ವಿವಿ ಗ್ಯಾರೇಜ್‌ನಲ್ಲಿ ಹೈದರಾಬಾದ್‌ ವಿದ್ಯಾರ್ಥಿನಿ ರೇಪ್ ಅಂಡ್ ಮರ್ಡರ್

|

Updated on: Nov 26, 2019 | 2:05 PM

ಹೈದರಾಬಾದ್: ಅಮೆರಿಕದಲ್ಲಿ ಇಲಿನಾಯ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನ ದಾರುಣವಾಗಿ ಕೊಲೆ ಮಾಡಲಾಗಿದೆ. 19 ವರ್ಷದ ರೂತ್ ಜಾರ್ಜ್ ಹತ್ಯೆಯಾದವರು. ಇವರು ಹೈದರಾಬಾದ್‌ ಮೂಲದ ನಿವಾಸಿ. ಕಳೆದ ಶನಿವಾರ ಮಧ್ಯರಾತ್ರಿ ನಡೆದಿರುವ ಈ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಯೂನಿವರ್ಸಿಟಿಯ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ರೂತ್ ಜಾರ್ಜ್ ಶವ ಪತ್ತೆಯಾಗಿದೆ. ಡೊನಾಲ್ಡ್ ಡಿ ತುರಮಾನ್ ವಿರುದ್ಧ ಅತ್ಯಾಚಾರವೆಸಗಿ ಬರ್ಬರ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಇನ್ನು ಮೃತ ರೂತ್ ಜಾರ್ಜ್ ಅಮೆರಿಕದ ಯೂನಿವರ್ಸಿಟಿ ಆಫ್ ಇಲಿನಾಯ್​ನಲ್ಲಿ ಮಾನವ ದೇಹಾಂಗಗಳ ಚಲನವಲನ […]

ವಿವಿ ಗ್ಯಾರೇಜ್‌ನಲ್ಲಿ ಹೈದರಾಬಾದ್‌ ವಿದ್ಯಾರ್ಥಿನಿ ರೇಪ್ ಅಂಡ್ ಮರ್ಡರ್
Follow us on

ಹೈದರಾಬಾದ್: ಅಮೆರಿಕದಲ್ಲಿ ಇಲಿನಾಯ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನ ದಾರುಣವಾಗಿ ಕೊಲೆ ಮಾಡಲಾಗಿದೆ. 19 ವರ್ಷದ ರೂತ್ ಜಾರ್ಜ್ ಹತ್ಯೆಯಾದವರು. ಇವರು ಹೈದರಾಬಾದ್‌ ಮೂಲದ ನಿವಾಸಿ. ಕಳೆದ ಶನಿವಾರ ಮಧ್ಯರಾತ್ರಿ ನಡೆದಿರುವ ಈ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಯೂನಿವರ್ಸಿಟಿಯ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ರೂತ್ ಜಾರ್ಜ್ ಶವ ಪತ್ತೆಯಾಗಿದೆ. ಡೊನಾಲ್ಡ್ ಡಿ ತುರಮಾನ್ ವಿರುದ್ಧ ಅತ್ಯಾಚಾರವೆಸಗಿ ಬರ್ಬರ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.

ಇನ್ನು ಮೃತ ರೂತ್ ಜಾರ್ಜ್ ಅಮೆರಿಕದ ಯೂನಿವರ್ಸಿಟಿ ಆಫ್ ಇಲಿನಾಯ್​ನಲ್ಲಿ ಮಾನವ ದೇಹಾಂಗಗಳ ಚಲನವಲನ ಬಗ್ಗೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಜೊತೆಗೆ ಕಾಲೇಜಿನಲ್ಲಿ ಜಿಮ್ನಾಸ್ಟಿಕ್ ಪಟು ಆಗಿದ್ದರು. ಕೃತ್ಯ ನಡೆದ ದಿನದಿಂದ ನಾಪತ್ತೆಯಾಗಿದ್ದರು. ಮಗಳ ಸಂಪರ್ಕ ಸಿಗದ ಕುಟುಂಬಸ್ಥರು ಪೊಲೀಸರಿಗೆ ಕಂಪ್ಲೆಂಟ್ ನೀಡಿದ್ದಾರೆ. ಮಾಹಿತಿ ಸಂಗ್ರಹಿಸಲು ಮುಂದಾದ ಪೊಲೀಸರು ಸಂತ್ರಸ್ತೆಯ ಮೊಬೈಲ್ ಟ್ರೇಸ್ ಮಾಡುವ ಮೂಲಕ ಯೂನಿವರ್ಸಿಟಿಯ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ರೂತ್ ಜಾರ್ಜ್ ಶವ ಪತ್ತೆ ಹಚ್ಚಿದ್ದಾರೆ. ನಂತರ ಸಿಸಿಟಿವಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ, ಬಂಧಿಸಲಾಗಿದೆ. ಬಂಧನದ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಹೇಳಿದ್ದಾನೆ.

ಆರೋಪಿ ಹಿನ್ನೆಲೆ:
ಆರೋಪಿ ಡೊನಾಲ್ಡ್ ಡಿ ತುರಮಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಅಲ್ಲ ಮತ್ತು ಸಂತ್ರಸ್ತೆಗೆ ಪರಿಚಿತನೂ ಅಲ್ಲ. ಈತ 2015ರಲ್ಲಿ ದರೋಡೆ ಪ್ರಕರಣದಲ್ಲಿ 6 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದ. ಈತ ಪೆರೋಲ್ ಮೇಲೆ ಹೊರಗೆ ಬಂದಿದ್ದ. ಈ ವೇಳೆ ಈ ಕೃತ್ಯ ಎಸಗಿದ್ದಾನೆ.