ತಾಂತ್ರಿಕ ದೋಷ: ಲೇಹ್​​ಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ದೆಹಲಿ(Delhi)ಯಿಂದ ಲೇಹ್​ಗೆ ಹೊರಟಿದ್ದ ಇಂಡಿಗೋ(IndiGo) ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ದೆಹಲಿಯಲ್ಲೇ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂಡಿಗೋ ವಿಮಾನ 6E 2006 ಗುರುವಾರ ದೆಹಲಿಯಿಂದ ಲೇಹ್‌ಗೆ ಹೊರಟಿತ್ತು.ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿ 180 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.

ತಾಂತ್ರಿಕ ದೋಷ: ಲೇಹ್​​ಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಇಂಡಿಗೋ
Image Credit source: Hindustan Times

Updated on: Jun 19, 2025 | 10:27 AM

ನವದೆಹಲಿ, ಜೂನ್ 19: ದೆಹಲಿ(Delhi)ಯಿಂದ ಲೇಹ್​ಗೆ ಹೊರಟಿದ್ದ ಇಂಡಿಗೋ(IndiGo) ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ದೆಹಲಿಯಲ್ಲೇ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂಡಿಗೋ ವಿಮಾನ 6E 2006 ಗುರುವಾರ ದೆಹಲಿಯಿಂದ ಲೇಹ್‌ಗೆ ಹೊರಟಿತ್ತು.ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿ 180 ಪ್ರಯಾಣಿಕರಿದ್ದರು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ವಿಮಾನ ತುರ್ತು ಭೂಸ್ಪರ್ಶದ ನಂತರ, ಇಂಡಿಗೋದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವಿಮಾನದಲ್ಲಿ ಯಾವ ತಾಂತ್ರಿಕ ದೋಷ ಕಂಡುಬಂದಿದೆ ಎಂಬುದರ ಕುರಿತು ಇಂಡಿಗೋ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಕೊಚ್ಚಿ-ದೆಹಲಿ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ
ಜೂನ್ 17 ರ ಮಂಗಳವಾರ, ಕೊಚ್ಚಿಯಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಬಾಂಬ್ ಬೆದರಿಕೆ ಬಂದ ನಂತರ, ವಿಮಾನವನ್ನು ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಬೆಳಗ್ಗೆ 9.31ಕ್ಕೆ ಕೊಚ್ಚಿಯಿಂದ ವಿಮಾನ ಹೊರಟ ಕೂಡಲೇ ವಿಮಾನಯಾನ ಸಂಸ್ಥೆಯ ಅಧಿಕೃತ ಐಡಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಈ ಸಮಯದಲ್ಲಿ ವಿಮಾನವು ಮಸ್ಕತ್‌ನಿಂದ ಕೊಚ್ಚಿ ತಲುಪಿತ್ತು. ನಂತರ ಅದು ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ವಿಮಾನದಲ್ಲಿ 157 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು.

ಹಾರಾಟದ ಸಮಯದಲ್ಲಿ ಪ್ರಕ್ಷುಬ್ಧತೆಯ ಅನುಭವ
ಜೂನ್ 16 ರಂದು, ಗೋವಾದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನವು ಹವಾಮಾನ ಬದಲಾವಣೆಯಿಂದಾಗಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು ಎನ್ನುವ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ವಿಮಾನವು ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿತು. ಬಲವಾದ ಗಾಳಿಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು.

ಮತ್ತಷ್ಟು ಓದಿ: ಬಾಂಬ್ ಬೆದರಿಕೆ: ಕೊಚ್ಚಿಯಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಬುಧವಾರ ತಾಂತ್ರಿಕ ದೋಷ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ದೆಹಲಿ-ರಾಯ್‌ಪುರ ಇಂಡಿಗೊ ವಿಮಾನದ ಬಾಗಿಲು ಜಾಮ್ ಆಗಿ ಸುಮಾರು 40 ನಿಮಿಷಗಳ ಕಾಲ ಪ್ರಯಾಣಿಕರು ವಿಮಾನದೊಳಗೆ ಸಿಲುಕಿಕೊಂಡಿದ್ದರು.

ಮಧ್ಯಾಹ್ನ 2.25 ಕ್ಕೆ ನಿಗದಿತ ಸಮಯಕ್ಕೆ ಇಳಿದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ವಿಮಾನದ ನಿರ್ಗಮನ ದ್ವಾರ ಜಾಮ್ ಆಗಿ, ಇಳಿಯುವ ಪ್ರಕ್ರಿಯೆ ವಿಳಂಬವಾಯಿತು. ಲ್ಯಾಂಡಿಂಗ್ ಸರಾಗವಾಗಿ ನಡೆದರೂ, ಪ್ರಯಾಣಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಕ್ಯಾಬಿನ್‌ನಲ್ಲಿ ಕುಳಿತಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ