ಸೆಪ್ಟೆಂಬರ್ 1ರಿಂದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಸ್ಟಾಂಪಿಂಗ್ ಕಡ್ಡಾಯವಿಲ್ಲ

ಸೆಪ್ಟೆಂಬರ್ 1ರಿಂದ ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಭೌತಿಕ ಬೋರ್ಡಿಂಗ್ ಪಾಸ್‌ಗಳನ್ನು (Physical Boarding Pass) ಕೊಂಡೊಯ್ಯುವುದು ಅಥವಾ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಸೀಲು (Stamp) ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಪರೇಟರ್‌ಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸೇರಿದಂತೆ ಎಲ್ಲಾ ಸಂಬಂಧಿತ ಸಂಸ್ಥೆಗಳಿಗೆ ಬ್ಯೂರೋ ಆಫ್ ಇಮಿಗ್ರೇಷನ್ ಈ ನಿರ್ಧಾರವನ್ನು ತಿಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಮಿಗ್ರೇಷನ್ ಪ್ರಕ್ರಿಯೆಯನ್ನು ಪ್ರಯಾಣಿಕರಿಗೆ ಮತ್ತಷ್ಟು ಸುಲಭ ಹಾಗೂ ಅನುಕೂಲಕರವಾಗಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ಸೆಪ್ಟೆಂಬರ್ 1ರಿಂದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಸ್ಟಾಂಪಿಂಗ್ ಕಡ್ಡಾಯವಿಲ್ಲ
Flight
Image Credit source: PTI

Updated on: Aug 22, 2026 | 10:37 PM

ನವದೆಹಲಿ, ಆಗಸ್ಟ್ 22: ಸೆಪ್ಟೆಂಬರ್ 1ರಿಂದ ಭಾರತದಿಂದ ವಿದೇಶಗಳಿಗೆ ನಿರ್ಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಭೌತಿಕ ಬೋರ್ಡಿಂಗ್ ಪಾಸ್ (Physical Boarding Pass) ಹಾಜರುಪಡಿಸುವುದು ಅಥವಾ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಸೀಲು (Stamp) ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ. ಈ ಹೊಸ ಬದಲಾವಣೆಯು ದೇಶದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಜಾರಿಗೆ ಬರಲಿದ್ದು, ಪ್ರಯಾಣಿಕರಿಗೆ ಇಮಿಗ್ರೇಷನ್ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭ ಹಾಗೂ ವೇಗವಾಗಿಸುವ ಉದ್ದೇಶವನ್ನು ಹೊಂದಿದೆ. ಅಧಿಕೃತ ಮಾಹಿತಿಯ ಪ್ರಕಾರ, ಬ್ಯೂರೋ ಆಫ್ ಇಮಿಗ್ರೇಷನ್ (Bureau of Immigration) ಈ ಹೊಸ ನಿರ್ಧಾರವನ್ನು ವಿಮಾನ ನಿಲ್ದಾಣ ಆಪರೇಟರ್‌ಗಳು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ತಿಳಿಸಿದೆ. ಪರಿಷ್ಕೃತ ನಿಯಮ ಜಾರಿಗೆ ಬರುವ ಮೊದಲು ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಈ ಕುರಿತು ಅರಿವು ಮೂಡಿಸುವಂತೆ ವಿಮಾನ ನಿಲ್ದಾಣ (Airports) ಮತ್ತು ವಿಮಾನಯಾನ ಸಿಬ್ಬಂದಿಗೆ ಸೂಚಿಸಲಾಗಿದೆ.

ಏನಿದು ಹೊಸ ನಿಯಮ?:

ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಾವಳಿಗಳ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಇಮಿಗ್ರೇಷನ್ ಕೌಂಟರ್‌ಗಳಲ್ಲಿ ನೀಡಿ ಅಧಿಕಾರಿಗಳಿಂದ ಸೀಲು ಹಾಕಿಸಿಕೊಳ್ಳಬೇಕಿತ್ತು. ಈ ಕಡ್ಡಾಯ ಪ್ರಕ್ರಿಯೆಯನ್ನು ಸೆಪ್ಟೆಂಬರ್‌ನಿಂದ ಸ್ಥಗಿತಗೊಳಿಸಲಾಗುತ್ತಿದೆ. ಸೆಪ್ಟೆಂಬರ್ 1ರಿಂದ ಭಾರತದ ವಿಮಾನ ನಿಲ್ದಾಣಗಳಿಂದ ವಿದೇಶಗಳಿಗೆ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಭೌತಿಕ ಬೋರ್ಡಿಂಗ್ ಪಾಸ್‌ಗಳಿಗೆ ಸ್ಟಾಂಪಿಂಗ್ ಹಾಕಿಸಿಕೊಳ್ಳುವ ನಿಯಮವನ್ನು ರದ್ದುಗೊಳಿಸಲಾಗುತ್ತಿದೆ.

ಇದನ್ನೂ ಓದಿ: 2014ರಲ್ಲಿ 74 ವಿಮಾನ ನಿಲ್ದಾಣಗಳು, 2026ರಲ್ಲಿ 166ಕ್ಕೆ ಏರಿಕೆ; ವಿಮಾನಯಾನ ಕ್ಷೇತ್ರದ ಪ್ರಗತಿ ಒತ್ತಿಹೇಳಿದ ಪ್ರಧಾನಿ ಮೋದಿ

ಪ್ರಯಾಣಿಕರು ಇಮಿಗ್ರೇಷನ್ ಪರಿಶೀಲನೆ (Immigration Clearance) ಸಮಯದಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ ಡಿಜಿಟಲ್ ಇ-ಬೋರ್ಡಿಂಗ್ ಪಾಸ್‌ಗಳನ್ನು ನೇರವಾಗಿ ತೋರಿಸಬಹುದು. ಮುದ್ರಿತ ಅಥವಾ ಭೌತಿಕ ಬೋರ್ಡಿಂಗ್ ಪಾಸ್‌ಗಳನ್ನು ಬಳಸಲು ಇಂದಿಗೂ ಅವಕಾಶವಿದೆಯಾದರೂ, ಇಮಿಗ್ರೇಷನ್ ಅಧಿಕಾರಿಗಳು ಇನ್ಮುಂದೆ ಅವುಗಳ ಮೇಲೆ ಸೀಲು ಹಾಕುವುದಿಲ್ಲ. ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸಲು ‘ಬ್ಯೂರೋ ಆಫ್ ಇಮಿಗ್ರೇಷನ್’ ಈ ಕ್ರಮ ಕೈಗೊಂಡಿದೆ.

ಪ್ರಯಾಣಿಕರು ಕಡ್ಡಾಯವಾಗಿ ಭೌತಿಕ ಬೋರ್ಡಿಂಗ್ ಪಾಸ್‌ಗಳನ್ನು ನೀಡುವುದು ಇಮಿಗ್ರೇಷನ್ ತಪಾಸಣೆ ವೇಳೆ ಅನಾನುಕೂಲತೆಯನ್ನುಂಟುಮಾಡುತ್ತಿತ್ತು. ಜೊತೆಗೆ ಸರಿಯಾಗಿ ಅಥವಾ ಸ್ಪಷ್ಟವಾಗಿ ಬೀಳದ ಸೀಲುಗಳಿಂದಾಗಿ ಬೋರ್ಡಿಂಗ್ ಪಾಸ್ ವಿವರಗಳನ್ನು ಸ್ಕ್ಯಾನ್ ಮಾಡಿ ಓದುವುದರಲ್ಲಿ ತಾಂತ್ರಿಕ ತೊಂದರೆಗಳು ಎದುರಾಗುತ್ತಿದ್ದವು. ಹೊಸ ವ್ಯವಸ್ಥೆಯ ಜಾರಿಯಿಂದಾಗಿ, ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಮೇಲೆ ಸೀಲು ಪಡೆಯುವ ಅಗತ್ಯವಿಲ್ಲದೆಯೇ ಇಮಿಗ್ರೇಷನ್ ತಪಾಸಣೆಯನ್ನು ಪೂರ್ಣಗೊಳಿಸಿ ಸುಲಭವಾಗಿ ನಿರ್ಗಮಿಸಬಹುದು.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

“ಈ ವಿಷಯವನ್ನು ಬ್ಯೂರೋ ಆಫ್ ಇಮಿಗ್ರೇಷನ್ ಕೂಲಂಕಷವಾಗಿ ಪರಿಶೀಲಿಸಿದ್ದು, ದೇಶದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭೌತಿಕ ಬೋರ್ಡಿಂಗ್ ಪಾಸ್‌ಗಳ ಕಡ್ಡಾಯ ಬಳಕೆ ಮತ್ತು ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಸೀಲು ಹಾಕುವ ಪದ್ಧತಿಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ” ಎಂದು ಅಧಿಕೃತ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.

ಭೌತಿಕ ಬೋರ್ಡಿಂಗ್ ಪಾಸ್ ಬಳಸಲು ಬಯಸುವ ಪ್ರಯಾಣಿಕರಿಗೆ ಅದಕ್ಕೂ ಅವಕಾಶವಿರುತ್ತದೆ. ಆದರೆ, ಪ್ರಮುಖ ಬದಲಾವಣೆಯೆಂದರೆ ಭೌತಿಕ ಬೋರ್ಡಿಂಗ್ ಪಾಸ್‌ಗಳನ್ನು ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಇನ್ಮುಂದೆ ಸೀಲಿಂಗ್ ಮಾಡಲಾಗುವುದಿಲ್ಲ. ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಡಿಜಿಟಲ್ ಅಥವಾ ಭೌತಿಕ ಬೋರ್ಡಿಂಗ್ ಪಾಸ್‌ನಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಎರಡೂ ಮಾದರಿಗಳನ್ನು ಸ್ವೀಕರಿಸಲಾಗುತ್ತದೆ, ಆದರೆ ಸೀಲು ಹಾಕುವ ಕಡ್ಡಾಯ ನಿಯಮವನ್ನು ಮಾತ್ರ ತೆರವುಗೊಳಿಸಲಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us