ಅಯೋಧ್ಯೆ, ಉತ್ತರಪ್ರದೇಶ, ಜನವರಿ 19: ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗ ಉಮಾಶಂಕರ್ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಒಂದು ಕೆಜಿ ಚಿನ್ನ ನೀಡಿದ್ದಾರೆ. ಇದೇ ವೇಳೆ ಉಮಾಶಂಕರ್ ದೀಕ್ಷಿತ್ ಅವರಿಗೆ ರಾಮ ಮಂದಿರ ಟ್ರಸ್ಟ್ ವಿಶೇಷ ಆಹ್ವಾನ ನೀಡಿದ್ದು, ದೀಕ್ಷಿತ್ ಅದಾಗಲೇ ಅಯೋಧ್ಯೆಗೆ ಆಗಮಿಸಿದ್ದಾರೆ.
ಅಮೆರಿಕಾದಿಂದ ಆಗಮಿಸಿರುವ ಉಮಾಶಂಕರ್ ದೀಕ್ಷಿತ್ ಅವರು ಕ್ಯಾಲಿಫೋರ್ನಿಯಾದಲ್ಲಿ ಸಿದ್ದಿ ವಿನಾಯಕ ದೇವಾಲಯದ ಮುಖ್ಯಸ್ಥರಾಗಿದ್ದಾರೆ. ಅಲ್ಲಿನ ಹಿಂದೂಗಳಿಂದ ಈ ಚಿನ್ನವನ್ನು ಸಂಗ್ರಹಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಅರ್ಪಿಸಿದ್ದಾರೆ. ಅಮೆರಿಕಾದ ದೇವಾಲಯಗಳಲ್ಲೂ ಜನವರಿ ೨೧ ರ ಮಧ್ಯರಾತ್ರಿಯಿಂದಲೇ ರಾಮತಾರಕ ಜಪ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Also Read: ಏಕಾಶಿಲಾ ಹನುಮ.. ಅದೂ ಸಹ ಶಿಲ್ಪಿ ಅರುಣ್ ಯೋಗಿರಾಜ್ ಅವರದ್ದೇ ಕೆತ್ತನೆ, ಇಲ್ಲಿದೆ ನೋಡಿ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ