ಬೇಹುಗಾರಿಕೆ ಸಾಮರ್ಥ್ಯ ಹೆಚ್ಚಳಕ್ಕೆ ನಾಳೆ ಹಾರಲಿದೆ ಇಸ್ರೋ PSLV C48

|

Updated on: Dec 10, 2019 | 7:53 PM

ಹೈದರಾಬಾದ್: ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಪಿಎಸ್​ಎಲ್​ವಿ ಸಿ48 ಉಡಾವಣೆಯಾಗಲಿದೆ. ಇಂದು ಸಂಜೆ 4.35ರ ಸಮಯಕ್ಕೆ ಕೌಂಟ್ ಡೌನ್ ಪ್ರಾರಂಭವಾಗಲಿದ್ದು, 23ಗಂಟೆಗಳ ಕೌಂಟ್ ಡೌನ್ ನಂತರ ಅಂದರೆ ಡಿಸೆಂಬರ್ 11ರ ಸಂಜೆ 3.25 ನಿಮಿಷಕ್ಕೆ PSLV C48 ಉಡಾವಣೆಯಾಗಲಿದೆ. ಭಾರತ ದೇಶದ ಇಂಟಲಿಜೆನ್ಸ್ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಈ ಪ್ರಯೋಗ ನೆರವಾಗಲಿದೆ. RISAT 2BR1 ಉಪಗ್ರಹವನ್ನ ಕಕ್ಷೆಗೆ ಕಳುಹಿಸಲಾಗುತ್ತೆ. ಇದರ ಜೊತೆಯೇ 9 ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. […]

ಬೇಹುಗಾರಿಕೆ ಸಾಮರ್ಥ್ಯ ಹೆಚ್ಚಳಕ್ಕೆ ನಾಳೆ ಹಾರಲಿದೆ ಇಸ್ರೋ PSLV C48
Follow us on

ಹೈದರಾಬಾದ್: ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಪಿಎಸ್​ಎಲ್​ವಿ ಸಿ48 ಉಡಾವಣೆಯಾಗಲಿದೆ. ಇಂದು ಸಂಜೆ 4.35ರ ಸಮಯಕ್ಕೆ ಕೌಂಟ್ ಡೌನ್ ಪ್ರಾರಂಭವಾಗಲಿದ್ದು, 23ಗಂಟೆಗಳ ಕೌಂಟ್ ಡೌನ್ ನಂತರ ಅಂದರೆ ಡಿಸೆಂಬರ್ 11ರ ಸಂಜೆ 3.25 ನಿಮಿಷಕ್ಕೆ PSLV C48 ಉಡಾವಣೆಯಾಗಲಿದೆ.

ಭಾರತ ದೇಶದ ಇಂಟಲಿಜೆನ್ಸ್ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಈ ಪ್ರಯೋಗ ನೆರವಾಗಲಿದೆ. RISAT 2BR1 ಉಪಗ್ರಹವನ್ನ ಕಕ್ಷೆಗೆ ಕಳುಹಿಸಲಾಗುತ್ತೆ. ಇದರ ಜೊತೆಯೇ 9 ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಭೂಮಿಯಿಂದ 576ಕಿ.ಮೀ ಎತ್ತರದಲ್ಲಿನ ಕಕ್ಷೆಗೆ ಒಟ್ಟು 10 ಉಪಗ್ರಹಗಳನ್ನು ಸೇರಿಸಲು ಇಸ್ರೋ ತಯಾರಿ ನಡೆಸಿದೆ.

Published On - 3:18 pm, Tue, 10 December 19