ಇಸ್ರೇಲ್ ಯುದ್ಧದ ಬಗ್ಗೆ ಕಾಂಗ್ರೆಸ್ ಪಕ್ಷ ಹೇಳಿದ್ದೇನು? ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿರುವುದೇಕೆ?

|

Updated on: Oct 11, 2023 | 2:47 PM

Israel War: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಯುದ್ಧದ ಬಗ್ಗೆ ತನ್ನ ಆತಂಕ ಮತ್ತು ಯಾತನೆ ವ್ಯಕ್ತಪಡಿಸಿದ್ದು ಪ್ಯಾಲೆಸ್ತೀನ್ ಜನರ "ಭೂಮಿ (ಮತ್ತು) ಸ್ವ-ಸರ್ಕಾರ ಮತ್ತು ಘನತೆ ಮತ್ತು ಗೌರವದಿಂದ ಬದುಕುವ ಹಕ್ಕಿನ ಬೆಂಬಲವನ್ನು ಒತ್ತಿಹೇಳಿದೆ. ಇಸ್ರೇಲಿಗಳ ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಖಾತ್ರಿಪಡಿಸುವ ಮೂಲಕ ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಈಡೇರಿಸಬೇಕು ಎಂದು ತಮ್ಮ ಪಕ್ಷವು ಯಾವಾಗಲೂ ನಂಬುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ

ಇಸ್ರೇಲ್ ಯುದ್ಧದ ಬಗ್ಗೆ ಕಾಂಗ್ರೆಸ್ ಪಕ್ಷ ಹೇಳಿದ್ದೇನು? ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿರುವುದೇಕೆ?
ಮಲ್ಲಿಕಾರ್ಜುನ ಖರ್ಗೆ- ರಾಹುಲ್ ಗಾಂಧಿ
Follow us on

ದೆಹಲಿ ಅಕ್ಟೋಬರ್ 11: ಇಸ್ರೇಲ್ ಮೇಲಿನ ದಾಳಿಯನ್ನು ಉಲ್ಲೇಖಿಸದೆ ಹಮಾಸ್ (Hamas) ಮತ್ತು ಪ್ಯಾಲೆಸ್ತೀನ್ (Palestine) ವಿಚಾರವನ್ನು ಬೆಂಬಲಿಸಿ ಕಾಂಗ್ರೆಸ್ (Congress) ನೀಡಿದ ಹೇಳಿಕೆ ಚರ್ಚೆಗಾಸ್ಪದವಾಗಿದೆ. ಇಸ್ರೇಲ್ ಮತ್ತು ಹಮಾಸ್ ಗುಂಪಿನ ನಡುವಿನ ಇತ್ತೀಚಿನ ಯುದ್ಧದಲ್ಲಿ 3,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಹಿಂಸಾಚಾರ ಎಂದಿಗೂ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದು ಕಾಂಗ್ರೆಸ್ ಭಾನುವಾರ ಇಸ್ರೇಲ್ ಜನರ ಮೇಲಿನ ದಾಳಿಯನ್ನು ಖಂಡಿಸಿದೆ. ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 5,000 ರಾಕೆಟ್‌ಗಳನ್ನು ಹಾರಿಸಿದ ನಂತರ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಯಿತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಯುದ್ಧದ ಬಗ್ಗೆ ತನ್ನ ಆತಂಕ ಮತ್ತು ಯಾತನೆ ವ್ಯಕ್ತಪಡಿಸಿದ್ದು ಪ್ಯಾಲೆಸ್ತೀನ್ ಜನರ “ಭೂಮಿ (ಮತ್ತು) ಸ್ವ-ಸರ್ಕಾರ ಮತ್ತು ಘನತೆ ಮತ್ತು ಗೌರವದಿಂದ ಬದುಕುವ ಹಕ್ಕಿನ ಬೆಂಬಲವನ್ನು ಒತ್ತಿಹೇಳಿದೆ. ಇಸ್ರೇಲಿಗಳ ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಖಾತ್ರಿಪಡಿಸುವ ಮೂಲಕ ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಈಡೇರಿಸಬೇಕು ಎಂದು ತಮ್ಮ ಪಕ್ಷವು ಯಾವಾಗಲೂ ನಂಬುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಹಮಾಸ್ ಅನ್ನು ಬೆಂಬಲಿಸುತ್ತಿದೆ ಎಂದು ಹೇಳಿಕೊಂಡಿದೆ. ವಿರೋಧ ಪಕ್ಷವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದು, ಅಲ್ಪಸಂಖ್ಯಾತ ಮತ ಬ್ಯಾಂಕ್ ರಾಜಕೀಯಕ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಇಸ್ರೇಲ್ ಯುದ್ಧದ ಕುರಿತು ಕಾಂಗ್ರೆಸ್‌ನ ಸಿಡಬ್ಲ್ಯೂಸಿ ನಿರ್ಣಯವು ಮೋದಿ ಅಧಿಕಾರಕ್ಕೆ ಬರುವವರೆಗೆ ಭಾರತೀಯ ವಿದೇಶಾಂಗ ನೀತಿಯು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತ ಬ್ಯಾಂಕ್ ರಾಜಕೀಯಕ್ಕೆ ಹೇಗೆ ಒತ್ತೆಯಾಳಾಗಿತ್ತು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಂಸದರು, “ನಾವು 2024 ರಲ್ಲಿ ಜಾಗರೂಕರಾಗಿರದಿದ್ದರೆ ವಿಷಯಗಳು ಎಷ್ಟು ಬೇಗನೆ ಶೂನ್ಯಕ್ಕೆ ಹಿಂತಿರುಗುತ್ತವೆ ಎಂಬುದರ ಜ್ಞಾಪನೆ ಇಂದು ಎಂದು ಹೇಳಿದ್ದಾರೆ.

ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ ಹೇಳಿಕೆಯು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತದೆ. ಇಸ್ರೇಲ್-ಹಮಾಸ್ ಯುದ್ಧದ ವಿಭಾಗವು CWC ಸಭೆಯಲ್ಲಿ ಎಲ್ಲರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ತನ್ನ ಪ್ರತಿವಾದದಲ್ಲಿ ಆರೋಪಿಸಿದ್ದು ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದೆ. “ಯಾವುದೇ ಅಸಮಾಧಾನವಿಲ್ಲ. ಇವೆಲ್ಲವೂ ವದಂತಿಗಳು. ಜನರು ಕಾಂಗ್ರೆಸ್ ನಿರ್ಣಯದ ಮೇಲೆ ರಾಜಕೀಯ ಮಾಡುತ್ತಿರುವುದು ವಿಷಾದನೀಯ. ಇಸ್ರೇಲ್ ಅಥವಾ ಗಾಜಾದಲ್ಲಿ ಭಾರತೀಯ ನಾಗರಿಕರು ಸುರಕ್ಷಿತವಾಗಿರಲು ನಾವು ಬಯಸುತ್ತೇವೆ. ಅವರು ಹಿಂತಿರುಗಬೇಕು ಗಮನಹರಿಸಿ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ.

ಇದನ್ನೂ ಓದಿ: ಹಮಾಸ್​ ಉಗ್ರರ ವಶದಿಂದ ಗಾಜಾ ಗಡಿಯನ್ನು ಹಿಂಪಡೆದ ಇಸ್ರೇಲ್​, ಸಂಘರ್ಷದಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾವು

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಬಗ್ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಲುವನ್ನು ಬಿಜೆಪಿ ನಾಯಕರು ನೆನಪಿಸಿಕೊಳ್ಳಬೇಕು ಎಂದು ಗೊಗೊಯ್ ಹೇಳಿದ್ದಾರೆ. 1999 ರಿಂದ 2004 ರವರೆಗೆ ಬಿಜೆಪಿ ಸರ್ಕಾರವನ್ನು ಮುನ್ನಡೆಸಿದ್ದ ವಾಜಪೇಯಿ ಅವರು ಹಲವಾರು ಸಂದರ್ಭಗಳಲ್ಲಿ ಪ್ಯಾಲೆಸ್ತೀನ್ ಜನರ ಪರವಾಗಿ ಒಲವು ತೋರಿದರು.

ಯುದ್ಧದಿಂದ ಒಟ್ಟು ಸಾವಿನ ಸಂಖ್ಯೆ 3,000 ತಲುಪಿದೆ. ಇಸ್ರೇಲ್ ಮಿಲಿಟರಿ ತನ್ನ ಪ್ರತೀಕಾರದ ಮುಂದಿನ ಹಂತದ ತಯಾರಿಯಲ್ಲಿ ಸಾವಿರಾರು ಸೈನಿಕರಿಗೆ ನೆಲೆಯನ್ನು ನಿರ್ಮಿಸುತ್ತಿದೆ ಎಂದು ಹೇಳಿದೆ. ಇಸ್ರೇಲ್ ದಾಳಿ ವೇಳೆ ಒತ್ತೆಯಾಳುಗಳನ್ನು ಕೊಲ್ಲಲು ಸಿದ್ಧವಾಗಿದೆ ಎಂದು ಹಮಾಸ್ ಸೋಮವಾರ ತಡರಾತ್ರಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ