Indian Fishermen: ಅಟ್ಟಾರಿ-ವಾಘಾ ಗಡಿಯಲ್ಲಿ 200 ಭಾರತೀಯ ಮೀನುಗಾರರನ್ನು ಭಾರತಕ್ಕೆ ಹಸ್ತಾಂತರಿಸಿದ ಪಾಕಿಸ್ತಾನ

|

Updated on: Jun 03, 2023 | 3:09 PM

ಪಾಕಿಸ್ತಾನವು ತನ್ನ ಸೆರೆಯಲ್ಲಿದ್ದ 200 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ, ಅಟ್ಟಾರಿ-ವಾಘಾ ಗಡಿಯಲ್ಲಿರುವ ಜಂಟಿ ಚೆಕ್ ಪೋಸ್ಟ್‌ನಲ್ಲಿ ಬಿಎಸ್‌ಎಫ್ ಅಧಿಕಾರಿಗಳಿಗೆ ಈ 200 ಭಾರತೀಯ ಮೀನುಗಾರರನ್ನು ಹಸ್ತಾಂತರಿಸಲಾಗಿದೆ

Indian Fishermen: ಅಟ್ಟಾರಿ-ವಾಘಾ ಗಡಿಯಲ್ಲಿ 200 ಭಾರತೀಯ ಮೀನುಗಾರರನ್ನು ಭಾರತಕ್ಕೆ ಹಸ್ತಾಂತರಿಸಿದ ಪಾಕಿಸ್ತಾನ
ಸಾಂದರ್ಭಿಕ ಚಿತ್ರ
Follow us on

ಅಮೃತಸರ: ಪಾಕಿಸ್ತಾನವು (Pakistan) ತನ್ನ ಸೆರೆಯಲ್ಲಿದ್ದ 200 ಭಾರತೀಯ ಮೀನುಗಾರರನ್ನು (Indian Fishermen) ಬಿಡುಗಡೆ ಮಾಡಿದೆ, ಅಟ್ಟಾರಿ-ವಾಘಾ ಗಡಿಯಲ್ಲಿರುವ ಜಂಟಿ ಚೆಕ್ ಪೋಸ್ಟ್‌ನಲ್ಲಿ ಬಿಎಸ್‌ಎಫ್ ಅಧಿಕಾರಿಗಳಿಗೆ ಈ 200 ಭಾರತೀಯ ಮೀನುಗಾರರನ್ನು ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ನೀಡಿದ ತುರ್ತು ಪ್ರಯಾಣ ಪ್ರಮಾಣಪತ್ರವನ್ನು ಬಳಸಿಕೊಂಡು ಎಲ್ಲಾ ಮೀನುಗಾರರು ಅಟ್ಟಾರಿ-ವಾಘಾ ಗಡಿಯ ಭೂ ಸಾರಿಗೆ ಮಾರ್ಗದ ಮೂಲಕ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭಾರತಕ್ಕೆ ದಾಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೀನುಗಾರರ ದೋಣಿಗಳು ಅರಬ್ಬಿ ಸಮುದ್ರದ ಪ್ರಾದೇಶಿಕ ಜಲಮೂಲಗಳ ಮೂಲಕ ಪಾಕಿಸ್ತಾನಕ್ಕೆ ತಿಳಿಯದೇ ಹೋಗಿದ್ದಾರೆ. ಅಲ್ಲಿ ಪಾಕಿಸ್ತಾನ ಸೇನೆ ಬಂಧಿಸಿದೆ. ಭಾರತೀಯ ವೈದ್ಯರ ತಂಡವು ಈಗಾಗಲೇ ಪಾಕಿಸ್ತಾನದಿಂದ ಹಿಂದಿರುಗಿದ ಮೀನುಗಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:Cyclone Sitrang: ಅಸ್ಸಾಂನಲ್ಲಿ ಸಿತ್ರಾಂಗ್ ಚಂಡಮಾರುತದ ಅಬ್ಬರ; 1000ಕ್ಕೂ ಹೆಚ್ಚು ಜನರಿಗೆ ಹಾನಿ

ಭಾರತಕ್ಕೆ ಬಂದ ತಕ್ಷಣ ಮೀನುಗಾರರು ಭಾರತದ ಭುಮಿ ಮುಟ್ಟಿ ನಮಸ್ಕರಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಅರೇಬಿಯನ್ ಸಮುದ್ರದ ಕಡಲ ಗಡಿಯನ್ನು ಸರಿಯಾಗಿ ತಿಳಿದುಕೊಳ್ಳದ ಕಾರಣ ಮೀನುಗಾರರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನ ಮೀನುಗಾರರ ಜತೆಗೆ ದೋಣಿಯನ್ನು ಕೂಡ ವಶಪಡಿಸಿಕೊಂಡಿದ್ದಾರೆ. ದೋಣಿಯಲ್ಲಿ ಸರಿಯಾದ ತಂತ್ರಜ್ಞಾನವನ್ನು ಹೊಂದಿರದ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.