ಮಹಾರಾಷ್ಟ್ರ ಇತಿಹಾಸದಲ್ಲಿಯೇ ಇಂದು ಕರಾಳ ದಿನ: ಕಾಂಗ್ರೆಸ್

|

Updated on: Nov 23, 2019 | 3:34 PM

ಮುಂಬೈ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಕರಾಳ ದಿನ ಆಗಿದೆ. ಯಾವುದೇ ಶಿಷ್ಟಾಚಾರ ಪಾಲಿಸದೆ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಬಿಜೆಪಿ ಅಣಕ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸುದ್ದಿಗೋಷ್ಠಿ ತಿಳಿಸಿದ್ದಾರೆ. ನಾವು ಸರ್ಕಾರ ರಚಿಸಲು ಸಿದ್ಧರಾಗಿದ್ದೆವು. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ದೊಡ್ಡ ಹಗರಣಕ್ಕೆ ಸಮವಾಗಿದೆ. ರಾಜ್ಯಪಾಲರು ಕೇವಲ ಬಿಜೆಪಿಗೆ ಮಾತ್ರ ಸಮಯ ನೀಡ್ತಾರೆ. ನಾವು ಕಾನೂನು ಹೋರಾಟ ಮಾಡ್ತೇವೆ ಎಂದು ಅವರು ಹೇಳಿದರು. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಮೈತ್ರಿ ಸದೃಢವಾಗಿದೆ. ನಮ್ಮ […]

ಮಹಾರಾಷ್ಟ್ರ ಇತಿಹಾಸದಲ್ಲಿಯೇ ಇಂದು ಕರಾಳ ದಿನ: ಕಾಂಗ್ರೆಸ್
Follow us on

ಮುಂಬೈ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಕರಾಳ ದಿನ ಆಗಿದೆ. ಯಾವುದೇ ಶಿಷ್ಟಾಚಾರ ಪಾಲಿಸದೆ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಬಿಜೆಪಿ ಅಣಕ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸುದ್ದಿಗೋಷ್ಠಿ ತಿಳಿಸಿದ್ದಾರೆ.

ನಾವು ಸರ್ಕಾರ ರಚಿಸಲು ಸಿದ್ಧರಾಗಿದ್ದೆವು. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ದೊಡ್ಡ ಹಗರಣಕ್ಕೆ ಸಮವಾಗಿದೆ. ರಾಜ್ಯಪಾಲರು ಕೇವಲ ಬಿಜೆಪಿಗೆ ಮಾತ್ರ ಸಮಯ ನೀಡ್ತಾರೆ. ನಾವು ಕಾನೂನು ಹೋರಾಟ ಮಾಡ್ತೇವೆ ಎಂದು ಅವರು ಹೇಳಿದರು.

ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಮೈತ್ರಿ ಸದೃಢವಾಗಿದೆ. ನಮ್ಮ ಶಾಸಕರ ಪೈಕಿ ಇಬ್ಬರು ಊರಿಗೆ ಹೋಗಿದ್ದು ಇಂದು ಸಂಜೆಗೆ ವಾಪಸಾಗುತ್ತಾರೆ. ಏನೇ ಆಗಲಿ ಬಿಜೆಪಿ ಮಂಡಿಸುವ ವಿಶ್ವಾಸ ಮತ ಯಾಚನೆ ನಿರ್ಣಯವನ್ನು ನಾವು ಸೋಲಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ತಿಳಿಸಿದ್ದಾರೆ. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

Published On - 2:00 pm, Sat, 23 November 19