Ramayana Yatra: ಏಪ್ರಿಲ್ 7ರಂದು ಆರಂಭವಾಗಲಿದೆ 18 ದಿನಗಳ ರಾಮಾಯಣ ಯಾತ್ರೆ: ಟಿಕೆಟ್ ಬುಕಿಂಗ್ ಶುರು

ಭಾರತೀಯ ರೈಲ್ವೆ(Indian Railway) ಇಲಾಖೆಯು ಏಪ್ರಿಲ್ 7 ರಿಂದ ರಾಮಾಯಣ ಯಾತ್ರೆಯನ್ನು ಆರಂಭಿಸಲಿದ್ದು, 18 ದಿನಗಳ ಕಾಲ ನಡೆಯಲಿದೆ. ಈ ಪ್ರಯಾಣದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲಾಗುವುದು, ರಾಮಾಯಣ ಯಾತ್ರೆಯ ಮೊದಲ ನಿಲ್ದಾಣ ಅಯೋಧ್ಯೆಯಾಗಿರಲಿದೆ.

Ramayana Yatra: ಏಪ್ರಿಲ್ 7ರಂದು ಆರಂಭವಾಗಲಿದೆ 18 ದಿನಗಳ ರಾಮಾಯಣ ಯಾತ್ರೆ: ಟಿಕೆಟ್ ಬುಕಿಂಗ್ ಶುರು
ಶ್ರೀ ರಾಮಾಯಣ ಯಾತ್ರೆ

Updated on: Mar 16, 2023 | 11:04 AM

ಭಾರತೀಯ ರೈಲ್ವೆ(Indian Railway) ಇಲಾಖೆಯು ಏಪ್ರಿಲ್ 7 ರಿಂದ ಶ್ರೀ ರಾಮಾಯಣ ಯಾತ್ರೆಯನ್ನು ಆರಂಭಿಸಲಿದ್ದು, 18 ದಿನಗಳ ಕಾಲ ನಡೆಯಲಿದೆ. ಈ ಪ್ರಯಾಣದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲಾಗುವುದು, ರಾಮಾಯಣ ಯಾತ್ರೆಯ ಮೊದಲ ನಿಲ್ದಾಣ ಅಯೋಧ್ಯೆಯಾಗಿರಲಿದೆ. ಈ ರೈಲು ದೆಹಲಿಯ ಸಫ್ದರ್​ಜಂಗ್ ನಿಲ್ದಾಣದಿಂದ ಪ್ರಾರಂಭವಾಗಲಿದೆ, ಪ್ರಯಾಣಿಕರು ಗಾಜಿಯಾಬಾದ್, ಅಲಿಗಢ, ತುಂಡ್ಲಾ, ಇಟಾವಾ, ಕಾನ್ಪುರ ಮತ್ತು ಲಕ್ನೋದಿಂದ ರೈಲಿನಲ್ಲಿ ಪ್ರಯಾಣವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ.

ರೈಲು ಭೇಟಿ ನೀಡುವ ಸ್ಥಳ
ಆಯೋಧ್ಯ: ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗರ್ಹಿ, ಸರಯೂ ಘಾಟ್

ನಂದೀಗ್ರಾಮ:ಭಾರತ್ ಹನುಮಾನ್ ಮಂದಿರ,ಭಾರತ್ ಕುಂದ್

ಜನಕಪುರ: ರಾಮ ಜಾನಕಿ ಮಂದಿರ

ಸೀತಾಮರಾಹಿ: ಜಾನಕಿ ಮಂದಿರ ಹಾಗೂ ಪುನರ್ವ ಧಾಮ

ಬುಕ್ಸರ್ : ರಾಮ ರೇಖಾ ಘಾಟ್, ರಾಮೇಶ್ವರ ನಾಥ್ ದೇವಸ್ಥಾನ

ವಾರಾಣಸಿ : ತುಳಸಿ ಮಾನಸ ದೇವಸ್ಥಾನ, ಸಂಕಟ್ ಮೋಚನ್ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ಗಂಗಾ ಆರತಿ

ಸೀತಾ ಸಮಾಹಿತಿ ಸ್ಥಳ್, ಸೀತಾಮರಾಹಿ: ಸೀತಾ ಮಾತಾ ದೇವಸ್ಥಾನ

ಪ್ರಯಾಗರಾಜ್ : ಭಾರದ್ವಾಜ ಆಶ್ರಮ, ಗಂಗಾ ಯಮುನಾ ಸಂಗಮ, ಹನುಮಾನ ದೇವಸ್ಥಾನ

ಶ್ರಿಂಗ್ವೆರ್ಪುರ್: ಶ್ರಿಂಗಿ ರಿಷಿ ಸಮಾಧಿ, ಶಾಂತಾ ದೇವಿ ದೇವಸ್ಥಾನ, ರಾಮಚೌರ

ಚಿತ್ರಕೂಟ: ಗುಪ್ತ ಗೋದಾವರಿ, ರಾಮ ಘಾಟ್, ಸತಿ ಅನಸೂಯ ದೇವಸ್ಥಾನ

ನಾಸಿಕ್ : ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿ, ಸೀತಾಗುಹ, ಕಲರಾಮ ಮಂದಿರ

ಹಂಪಿ: ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ, ವಿಠಲ ಮಂದಿರ

ರಾಮೇಶ್ವರಂ : ರಾಮನಾಥ ಸ್ವಾಮಿ ಮಂದಿರ, ಧನುಷ್ಕೋಡಿ

ಬದ್ರಾಚಲಂ: ಶ್ರೀ ಸೀತಾ ರಾಮಚಂದ್ರಸ್ವಾಮಿ ಮಂದಿರ, ಆಂಜನೇಯ ಸ್ವಾಮಿ ಮಂದಿರ

ನಾಗ್ಪುರ: ರಾಮತೇಕ್ ಕೋಟೆ ಹಾಗೂ ಮಂದಿರ

ಈ ರೈಲು ಎಸಿ ಫರ್ಸ್ಟ್​ ಹಾಗೂ ಎಸಿ ಸೆಕೆಂಡ್ ಕೋಚ್​ಗಳನ್ನು ಹೊಂದಿರುತ್ತದೆ. ಒಟ್ಟು 156 ಪ್ರಯಾಣಿಕರು ಶ್ರೀರಾಮಾಯಣ ಯಾತ್ರೆಗೆ ತೆರಳಲು ಸಾಧ್ಯವಾಗುತ್ತದೆ. ಈ ರೈಲುಗಳು ಎರಡು ರೈಲು ರೆಸ್ಟೋರೆಂಟ್​ಗಳನ್ನು ಸಹ ಒಳಗೊಂಡಿರುತ್ತದೆ. 7,500 ಕಿ,ಮೀ ನ ಪ್ರಯಾಣದಲ್ಲಿ ಹಲವು ಸೌಲಭ್ಯಗಳಿರುತ್ತವೆ. ಯಾತ್ರೆಯ ವೇಳೆ ಭಕ್ತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.

ಎಸಿ ಫರ್ಸ್ಟ್​ ಕೋಚ್​ನ ಪ್ರತಿ ಪ್ರಯಾಣಿಕರಿಗೆ 1.68 ಲಕ್ಷ ರೂ, ಕ್ಯಾಬಿನ್​ಗೆ 1.46 ಲಕ್ಷ ರೂ, ಎಸಿ ಸೆಕೆಂಡ್ ಕೋಚ್​ಗೆ 1.14 ಲಕ್ಷ ರೂ ನೀಡಬೇಕಾಗುತ್ತದೆ.
ಈ ಪ್ರಯಾಣದ ಬುಕಿಂಗ್​ ಅನ್ನು ಐಆರ್​ಸಿಟಿಸಿಯ ವೆಬ್​ಸೈಟ್​ನಲ್ಲಿ ಮಾಡಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us