ಟಿಕ್​ ಟಾಕ್​ ಸ್ಟಾರ್​ ಶಿವಾನಿ ಹತ್ಯೆ ಮಾಡಿದ್ದು ಇವನೇನಂತೆ! ಯಾಕೆ ಗೊತ್ತಾ?

|

Updated on: Jun 30, 2020 | 5:48 PM

ಚಂಡೀಗಢ: ಜೂನ್ 28ರಂದು ಸೋನಿಪತ್​ನಲ್ಲಿ ಟಿಕ್​ ಟಾಕ್​ ಸ್ಟಾರ್​ ಶಿವಾನಿ ತನ್ನ ಸಲೂನ್ ಶಾಪ್​ನ ಬೆಡ್​ ಬಾಕ್ಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ನಿನ್ನೆ ಶಿವಾನಿಯನ್ನ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೀಫ್ ಮೊಹಮದ್ ಬಂಧಿತ ಆರೋಪಿ. ವೃತ್ತಿಯಲ್ಲಿ ಬ್ಯೂಟಿಷಿನ್ ಆಗಿರುವ ಶಿವಾನಿಯನ್ನು ಜೂನ್ 28ರಂದು ಹತ್ಯೆಗೈಯಲಾಗಿದೆ. ಪ್ರೀತಿಗೆ ನಿರಾಕರಿಸಿದ ಕಾರಣ ಶಿವಾನಿಯನ್ನು ಆರೀಫ್ ಮೊಹಮದ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಕ್​ಟಾಕ್​ನಲ್ಲಿ ಶಿವಾನಿ ಪಾಪ್ಯುಲರ್ ಆಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಫಾಲೋವರ್​​ಗಳನ್ನು […]

ಟಿಕ್​ ಟಾಕ್​ ಸ್ಟಾರ್​ ಶಿವಾನಿ ಹತ್ಯೆ ಮಾಡಿದ್ದು ಇವನೇನಂತೆ! ಯಾಕೆ ಗೊತ್ತಾ?
Follow us on

ಚಂಡೀಗಢ: ಜೂನ್ 28ರಂದು ಸೋನಿಪತ್​ನಲ್ಲಿ ಟಿಕ್​ ಟಾಕ್​ ಸ್ಟಾರ್​ ಶಿವಾನಿ ತನ್ನ ಸಲೂನ್ ಶಾಪ್​ನ ಬೆಡ್​ ಬಾಕ್ಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ನಿನ್ನೆ ಶಿವಾನಿಯನ್ನ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೀಫ್ ಮೊಹಮದ್ ಬಂಧಿತ ಆರೋಪಿ.

ವೃತ್ತಿಯಲ್ಲಿ ಬ್ಯೂಟಿಷಿನ್ ಆಗಿರುವ ಶಿವಾನಿಯನ್ನು ಜೂನ್ 28ರಂದು ಹತ್ಯೆಗೈಯಲಾಗಿದೆ. ಪ್ರೀತಿಗೆ ನಿರಾಕರಿಸಿದ ಕಾರಣ ಶಿವಾನಿಯನ್ನು ಆರೀಫ್ ಮೊಹಮದ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಕ್​ಟಾಕ್​ನಲ್ಲಿ ಶಿವಾನಿ ಪಾಪ್ಯುಲರ್ ಆಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಫಾಲೋವರ್​​ಗಳನ್ನು ಹೊಂದಿದ್ದಳು.

ಅಕ್ಕನ ಜೊತೆ ಸೇರಿ ಶಿವಾನಿ ಸಲೂನ್ ಶಾಪ್​ ನಡೆಸುತ್ತಿದ್ದರು. ಜುಲೈ 28ರಂದು ರಾತ್ರಿ ಅಸೋಸಿಯೇಟ್ ನೀರಜ್ ಅವರು ನಗರದತ್ತ ತೆರಳಿದ್ದರು. ಶಿವಾನಿ ಅಕ್ಕ ಸಹ ಮನೆಗೆ ತೆರಳಿದರು. ಈ ವೇಳೆ ಸಲೂನ್ ಶಾಪ್​ಗೆ ಬಂದ ಆರೋಪಿ ಶಿವಾನಿಯನ್ನು ದುಪ್ಪಟ ಬಳಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ನಂತರ ಶಾಪ್​ಗೆ ಬಂದಾಗ ನೀರಜ್​ಗೆ ಶಿವಾನಿ ಮೃತದೇಹ ಕಾಣಿಸಿದೆ.

Published On - 5:46 pm, Tue, 30 June 20