14 ಉಪಗ್ರಹಗಳನ್ನ ಹೊತ್ತು ನಭಕ್ಕೆ ಚಿಮ್ಮಿದ PSLV ರಾಕೆಟ್

|

Updated on: Nov 27, 2019 | 10:11 AM

ಶ್ರೀಹರಿಕೋಟ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-ಸಿ47 ರಾಕೆಟ್‌ನಲ್ಲಿ 14 ಉಪಗ್ರಹಗಳನ್ನು ಇಸ್ರೋ ಯಶಸ್ವಿ ಉಡಾವಣೆ ಮಾಡಿದೆ. 14 ಉಪಗ್ರಹಗಳಲ್ಲಿ 13 ನ್ಯಾನೋ ಉಪಗ್ರಹಗಳು ಅಮೆರಿಕದ್ದಾಗಿವೆ. ಆಧುನಿಕ ತಂತ್ರಜ್ಞಾನದ ಭೂವೀಕ್ಷಣೆಯ ಕಾರ್ಟೊಸ್ಯಾಟ್-3 ಮತ್ತು ವಾಣಿಜ್ಯ ಉದ್ದೇಶದ 13 ಸಣ್ಣ ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಉಡಾವಣೆ ಮಾಡಿದೆ. ಕಾರ್ಟೋಸ್ಯಾಟ್-3 ಉಪಗ್ರಹವು 714ಕೆಜಿ ತೂಕವಿದೆ. ಈ ಯೋಜನೆಗಾಗಿ 350 ಕೋಟಿ ರೂ. ವೆಚ್ಚಮಾಡಲಾಗಿದೆ. ಭೂ ವಾತಾವರಣ, ಅಂತರ್ಜಲ ಮಟ್ಟ, ನಗರ ಯೋಜನೆ, ವ್ಯವಸಾಯ ಕ್ಷೇತ್ರ ಸೇರಿದಂತೆ ಇನ್ನಿತರ […]

14 ಉಪಗ್ರಹಗಳನ್ನ ಹೊತ್ತು ನಭಕ್ಕೆ ಚಿಮ್ಮಿದ PSLV ರಾಕೆಟ್
Follow us on

ಶ್ರೀಹರಿಕೋಟ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-ಸಿ47 ರಾಕೆಟ್‌ನಲ್ಲಿ 14 ಉಪಗ್ರಹಗಳನ್ನು ಇಸ್ರೋ ಯಶಸ್ವಿ ಉಡಾವಣೆ ಮಾಡಿದೆ.

14 ಉಪಗ್ರಹಗಳಲ್ಲಿ 13 ನ್ಯಾನೋ ಉಪಗ್ರಹಗಳು ಅಮೆರಿಕದ್ದಾಗಿವೆ. ಆಧುನಿಕ ತಂತ್ರಜ್ಞಾನದ ಭೂವೀಕ್ಷಣೆಯ ಕಾರ್ಟೊಸ್ಯಾಟ್-3 ಮತ್ತು ವಾಣಿಜ್ಯ ಉದ್ದೇಶದ 13 ಸಣ್ಣ ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಉಡಾವಣೆ ಮಾಡಿದೆ.

ಕಾರ್ಟೋಸ್ಯಾಟ್-3 ಉಪಗ್ರಹವು 714ಕೆಜಿ ತೂಕವಿದೆ. ಈ ಯೋಜನೆಗಾಗಿ 350 ಕೋಟಿ ರೂ. ವೆಚ್ಚಮಾಡಲಾಗಿದೆ. ಭೂ ವಾತಾವರಣ, ಅಂತರ್ಜಲ ಮಟ್ಟ, ನಗರ ಯೋಜನೆ, ವ್ಯವಸಾಯ ಕ್ಷೇತ್ರ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಈ ಉಪಗ್ರಹ ಸಹಕಾರಿಯಾಗಲಿದೆ. ತನ್ನ ಕಕ್ಷೆಯಿಂದ ಕಾರ್ಟೋಸ್ಯಾಟ್ ಹೈರೆಸ್ಯೂಲೇಷನ್ ಚಿತ್ರಗಳನ್ನು ಕಳುಹಿಸಿಕೊಡಲಿದೆ.

Published On - 10:00 am, Wed, 27 November 19