ರಫೇಲ್ ಫೈಟರ್ ಜೆಟ್ (Rafale fighter jet) ಚಲಾಯಿಸಿದ ಭಾರತದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ (Shivangi Singh) ಅವರು ಬುಧವಾರ ಗಣರಾಜ್ಯೋತ್ಸವ ಪರೇಡ್‌ನಲ್ಲಿ (Republic Day parade)ಭಾರತೀಯ ವಾಯುಪಡೆಯ ಟ್ಯಾಬ್ಲೋನ ಭಾಗವಾಗಿದ್ದರು. ಶಿವಾಂಗಿ ಅವರು ಐಎಫ್ ಟ್ಯಾಬ್ಲೋದ ಭಾಗವಾಗಿರುವ ಎರಡನೇ ಮಹಿಳಾ ಫೈಟರ್ ಜೆಟ್ ಪೈಲಟ್ ಆಗಿದ್ದಾರೆ. ಭಾವನಾ ಕಾಂತ್ ನಂತರ ಐಎಎಫ್ ಟ್ಯಾಬ್ಲೋನ ಭಾಗವಾದ ಮೊದಲ ಮಹಿಳಾ ಫೈಟರ್ ಜೆಟ್ ಪೈಲಟ್ ಆಗಿದ್ದಾರೆ. ಈ ವರ್ಷದ ಐಎಎಫ್ ಟ್ಯಾಬ್ಲೋದ ಥೀಮ್ ಭಾರತೀಯ ವಾಯುಪಡೆಯು ಭವಿಷ್ಯಕ್ಕಾಗಿರುವ ರೂಪಾಂತರ ಆಗಿದೆ . 12 ಸಾಲುಗಳು ಮತ್ತು 8 ಕಾಲಮ್‌ಗಳಲ್ಲಿ ಮಾರ್ಚ್ ಪಾಸ್ಟ್ ಅನ್ನು ಅನುಸರಿಸಿ, ರಾಫೆಲ್ ಫೈಟರ್ ಜೆಟ್, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ (LCH) ಮತ್ತು 3D ಕಣ್ಗಾವಲು ರಾಡಾರ್ ಅಸ್ಲೇಶಾ MK-1 ನ ಸ್ಕೇಲ್ಡ್-ಡೌನ್ ಮಾಡೆಲ್‌ಗಳನ್ನು ತೋರಿಸುವ ಟ್ಯಾಬ್ಲೋ ರಾಜಪಥದಲ್ಲಿ ಪ್ರದರ್ಶಿಸಲಾಗಿದೆ. ಇದು 1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ MiG-21 ವಿಮಾನದ ಸ್ಕೇಲ್ಡ್-ಡೌನ್ ಮಾಡೆಲ್ ಅನ್ನು ಸಹ ಒಳಗೊಂಡಿತ್ತು. ಶಿವಾಂಗಿ ಸಿಂಗ್ ಅವರು 2017 ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡರು ಮತ್ತು ಐಎಎಫ್‌ನ ಎರಡನೇ ಬ್ಯಾಚ್ ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ನಿಯೋಜಿಸಲ್ಪಟ್ಟರು.
Country’s first woman Rafale fighter jet pilot Flight Lieutenant Shivangi Singh is a part of the Indian Air Force tableau as the @IAF_MCC band and marching contingent marches down the Rajpath#RepublicDay #RepublicDayIndia pic.twitter.com/n35YZ0xp4F
— PIB India (@PIB_India) January 26, 2022
ರಫೇಲ್ ಅನ್ನು ಹಾರಿಸುವ ಮೊದಲು, ಶಿವಾಂಗಿ ಮಿಗ್ -21 ಬೈಸನ್ ವಿಮಾನವನ್ನು ಚಲಾಯಿಸಿದ್ದರು.
ಶಿವಾಂಗಿ ವಾರಣಾಸಿ ಮೂಲದವರಾಗಿದ್ದು ಪಂಜಾಬ್‌ನ ಅಂಬಾಲಾ ಮೂಲದ ಐಎಎಫ್‌ನ ಗೋಲ್ಡನ್ ಆರೋಸ್ ಸ್ಕ್ವಾಡ್ರನ್‌ನ ಭಾಗವಾಗಿದ್ದಾರೆ. 2020 ರಲ್ಲಿ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ರಫೇಲ್ ಪೈಲಟ್ ಆಗಿ ಆಯ್ಕೆಯಾದ ನಂತರ ಶಿವಾಂಗಿ ಸಿಂಗ್ ರಫೇಲ್ ಅನ್ನು ಚಲಾಯಿಸಿದ ಮೊದಲ ಮಹಿಳಾ ಫೈಟರ್ ಪೈಲಟ್ ಆದರು.
₹59,000 ಕೋಟಿ ವೆಚ್ಚದಲ್ಲಿ 36 ವಿಮಾನಗಳನ್ನು ಖರೀದಿಸಲು ಭಾರತವು ಫ್ರಾನ್ಸ್‌ನೊಂದಿಗೆ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ ಜುಲೈ 29, 2020 ರಂದು ಮೊದಲ ಬ್ಯಾಚ್ ರಫೇಲ್ ಯುದ್ಧ ವಿಮಾನಗಳು ಆಗಮಿಸಿವೆ. ಇಲ್ಲಿಯವರೆಗೆ, 32 ರಫೇಲ್ ಜೆಟ್‌ಗಳನ್ನು ಐಎಎಫ್‌ಗೆ ತಲುಪಿಸಲಾಗಿದೆ ಮತ್ತು ಈ ವರ್ಷದ ಏಪ್ರಿಲ್ ವೇಳೆಗೆ ನಾಲ್ಕು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Republic Day Parade 73ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಏನೇನಿದೆ? 10 ಪ್ರಮುಖ ಸಂಗತಿಗಳು
Published On - 1:05 pm, Wed, 26 January 22