ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾ ಉತ್ಸವದ ಕಬಡ್ಡಿ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಎರಡು ತಂಡಗಳು ಕುರ್ಚಿ, ಆಯುಧಗಳಿಂದ ಹಿಂಸಾತ್ಮಕ ಕಾದಾಟವನ್ನು ನಡೆಸಿದ್ದಾರೆ. ಇದೀಗ ಈ ಕಾಳಗದ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ್ರೆ ಬೆಚ್ಚಿ ಬೀಳಿಸುವಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಎರಡು ತಂಡದ ಸದಸ್ಯರು ಖರ್ಚಿಗಳಿಂದ, ಕೈಗೆ ಸಿಕ್ಕಿದ ವಸ್ತುಗಳಿಂದ ಪರಸ್ಪರ ಹೊಡೆದಾಡುಕೊಳ್ಳುತ್ತಿರುವುದನ್ನು ಕಾಣಬಹುದು. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದು ಕಬಡ್ಡಿ ಅಲ್ಲ, WW ಎಂದು ಕರೆದಿದ್ದಾರೆ.
ಈ ವಿಡಿಯೋ ಎಲ್ಲ ಕಡೆ ವೇಗವಾಗಿ ವೈರಲ್ ಆಗಿದ್ದು, 180,000 ವೀಕ್ಷಣೆ ಪಡೆದುಕೊಂಡಿದೆ. ಸಾವಿರಕ್ಕೂ ಹೆಚ್ಚು ಲೈಕ್ ಪಡೆದುಕೊಂಡಿದ್ದು, ಈ ವಿಡಿಯೋಗೆ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರ ಇವರುಗಳು ನಮ್ಮ ದೇಶದ ಭವಿಷ್ಯ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಇಷ್ಟು ದೊಡ್ಡ ಜಗಳ ನಡೆಯುತ್ತಿದೆ, ಆದರೆ ಈ ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಪಾಡಿಗೆ ಟೇಬಲ್ ಮೇಲೆ ಕುಳಿತುಕೊಂಡಿದ್ದಾನೆ. ಅವನಿಗೆ ಯಾವುದರ ಚಿಂತೆಯು ಇಲ್ಲ ಎಂದು ಹಾಸ್ಯವಾಗಿ ಕಮೆಂಟ್ ಮಾಡಿದ್ದಾರೆ.
Kalesh in IIT Kanpur pic.twitter.com/J5QCeBmjRo
— Aryan Trivedi (@AryanTrivedi_7) October 8, 2023
ಇದನ್ನೂ ಓದಿ: ಮಧ್ಯರಾತ್ರಿ ಎದುರು ಮನೆ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ದೆವ್ವನಾ? ವಿಡಿಯೋ ವೈರಲ್ ಆಗಿದೆ
ಐಐಟಿ ಕಾನ್ಪುರದಲ್ಲಿ ನಡೆದ ಅಂತರ್ ರಾಜ್ಯ ಕ್ರೀಡಾ ಕೂಟವಾಗಿತ್ತು. ಇದರಲ್ಲಿ 400 ಹೆಚ್ಚು ಕಾಲೇಜುಗಳು ಭಾಗವಹಿಸುತ್ತದೆ. ಇನ್ನು ಈ ಎರಡು ತಂಡಗಳು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿ ವಿದ್ಯಾರ್ಥಿಗಳಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಐಐಟಿ ಸೂಕ್ತ ಕ್ರಮವನ್ನು ತೆಗೆದುಕೊಂಡು, ಎರಡು ತಂಡಗಳನ್ನು ಸ್ಪರ್ಧೆಯಿಂದ ನಿಷೇಧಿಸಲಾಗಿದೆ. ಘಟನೆಯ ಬಗ್ಗೆ ಎರಡು ತಂಡಗಳ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ