ಓ ಮೈ ಗಾಡ್..! ಫಿಲಿಪ್ಸ್ ಹಿಡಿದ ಕ್ಯಾಚ್ಗೆ ದಂಗಾದ ಅನುಷ್ಕಾ; ರಿಯಾಕ್ಷನ್ ವಿಡಿಯೋ ವೈರಲ್
IND vs NZ: ವಿರಾಟ್ ಕೊಹ್ಲಿಯ 300ನೇ ಏಕದಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಆಗಮಿಸಿದ್ದ ಪತ್ನಿ ಅನುಷ್ಕಾ ಶರ್ಮಾಗೆ ಆಘಾತ ಎದುರಾಗಿದೆ. ಕಿವೀಸ್ ಫಿಲ್ಡರ್ ಗ್ಲೆನ್ ಫಿಲಿಪ್ಸ್ ಹಿಡಿದ ಅತ್ಯದ್ಭುತ ಕ್ಯಾಚ್ಗೆ ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಬೇಗನೇ ಅಂತ್ಯವಾಯಿತು. ಫಿಲಿಪ್ಸ್ ಹಿಡಿದ ಕ್ಯಾಚ್ಗೆ ಅನುಷ್ಕಾ ಜೊತೆಗೆ ಸ್ವತಃ ವಿರಾಟ್ ಕೊಹ್ಲಿ ಕೂಡ ಅಚ್ಚರಿ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವಿರಾಟ್ ಕೊಹ್ಲಿಗೆ ಬಹಳ ವಿಶೇಷವಾಗಿತ್ತು. ಏಕೆಂದರೆ ಈ ಪಂದ್ಯ ಏಕದಿನ ಮಾದರಿಯಲ್ಲಿ ಕೊಹ್ಲಿಯ 300ನೇ ಪಂದ್ಯವಾಗಿತ್ತು. ಹೀಗಾಗಿ ಕೊಹ್ಲಿ ಕೂಡ ಈ ಪಂದ್ಯವನ್ನು ವಿಶೇಷಗೊಳಿಸಲು ಅಖಾಡಕ್ಕಿಳಿದಿದ್ದರು. ಇದಕ್ಕೆ ಪೂರಕವಾಗಿ ಕೊಹ್ಲಿ ಆರಂಭದಲ್ಲೇ 2 ಬೌಂಡರಿ ಬಾರಿಸಿ ಉತ್ತಮ ಆರಂಭ ಪಡೆದುಕೊಂಡಿದ್ದರು. ಆದರೆ ಕಿವೀಸ್ ಫಿಲ್ಡರ್ ಗ್ಲೆನ್ ಫಿಲಿಪ್ಸ್ ಹಿಡಿದ ಅತ್ಯದ್ಭುತ ಕ್ಯಾಚ್ಗೆ ಕೊಹ್ಲಿಯ ಇನ್ನಿಂಗ್ಸ್ ಅಂತ್ಯವಾಯಿತು. ಫಿಲಿಪ್ಸ್ ಹಿಡಿದ ಕ್ಯಾಚ್ ಹೇಗಿತ್ತೆಂದರೆ ಸ್ವತಃ ಕೊಹ್ಲಿಗೆ ಇದನ್ನು ನಂಬಲಾಗಲಿಲ್ಲ. ಇತ್ತ ಇಡೀ ಕ್ರೀಡಾಂಗಣವೇ ಕೊಹ್ಲಿ ವಿಕೆಟ್ ಬಿದ್ದ ಬಳಿಕ ಸ್ತಬ್ದವಾಯಿತು. ಪತಿಯ 300ನೇ ಪಂದ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಕೊಹ್ಲಿ ಪತ್ನಿ ಅನುಷ್ಕಾ ಕೂಡ ಒಂದು ಕ್ಷಣ ದಂಗಾಗಿ ನಿಂತರು. ಫಿಲಿಪ್ಸ್ ಹಿಡಿದ ಕ್ಯಾಚ್ಗೆ ಅಚ್ಚರಿ ಕೂಡ ವ್ಯಕ್ತಪಡಿಸಿದರು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.