Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ

|

Updated on: Jun 05, 2023 | 2:20 PM

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು

Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ
ಕೊರಿಯನ್ ಕುಟುಂಬ
Follow us on

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕೊರಿಯನ್ ದಂಪತಿ ತಮ್ಮ ಮಗಳೊಂದಿಗೆ ಇತ್ತೀಚೆಗೆ ಆಗ್ರಾದಲ್ಲಿರುವ ತಾಜ್​ ಮಹಲ್​ಗೆ ಭೇಟಿ ನೀಡಿದ್ದಾರೆ, ಕೊರಿಯನ್ ದಂಪತಿ ಮಧ್ಯೆ ಭಾರತೀಯ ಉಡುಗೆಯಲ್ಲಿರುವ ಯುವತಿಯನ್ನು ನೀವು ಈ ಫೋಟೊದಲ್ಲಿ ಕಾಣಬಹುದು.
ಆ ಯುವತಿಯು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದು, ಅದರಲ್ಲಿ ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎಂದು ಬರೆದಿದ್ದಳು. ಕೊರಿಯನ್ ಪೋಷಕರ ಭಾರತದ ಮಗಳು ಎಂದರ್ಥ. ಅಂದರೆ ತಾನು ಭಾರತೀಯಳು ಎಂದು ಆಕೆ ಹೇಳಿಕೊಂಡಿದ್ದಾರೆ.

ಆಕೆ ಫೋಟೊದಲ್ಲಿ ಗುಲಾಬಿ ಬಣ್ಣದ ಸಲ್ವಾರ್ ಧರಿಸಿದ್ದಾಳೆ, ಹಿಂದೆ ಭವ್ಯವಾದ ತಾಜ್ ಮಹಲ್ ಇದೆ ಅಕ್ಕ ಪಕ್ಕ ಆಕೆಯ ತಂದೆ-ತಾಯಿ ಇದ್ದಾರೆ.
ಎಷ್ಟೋ ದಿನದ ಕನಸು ಇದಾಗಿತ್ತು, ನನ್ನ ಪೋಷಕರಿಗೆ ಇನ್​ಕ್ರೆಡಿಬಲ್ ಇಂಡಿಯಾವನ್ನು ತೋರಿಸಿದ್ದೇನೆ. ಭಾರತ ಅವರಿಗೂ ಇಷ್ಟ.

ಮತ್ತಷ್ಟು ಓದಿ: Taj Mahal: ತಾಜ್ ಮಹಲ್​ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ; ಸುಪ್ರೀಂ ಕೋರ್ಟ್​ ಆದೇಶ

ಖೂಬ್ಸೂರತ್ ತಾಜ್​ ಮಹಲ್​ ಕೆ ಸಾಥ್ ಸುಂದರ್ ಗುಲಾಬಿ ಕುರ್ತಿ ಅಚ್ಚಾ ಹೈ ನಾ (ಸುಂದರವಾದ ತಾಜ್​ ಮಹಲ್ ಎದುರು ಗುಲಾಬಿ ಕುರ್ತಿ ಸುಂದರವಾಗಿ ಕಾಣಿಸುತ್ತಿದೆ ಅಲ್ಲವೇ?) ಎಂದು ಬರೆದುಕೊಂಡಿದ್ದಾರೆ. ಆಕೆ ಭಾರತ-ಕೊರಿಯನ್ ಮಗಳು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಆಕೆ ಇದಕ್ಕೂ ಮುನ್ನ ಆಕೆ ಹಿಂದಿ ಕಲಿಯುವ ಸಾಕಷ್ಟು ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ