ಫೇಲ್ ಆಗಿರುವ ಎಂಬಿಬಿಎಸ್ ವಿದ್ಯಾರ್ಥಿಯಿಂದ ಚಿಕಿತ್ಸೆ, ಹೃದ್ರೋಗಿ ಸಾವು
ಫೇಲ್ ಆಗಿರುವ ಎಂಬಿಬಿಎಸ್ ವಿದ್ಯಾರ್ಥಿ ನೀಡಿರುವ ಚಿಕಿತ್ಸೆಯಿಂದ ಹೃದ್ರೋಗಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೋಳಿಕ್ಕೋಡ್ನಲ್ಲಿ ಘಟನೆ ನಡೆದಿದೆ, ಎಂಬಿಬಿಎಸ್ನ ಎರಡನೇ ವರ್ಷವನ್ನು ಇನ್ನೂ ಪೂರ್ಣಗೊಳಿಸದ ವಿದ್ಯಾರ್ಥಿಯೊಬ್ಬ 60 ವರ್ಷದ ಹೃದ್ರೋಗಿಗೆ ಚಿಕಿತ್ಸೆ ನೀಡಿದ್ದು ರೋಗಿ ಸಾವನ್ನಪ್ಪಿದ್ದಾರೆ.

ಫೇಲ್ ಆಗಿರುವ ಎಂಬಿಬಿಎಸ್ ವಿದ್ಯಾರ್ಥಿ ನೀಡಿರುವ ಚಿಕಿತ್ಸೆಯಿಂದ ಹೃದ್ರೋಗಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೋಳಿಕ್ಕೋಡ್ನಲ್ಲಿ ಘಟನೆ ನಡೆದಿದ್ದು, ಎಂಬಿಬಿಎಸ್ನ ಎರಡನೇ ವರ್ಷವನ್ನು ಇನ್ನೂ ಪೂರ್ಣಗೊಳಿಸದ ವಿದ್ಯಾರ್ಥಿಯೊಬ್ಬ 60 ವರ್ಷದ ಹೃದ್ರೋಗಿಗೆ ಚಿಕಿತ್ಸೆ ನೀಡಿದ್ದು ರೋಗಿ ಸಾವನ್ನಪ್ಪಿದ್ದಾರೆ.
ಕೋಳಿಕ್ಕೋಡ್ನ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ವಿನೋದ್ ಕುಮಾರ್ ಎಂಬ ರೋಗಿ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 23ರಂದು ಈ ಘಟನೆ ನಡೆದಿದೆ. ಅಬು ಅಬ್ರಹಾಂ ಲ್ಯೂಕ್ ಎನ್ನುವವರು ತನ್ನ ವೈದ್ಯಕೀಯ ಶಿಕ್ಷಣವನ್ನು ಇನ್ನೂ ಪೂರ್ಣಗೊಳಿಸದಿದ್ದರೂ ಚಿಕಿತ್ಸೆ ನೀಡಿ ರೋಗಿಯ ಸಾವಿಗೆ ಕಾರಣರಾಗಿದ್ದಾರೆ.
ತೀವ್ರ ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿನೋದ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅವರ ಮಗ ಡಾ ಅಶ್ವಿನ್ ಪಚಾಟ್ ವಿನೋದ್, ತನ್ನ ತಂದೆಯ ಸಾವಿಗೆ ಕಾರಣನಾದವನು ಅನುತ್ತೀರ್ಣ ಎಂಬಿಬಿಎಸ್ ವಿದ್ಯಾರ್ಥಿ ಎಂದು ತಿಳಿದು ಆಘಾತಕ್ಕೊಳಗಾಗಿದ್ದಾರೆ.
ಮತ್ತಷ್ಟು ಓದಿ: ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ ನಕಲಿ ವೈದ್ಯ, ಬಾಲಕ ಸಾವು
ನಾನು ಅದೇ ದಿನ ಚಂಡೀಗಢದಿಂದ ಕೋಳಿಕ್ಕೋಡ್ಗೆ ಹೋಗಿದ್ದೆ, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ತನಿಖೆ ಪ್ರಾರಂಭಿಸಿದ್ದೇವೆ. ಅಬು ಅಬ್ರಾಹಂ ಲ್ಯೂಕ್ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿಲ್ಲ, ಕಳೆದ 12 ವರ್ಷಗಳಲ್ಲಿ ತಮ್ಮ ಎರಡನೇ ವರ್ಷದ ಎಂಬಿಬಿಎಸ್ ವಿಷಯಗಳಲ್ಲಿ ಅವರು ಉತ್ತೀರ್ಣರಾಗಲು ಸಾಧ್ಯವಾಗಿಲ್ಲ. ನಾನು ಕೂಡ ವೈದ್ಯ ತಂದೆಯ ಕೊನೆಯ ಕ್ಷಣದಲ್ಲಿ ಅವರಿಗೆ ಚಿಕಿತ್ಸೆ ಕೊಟ್ಟು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವ ನೋವು ಕಾಡುತ್ತಿದೆ ಎಂದರು.
ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಅಬು ಅಬ್ರಹಾಂನನ್ನು ಅವರನ್ನು ಬಂಧಿಸಲಾಗಿದೆ ಎಂದು ಅಶ್ವಿನ್ ಪಚಾಟ್ ವಿನೋದ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅಶ್ವಿನ್ ಪಚ್ಚಾಟ್ ವಿನೋದ್, ನನ್ನ ತಂದೆಗೆ ಆದ ಗತಿ ಬೇರೆಯವರಿಗೆ ಬಾರದಂತೆ ನೋಡಿಕೊಳ್ಳುವುದು ನನ್ನ ಗುರಿಯಾಗಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




