ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ-3 ಆರ್ಬಿಟರ್ ಸೆರೆಹಿಡಿದ ಚಂದ್ರಯಾನ-2 ಲ್ಯಾಂಡರ್ನ ಆಕರ್ಷಕ ಚಿತ್ರಗಳನ್ನು ಅನಾವರಣಗೊಳಿಸಿದೆ. ನಿನ್ನ ಮೇಲೊಂದು ಕಣ್ಣಿದೆ ಎಂದು ಶೀರ್ಷಿಕೆ ಕೊಟ್ಟು ಇಸ್ರೋ ಇದೀಗ ಟ್ವೀಟ್ ಡಿಲೀಟ್ ಮಾಡಿದೆ. ಇಸ್ರೋದ ಚಂದ್ರಯಾನ-2 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದಿರಬಹುದು, ಆದರೆ ಅದರ ಮಿಷನ್‌ನ ಆರ್ಬಿಟರ್ ಇನ್ನೂ ಕಾರ್ಯನಿರ್ವಹಿಸುತ್ತಿದೆ.
ಈಗ ಚಂದ್ರಯಾನ-2 ರ ಆರ್ಬಿಟರ್ ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಅದರ ಚಿತ್ರಗಳನ್ನು ಸೆರೆಹಿಡಿದಿದೆ.
ಇಸ್ರೋ ಈ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಇದೀಗ ಚಂದ್ರನ ಸುತ್ತ ಇರುವ ಕ್ಯಾಮೆರಾಗಳಲ್ಲಿ ಇದು ಅತ್ಯುತ್ತಮ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾವಾಗಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿದ ನಂತರ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಚಂದ್ರಯಾನ-2 ರ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಚಂದ್ರನ ಸುತ್ತ ಸುತ್ತುತ್ತಿದೆ.
ಮತ್ತಷ್ಟು ಓದಿ: ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ನ್ಯೂಯಾರ್ಕ್ ಟೈಮ್ಸ್ನ ಕಾರ್ಟೂನ್
ಆದರೆ, ಈ ಟ್ವೀಟ್ ಅನ್ನು ಇಸ್ರೋ ನಂತರ ಡಿಲೀಟ್ ಮಾಡಿದೆ. ಚಂದ್ರಯಾನ-3 ಮಿಷನ್ ಅಡಿಯಲ್ಲಿ ಲ್ಯಾಂಡರ್ ವಿಕ್ರಮ್‌ನ ಎಲ್ಲಾ ಚಟುವಟಿಕೆಗಳು ಮತ್ತು ವ್ಯವಸ್ಥೆಗಳು ಸಾಮಾನ್ಯವಾಗಿದೆ ಎಂದು ಇಸ್ರೋ ಈ ಹಿಂದೆ ಟ್ವೀಟ್‌ನಲ್ಲಿ ತಿಳಿಸಿದೆ. ಚಂದ್ರಯಾನ-3 ಮಿಷನ್‌ನ ಯಶಸ್ಸಿನೊಂದಿಗೆ, ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶವಾಗಿದೆ .
ಅದೇ ಸಮಯದಲ್ಲಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ