ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಶನಿವಾರ(ಏಪ್ರಿಲ್ 22) ಪಿಎಸ್‌ಎಲ್‌ವಿ-ಸಿ55 ರಾಕೆಟ್ ಮೂಲಕ ಸಿಂಗಪೂರ್ನ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇಸ್ರೋದ ವಾಣಿಜ್ಯ ವಿಭಾಗದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಯೋಜನೆಯ ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಪಿಎಸ್‌ಎಲ್‌ವಿ ಮೂಲಕ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದು ಪಿಎಸ್‌ಎಲ್‌ವಿಯ 57 ನೇ ಉಡಾವಣೆ.
22.5 ಗಂಟೆಗಳ ಕೌಂಟ್ ಡೌನ್ ನಲ್ಲಿ 44.4 ಮೀಟರ್ ಎತ್ತರದಲ್ಲಿ ರಾಕೆಟ್ ಮೊದಲ ಲಾಂಚ್ ಪ್ಯಾಡ್ ನಲ್ಲಿ ಯಶಸ್ವಿಯಾಗಿ ಚಿಮ್ಮಿದೆ. ಪಿಎಸ್‌ಎಲ್‌ವಿ ನಿಗದಿತ ಕಕ್ಷೆಗೆ ಎರಡೂ ಉಪಗ್ರಹಗಳನ್ನು ಸೇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ಇದು ಪಿಎಸ್ಎಲ್ ವಿಯ 57 ನೇ ಮಿಷನ್ ಆಗಿದ್ದು ಇದರಲ್ಲಿ ಯಶಸ್ಸು ಸಾಧಿಸುವ ಮೂಲಕ ತನ್ನ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಅಂತಹ ವರ್ಗದ ವಾಣಿಜ್ಯ ಕಾರ್ಯಾಚರಣೆಗಳಿಗೆ ಅದರ ಸೂಕ್ತತೆಯನ್ನು ಪ್ರದರ್ಶಿಸಿದೆ ಎಂದು ಮಿಷನ್ ಕಂಟ್ರೋಲ್ ಸೆಂಟರ್‌ನಿಂದ ಸೋಮನಾಥ್ ತಿಳಿಸಿದರು.
PSLV- C55/TeLEOS-2 mission is accomplished successfully.
In a textbook launch, the vehicle placed TeLEOS-2 and LUMELITE-4 satellites precisely into their intended 586 km circular orbit.@NSIL_India@PIB_India
— ISRO (@isro) April 22, 2023
ಇದನ್ನೂ ಓದಿ: ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ: ಭವಿಷ್ಯದ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿಯೇ?
ಇನ್ನು ಪಿಎಸ್‌ಎಲ್‌ವಿ ಕೊಂಡೊಯ್ದ 2 ಉಪಗ್ರಹಗಳ ಪೈಕಿ ಒಂದನ್ನು ಭೂವೀಕ್ಷಣೆಗೆ ಹಾಗೂ ಮತ್ತೊಂದನ್ನು ತಂತ್ರಜ್ಞಾನ ಪ್ರಾತ್ಯಕ್ಷಿಕೆ ಒದಗಿಸಲೆಂದು ಅಭಿವೃದ್ಧಿಪಡಿಸಲಾಗಿದೆ. ಇದು ಮುಂಬರಲಿರುವ ಚಂದ್ರಯಾನ-3 ಹಾಗೂ ಸೌರ ಮಿಷನ್ ಆದಿತ್ಯ ಎಲ್-1 ಕಾರ್ಯಾಚರಣೆಗಳಿಗೂ ಸಹಕಾರಿಯಾಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:02 am, Sun, 23 April 23