ಅರುಣಾಚಲ ಪ್ರದೇಶ ವಿಚಾರದಲ್ಲಿ ಮೋದಿ ಮೌನ ಯಾಕೆ ಎಂದು ಕೇಳುವ ಕಾಂಗ್ರೆಸ್, ನೆಹರು ಏನು ಮಾಡಿದರು ಎಂದು ಪರಿಶೀಲಿಸಲಿ: ನಿರ್ಮಲಾ ಸೀತಾರಾಮನ್

|

Updated on: Apr 06, 2023 | 9:32 PM

Nirmala Sitharaman: ಅವರು (ಕಾಂಗ್ರೆಸ್) 'ಅಯ್ಯೋ, ಪ್ರಧಾನಿ ಮಾತನಾಡುವುದಿಲ್ಲ ಎಂದು ಹೇಳುತ್ತಾರೆ. ರಾಹುಲ್ ಗಾಂಧಿಯವರು ದಯವಿಟ್ಟು ಅವರ ಮೊದಲ ಪ್ರಧಾನಿ, ನಮ್ಮ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಏನು ಮಾಡಿದರು ಎಂಬುದನ್ನು ಪರಿಶೀಲಿಸಲಿ.

ಅರುಣಾಚಲ ಪ್ರದೇಶ ವಿಚಾರದಲ್ಲಿ ಮೋದಿ ಮೌನ ಯಾಕೆ ಎಂದು ಕೇಳುವ ಕಾಂಗ್ರೆಸ್, ನೆಹರು ಏನು ಮಾಡಿದರು ಎಂದು ಪರಿಶೀಲಿಸಲಿ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು ಈಶಾನ್ಯದತ್ತ ಗಮನ ಹರಿಸಲೇ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಭಾರತದ ಗಡಿಯಲ್ಲಿ ಚೀನಾದ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮೌನ ವಹಿಸಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದ್ದಕ್ಕೆ ನಿರ್ಮಲಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 1962ರಲ್ಲಿ, ಇಡೀ ಈಶಾನ್ಯವನ್ನು ಏನಾದರೂ ಅನುಭವಿಸಲಿ ಎಂದು ಬಿಟ್ಟು ಬಿಡಲಾಗಿತ್ತು. ನೆಹರೂ ಅವರು ಈ ಪ್ರದೇಶವನ್ನು ಕಡೆಗಣಿಸಿದ್ದರು ಎಂದಿದ್ದಾರೆ ನಿರ್ಮಲಾ.

ಚೀನಾದವರು ಅರುಣಾಚಲ ಪ್ರದೇಶಕ್ಕೆ ಬರುವುದನ್ನು ನಾವು ನಿಲ್ಲಿಸಿದ್ದೇವೆ. ನಮ್ಮ ಕ್ರಮವು ಅದನ್ನು ಹೇಳುತ್ತದೆ. ಅವರು (ಕಾಂಗ್ರೆಸ್) ‘ಅಯ್ಯೋ, ಪ್ರಧಾನಿ ಮಾತನಾಡುವುದಿಲ್ಲ ಎಂದು ಹೇಳುತ್ತಾರೆ. ರಾಹುಲ್ ಗಾಂಧಿಯವರು ದಯವಿಟ್ಟು ಅವರ ಮೊದಲ ಪ್ರಧಾನಿ, ನಮ್ಮ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಏನು ಮಾಡಿದರು ಎಂಬುದನ್ನು ಪರಿಶೀಲಿಸಲಿ. ನೆಹರು ಈಶಾನ್ಯವನ್ನು ಕಡೆಗಣಿಸಿದ್ದರು ಎಂದು  ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ನಿರ್ಮಲಾ ಉತ್ತರಿಸಿದ್ದಾರೆ.

ನೀವು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳಿಗೆ ಪ್ರಯಾಣಿಸಿದರೆ, ಜನರು ಸ್ವತಃ ಹೇಳುತ್ತಾರೆ. ಮೈದಾನದಲ್ಲಿರುವ ಅರುಣಾಚಲ ಪ್ರದೇಶದ ಜನರು ಭಾರತದೊಂದಿಗೆ ಗಟ್ಟಿಯಾಗಿ ನಿಂತಿದ್ದರು. ಅಲ್ಲಿಂದ ಚೀನಿಯರು ದೂರ ಹೋಗಬೇಕಾಯಿತು ಎಂದು ಕೇಂದ್ರ ಸಚಿವರು ಹೇಳಿದರು.

ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದ್ದಕ್ಕೆ ಕಾಂಗ್ರೆಸ್ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ನೆರೆಯ ದೇಶಕ್ಕೆ ಪ್ರಧಾನಿ ಮೋದಿಯವರ “ಕ್ಲೀನ್ ಚಿಟ್” ಮತ್ತು ಗಡಿಯಲ್ಲಿ ಚೀನಾದ ಕ್ರಮಗಳ ಬಗ್ಗೆ ಅವರ ದಿವ್ಯ ಮೌನದ ಫಲಿತಾಂಶವಾಗಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾದ ನಂತರ ರಾಹುಲ್, ಪ್ರಿಯಂಕಾರನ್ನು ಭೇಟಿ ಮಾಡಿದ ನವಜೋತ್ ಸಿಂಗ್ ಸಿಧು

ನೆರೆಯ ದೇಶವು ದಕ್ಷಿಣ ಟಿಬೆಟ್ ಭಾಗ ಎಂದು ಹೇಳಿಕೊಳ್ಳುವ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಚೀನಾದ ಹೆಸರುಗಳನ್ನು ಬೀಜಿಂಗ್ ಘೋಷಿಸಿದ್ದನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ