಾನಿಕ್ ಬಿಡಿಭಾಗಗಳ ಪೂರೈಕೆ

ಈ ಆನೆ ಪಾಲನಾ ಕೇಂದ್ರದ 998 ಎಕರೆಯೂ ಸೇರಿ ವನತಾರದ ವಿಸ್ತಾರ 3,000 ಎಕರೆಯಷ್ಟಿದೆ. ಆನೆಗಳು ಮಾತ್ರವಲ್ಲ, ಅಕ್ರಮವಾಗಿ ಬಂಧಿಯಾದ ಯಾವುದೇ ವನ್ಯಜೀವಿಗಳಿಗೂ ಇಲ್ಲಿ ಸಂರಕ್ಷಣೆಯ ವ್ಯವಸ್ಥೆ ಇದೆ. ಔಷಧೋಪಚಾರ, ಪುನರ್ನೆಲೆ ಇವೆಲ್ಲವನ್ನೂ ವನತಾರದಲ್ಲಿ ಮಾಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Sun, 2 March 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!