Breaking: ಪುಣೆಯಲ್ಲಿ ಮೂವರಿದ್ದ ಹೆಲಿಕಾಪ್ಟರ್ ಪತನ, ಎಲ್ಲರೂ ಸಾವು
ಪುಣೆಯ ಬವ್ಧಾನ್ ಪ್ರದೇಶದಲ್ಲಿ ಮೂವರಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪುಣೆಯ ಬವ್ಧಾನ್ ಪ್ರದೇಶದಲ್ಲಿ ಮೂವರಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು, ಅಗ್ನಿಶಾಮಕ ದಳ ಹಾಗೂ ವಿಪತ್ತು ಪರಿಹಾರ ದಳ ಸ್ಥಳಕ್ಕೆ ಧಾವಿಸಿದೆ. ಬೆಳಗ್ಗೆ ಏಳು ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
Maharashtra | Two people feared dead in a helicopter crash near Bavdhan in Pune district. Two ambulances and four fire tenders present at the spot.
(Pic Source: Pune Fire Department) https://t.co/3iuStSLkgL pic.twitter.com/mp09RSpP7m
— ANI (@ANI) October 2, 2024
ಮಂಜು ಈ ಅವಘಡಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ತನಿಖೆಯ ನಂತರವಷ್ಟೇ ಘಟನೆಗೆ ನಿಜವಾದ ಕಾರಣ ತಿಳಿಯಲಿದೆ. ಅಪಘಾತದ ನಂತರ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ, ಇದರಿಂದಾಗಿ ಮೂವರ ದೇಹವೂ ಸುಟ್ಟು ಕರಕಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆಯೂ ಆದೇಶ ನೀಡಲಾಗಿದೆ. ಈ ತನಿಖೆಯ ನಂತರವಷ್ಟೇ ಘಟನೆಗೆ ನಿಜವಾದ ಕಾರಣ ತಿಳಿಯಲಿದೆ.
ಇದು ಯಾರ ಹೆಲಿಕಾಪ್ಟರ್ ಎಂಬುದು ಇನ್ನೂ ತಿಳಿದುಬಂದಿಲ್ಲ. ಹೆಲಿಕಾಪ್ಟರ್‌ನಲ್ಲಿನ ಬೆಂಕಿಯನ್ನು ಇನ್ನೂ ನಂದಿಸಲಾಗಿಲ್ಲ. ಕಳೆದ 40 ದಿನಗಳಲ್ಲಿ ಪುಣೆಯಲ್ಲಿ ಇದು ಎರಡನೇ ಘಟನೆಯಾಗಿದೆ.
ಈ ಹಿಂದೆ ಆಗಸ್ಟ್ 24 ರಂದು ಪುಣೆಯ ಪೌಡ್ ಪ್ರದೇಶದಲ್ಲಿ ಇದೇ ರೀತಿಯ ಹೆಲಿಕಾಪ್ಟರ್ ಪತನವಾಗಿತ್ತು. ಆಗ ಈ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು. ಪೈಲಟ್ ಮತ್ತು ಇತರ ಮೂವರು ಪ್ರಯಾಣಿಕರು ಸಹ ವಿಮಾನದಲ್ಲಿದ್ದರು. ಅಪಘಾತದಲ್ಲಿ ಪೈಲಟ್ ಗಾಯಗೊಂಡಿದ್ದಾರೆ. ಆದರೆ, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿರಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:03 am, Wed, 2 October 24