ಸೆಪ್ಟೆಂಬರ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡು ನಾಪತ್ತೆಯಾಗಿದ್ದ ಭಾರತೀಯ ಕೋಸ್ಟ್ ಗಾರ್ಡ್ ಪೈಲಟ್ ಅವರ ಮೃತದೇಹ ಗುಜರಾತ್ ಕರಾವಳಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್‌ನ ಹೆಲಿಕಾಪ್ಟರ್ ತಡರಾತ್ರಿ ಗುಜರಾತ್ ಬಳಿ ಅರಬ್ಬಿ ಸಮುದ್ರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಮೂವರು ಸಿಬ್ಬಂದಿ ನಾಪತ್ತೆಯಾಗಿದ್ದರು. ರಾತ್ರಿ 11 ಗಂಟೆಯ ನಂತರ ಸಂಭವಿಸಿದ ಘಟನೆಯ ನಂತರ ಒಬ್ಬ ಸದಸ್ಯನನ್ನು ರಕ್ಷಿಸಲಾಗಿತ್ತು.
ತುರ್ತು ಲ್ಯಾಂಡಿಂಗ್ ಮಾಡಿದ್ದು, ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಎಂದು ಕೋಸ್ಟ್ ಗಾರ್ಡ್ ಹೇಳಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ಪೋರಬಂದರ್‌ನ ಮೋಟಾರು ಟ್ಯಾಂಕರ್ ಹರಿ ಲೀಲಾದಿಂದ ಸ್ಥಳಾಂತರಿಸಲಾಗಿದೆ.
ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು. ಇದೀಗ ನಾಪತ್ತೆಯಾಗಿರುವ ಮೂವರ ಪೈಕಿ ಒಬ್ಬರ ಮೃತದೇಹ ಗುಜರಾತ್‌ನ ಕರಾವಳಿಯಲ್ಲಿ ಪತ್ತೆಯಾಗಿದೆ.
ಮತ್ತಷ್ಟು ಓದಿ: ಪುಣೆಯಲ್ಲಿ ಮೂವರಿದ್ದ ಹೆಲಿಕಾಪ್ಟರ್ ಪತನ, ಎಲ್ಲರೂ ಸಾವು
ಅಪಘಾತದ ನಂತರ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯು ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಆದರೆ ಅವರು ಒಂದು ತಿಂಗಳ ಕಾಲ ರಾಣಾನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಗುಜರಾತ್‌ನ ಪೋರಬಂದರ್‌ನಿಂದ ನೈಋತ್ಯಕ್ಕೆ 55 ಕಿಲೋಮೀಟರ್ ದೂರದಲ್ಲಿ ರಾಣಾ ಅವರ ಅವಶೇಷಗಳು ಗುರುವಾರ ಪತ್ತೆಯಾಗಿವೆ. ಸಂಪೂರ್ಣ ಸೇನಾ ಗೌರವಗಳೊಂದಿಗೆ ಶವಸಂಸ್ಕಾರ ಮಾಡಲಾಗುವುದು ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ