ಕರ್ನೂಲ್, ಜೂ.10: ಆಂಧ್ರಪ್ರದೇಶ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆ ನಂತರ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಡುವೆ ರಾಜಕೀಯ ದ್ವೇಷಕ್ಕೆ ಕಾರಣವಾಗಿದೆ. ಇದೀಗ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ಮಂಡಲದ ಬೊಮ್ಮಿರೆಡ್ಡಿಪಲ್ಲೆ ಗ್ರಾಮದಲ್ಲಿ ಭಾನುವಾರ (ಜೂ.9) ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ (TDP) ಬೆಂಬಲಿಗನನ್ನು ಜಗನ್ಮಹೋನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತರನ್ನು ಗೌರಿನಾಥ್ ಚೌಧರಿ ಎಂದು ಗುರುತಿಸಲಾಗಿದೆ.
ಬೊಮ್ಮಿರೆಡ್ಡಿಪಲ್ಲೆ ಗ್ರಾಮ ಈ ಘಟನೆ ನಡೆದಿದೆ. ಈ ಹತ್ಯೆಯನ್ನು ಮಾಡಿದವರು ವೈಎಸ್‌ಆರ್‌ಸಿಪಿ ಪಕ್ಷದ ಪಮಯ್ಯ ಮತ್ತು ರಾಮಕೃಷ್ಣ ಎಂದು ಹೇಳಲಾಗಿದೆ. ಕುಡಗೋಲು ಮತ್ತು ಇತರ ಮಾರಕಾಯುಧಗಳಿಂದ ಸಂಜೆಯ ವೇಳೆ ಚೌಧರಿ ಮೇಲೆ ದಾಳಿ ಮಾಡಿದ್ದಾರೆ. ಟಿಡಿಪಿ ಮುಖಂಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಫಲಿತಾಂಶದ ದಿನದಂದು ಈ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ನಂತರ ಈ ಉದ್ವಿಗ್ನತೆ ಉತ್ತುಂಗಕ್ಕೇರಿತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣು
#WATCH | Andhra Pradesh: TDP leader Gourinath Chowdary was brutally murdered allegedly by YSRCP workers in Veldurthi Mandal, Kurnool district. The incident occurred in Bommirreddipalle village, where Gourinath Chowdary was attacked, resulting in his death. Forces have been… pic.twitter.com/oGHQbfUt30
— ANI (@ANI) June 10, 2024
ಇನ್ನು ಕೊಲೆಗಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತೆಲುಗುದೇಶಂ ಕಾರ್ಯಕರ್ತರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪೊಲೀಸರು ಇನ್ನು ಆರೋಪಿಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಜಿಲ್ಲಾ ಎಸ್ಪಿ ಜಿ.ಕೃಷ್ಣಕಾಂತ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ವೆಲ್ದುರ್ತಿ ವೃತ್ತ ನಿರೀಕ್ಷಕರು ವಿವರಗಳನ್ನು ಸಂಗ್ರಹಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:42 pm, Mon, 10 June 24