AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಈ ಡ್ರೋನ್ ಯೋಜನೆ ಮೆಚ್ಚಿದ ಎಂಐಟಿ ಪ್ರೊಫೆಸರ್; ಡ್ರೋನ್ ದೀದಿಯರೊಂದಿಗೆ ಜೆ ಫ್ಲೆಮಿಂಗ್ ಸಂವಾದ

Namo drone didi scheme: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಮತ್ತು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಸರ್ಕಾರ ರೂಪಿಸಿದ ನಮೋ ಡ್ರೋನ್ ದೀದಿ ಯೋಜನೆಯನ್ನು ಅಮೆರಿಕದ ಎಂಐಟಿ ಪ್ರೊಫೆಸರ್ ಜೋನೇತನ್ ಫ್ಲೆಮಿಂಗ್ ಮೆಚ್ಚಿಕೊಂಡಿದ್ದಾರೆ. ದೆಹಲಿಯ ಐಸಿಎಆರ್ ಕ್ಯಾಂಪಸ್​ನಲ್ಲಿ ಸ್ವತಃ ಡ್ರೋನ್ ಕಾರ್ಯಾಚರಣೆಯನ್ನು ವೀಕ್ಷಿಸಿದ ಅವರು, ಈ ಯೋಜನೆ ಇತರ ದೇಶಗಳಿಗೂ ಮಾದರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಈ ಡ್ರೋನ್ ಯೋಜನೆ ಮೆಚ್ಚಿದ ಎಂಐಟಿ ಪ್ರೊಫೆಸರ್; ಡ್ರೋನ್ ದೀದಿಯರೊಂದಿಗೆ ಜೆ ಫ್ಲೆಮಿಂಗ್ ಸಂವಾದ
ಡ್ರೋನ್ ದೀದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 02, 2025 | 12:05 PM

Share

ನವದೆಹಲಿ, ಮಾರ್ಚ್ 2: ಭಾರತದಲ್ಲಿ ಡ್ರೋನ್ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಸರ್ಕಾರ ರೂಪಿಸಿದ ಹಲವು ಯೋಜನೆಗಳಲ್ಲಿ ನಮೋ ಡ್ರೋನ್ ದೀದಿ ಸ್ಕೀಮ್ ಒಂದು. ಕೃಷಿ ಕ್ಷೇತ್ರಕ್ಕೆ ಡ್ರೋನ್ ಸೇವೆ ನೀಡುವುದು ಮಾತ್ರವಲ್ಲದೇ, ಮಹಿಳಾ ಸಬಲೀಕರಣದ ಪ್ರಯತ್ನಕ್ಕೂ ಈ ಯೋಜನೆ ಪೂರಕವಾಗಿದೆ. ಈ ನಮೋ ಡ್ರೋನ್ ದೀದಿ ಯೋಜನೆಯನ್ನು ಅಮೆರಿಕದ ಪ್ರತಿಷ್ಠಿತ ಎಂಐಟಿ (ಮಸಾಚುಸೆಟ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ) ಶಿಕ್ಷಣ ಸಂಸ್ಥೆಯ ಪ್ರೊಫೆಸರ್ ಜೋನೇತನ್ ಫ್ಲೆಮಿಂಗ್ ಪ್ರಶಂಸೆ ವ್ಯಕ್ತಪಡಿಸಿದರು. ದೆಹಲಿಯ ಐಸಿಎಆರ್ ಪುಸಾ ಕ್ಯಾಂಪಸ್​ನಲ್ಲಿ ನಮೋ ಡ್ರೋನ್ ದೀದಿಯವರೊಂದಿಗೆ ನಿನ್ನೆ (ಶನಿವಾರ) ಸಂವಾದದಲ್ಲಿ ತೊಡಗಿದ್ದ ಫ್ಲೆಮಿಂಗ್, ಭಾರತದಲ್ಲಿ ಮಹಿಳಾ ಸಬಲೀಕರಣ ಸಾಧಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಮೆಚ್ಚಿಕೊಂಡರು.

ಹೊಸ ತಂತ್ರಜ್ಞಾನ ಬಳಕೆಗೆ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿರುವ ಪ್ರಕ್ರಿಯೆ ಬಗ್ಗೆ ಜೋನೇತನ್ ಫ್ಲೆಮಿಂಗ್ ಸಕಾರಾತ್ಮಕ ಅನಿಸಿಕೆ ವ್ಯಕ್ತಪಡಿಸಿದರು. ಭಾರತದ ಗ್ರಾಮೀಣ ಪ್ರದೇಶದ ಅಭಿವೃದ್ಧಿಪಡಿಸಲು ಸಹಕಾರಿಯಾಗಿರುವ ಹಾಗು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಈ ಉಪಕ್ರಮವು ಇತರ ದೇಶಗಳಿಗೂ ಉತ್ತಮ ಮಾದರಿಯಾಗಿದೆ ಎಂಬುದು ಎಂಐಟಿ ಪ್ರೊಫೆಸರ್ ಅಭಿಪ್ರಾಯ.

ಡ್ರೋನ್ ಬಳಕೆ ಬಗ್ಗೆ ದೀದಿಯರೊಂದಿಗೆ ಪ್ರೊಫೆಸರ್ ಸಂವಾದ

ಕೃಷಿ ಕಾರ್ಯಗಳಿಗೆ ಡ್ರೋನ್ ಬಳಕೆ ಹೇಗೆ ಮಾಡಲಾಗುತ್ತದೆ ಎಂಬುದನ್ನು ಡ್ರೋನ್ ದೀದಿಯರು ಜೋನೇತನ್ ಫ್ಲೆಮಿಂಗ್ ಅವರಿಗೆ ಈ ವೇಳೆ ವಿವರಿಸಿದರು. ಕೃಷಿ ಜಮೀನಿನಲ್ಲಿ ಬೆಳೆಗಳಿಗೆ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದು ತುಸು ಕಷ್ಟದ ಕೆಲಸ. ಡ್ರೋನ್ ಮೂಲಕ ಇವುಗಳನ್ನು ಬೆಳೆಗಳಿಗೆ ಹೇಗೆ ಸಿಂಪಡಿಸಲಾಗುತ್ತದೆ. ಇದರಿಂದ ರೈತರಿಗೆ ಕೂಲಿಗೆ ವೆಚ್ಚ ಮಾಡುವುದು ಹೇಗೆ ತಪ್ಪುತ್ತದೆ ಎಂಬುದನ್ನು ಡ್ರೋನ್ ದೀದಿಯರು ಎಂಐಟಿ ಪ್ರೊಫೆಸರ್​ಗೆ ತಿಳಿಸಿದರು. ಗೀತಾ, ಸೀತಾ, ಪ್ರಿಯಾಂಕಾ ಮತ್ತು ಹೇಮಲತಾ ಎನ್ನುವ ಡ್ರೋನ್ ದೀದಿಯರು ಡ್ರೋನ್ ಬಳಕೆ ಹೇಗೆಂದು ಸ್ವತಃ ಪ್ರಯೋಗ ಮಾಡಿ ತೋರ್ಪಡಿಸಿದರು.

ಇದನ್ನೂ ಓದಿ: ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಿಕ್ಕಿದ ಒಟ್ಟು ಜಿಎಸ್​ಟಿ 1.84 ಲಕ್ಷ ಕೋಟಿ ರೂ; ಶೇ 9.1 ಹೆಚ್ಚು ಸಂಗ್ರಹ

ಡ್ರೋನ್ ದೀದಿಯರೊಂದಿಗೆ ಸಂವಾದದ ಬಳಿಕ ಜೋನೇತನ್ ಫ್ಲೆಮಿಂಗ್ ಅವರು ದೆಹಲಿಯ ಐಆರ್​ಎಐನಲ್ಲೇ ಇರುವ ಡ್ರೋನ್ ರೋಬೋಟಿಕ್ ಮತ್ತು ಮೆಷಿನ್ ಲರ್ನಿಂಗ್ ಕೇಂದ್ರಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿ ಸಾಂಪ್ರದಾಯಿಕ ಕೃಷಿಗಾರಿಕೆಗೂ, ತಂತ್ರಜ್ಞಾನ ಬಳಕೆಯಾಧಾರಿತ ಕೃಷಿಗಾರಿಕೆಗೂ ಇರುವ ವ್ಯತ್ಯಾಸವನ್ನು ತೋರಿಸಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ