ಮಧ್ಯರಾತ್ರಿ ಎದುರು ಮನೆ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ದೆವ್ವನಾ? ವಿಡಿಯೋ ವೈರಲ್ ಆಗಿದೆ

ವೈರಲ್ ವಿಡಿಯೋವನ್ನು ಅನಿರುದ್ಧ ಜೋಶಿ ಎಂಬ ಮಹಿಳೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ರಾತ್ರಿ ನನಗೆ ಸುತರಾಂ ನಿದ್ದೆ ಬರಲಿಲ್ಲ ಎಂದಿದ್ದಾರೆ. ಆಕೆ ಎದುರಿಸಿದ ಸಮಸ್ಯೆ ಏನೆಂದರೆ, ಆ ರಾತ್ರಿ ನಿದ್ದೆ ಬಾರದೆ ಬಾಲ್ಕನಿಯಲ್ಲಿ ಸ್ವಲ್ಪ ಸಮಯ ಕಳೆಯಲು ಹೊರಗೆ ಬಂದಿದ್ದರಂತೆ. ತಂಪಾದ ಹವಾ ಬೀಸುತ್ತಿದ್ದು, ಸ್ವಲ್ಪ ಹೊತ್ತು ಬಾಲ್ಕನಿಯಲ್ಲಿ ಕುಳಿತುಕೊಳ್ಳುವ ಆಲೋಚನೆ ಮಾಡಿದ್ದಾರೆ. ಆದರೆ ಆ ಒಂದು ದೃಶ್ಯವನ್ನು ಕಂಡು ಭಯದಿಂದ ನಖಶಿಖಾಂತ ನಡುಗಿದ್ದಾರೆ

ಮಧ್ಯರಾತ್ರಿ ಎದುರು ಮನೆ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ದೆವ್ವನಾ? ವಿಡಿಯೋ ವೈರಲ್ ಆಗಿದೆ
ಎದುರು ಮನೆ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ದೆವ್ವನಾ?
Follow us
ಸಾಧು ಶ್ರೀನಾಥ್​
|

Updated on:Aug 23, 2023 | 4:43 PM

ಭೂತ ಪಿಶಾಚಿಗಳ ಸಿನಿಮಾ ನೋಡುವವರು ರಾತ್ರಿಯಿಡೀ ನಿದ್ದೆ ಮಾಡುವುದಿಲ್ಲ. ಹಗಲೋ, ರಾತ್ರಿಯೋ ಒಟ್ನಲ್ಲಿ ಕನ್ನಡಿ ನೋಡೋಕೆ ಹೆದರುವವರಿದ್ದಾರೆ. ರಿಯಲ್ ಹಾಗೂ ರೀಲ್ ನಲ್ಲೂ ದೆವ್ವ ಕಂಡರೆ ಇನ್ನೇನಿದೆ? ಅದೂ ನಡು ರಾತ್ರಿ ವೇಳೆ ಎದುರು ಮನೆಯ ಬಾಲ್ಕನಿ (balcony) ಬಳಿ ಬಿಳಿ ದೆವ್ವ (ghost) ಕಂಡರೆ? ಉಟ್ಟ ಬಟ್ಟೆ ಒದ್ದೆ ಒದ್ದೆ, ಅಷ್ಟೇಯಾ. ಕೆಲವರು ದೇವರ ಗುಡಿಗೆ ಅಥವಾ ಪೂಜಾ ಮಂದಿರಕ್ಕೆ ತಾಯಿತ ಕಟ್ಟಿಸಿಕೊಳ್ಳೋಕೆ ಓಡುತ್ತಾರೆ. ಇನ್ನು ಕೆಲವರು ಜಾಗರಣೆ ಮಾಡುತ್ತಾ ದೇವಾ! ದೆವ್ವ ಮನೆಯೊಳಗೆ ಬರುವುದು ಬೇಡಾಪ್ಪಾ ಎಂದು ಕಾವಲು ಕಾಯುತ್ತಾರೆ. ಇತರರು ಬೆಡ್​ಶೀಟ್,​​ ಕಂಬಳಿಯಿಂದ ಮುಚ್ಚಿಕೊಳ್ಳುತ್ತಾರೆ ಮತ್ತು ಹೊರಗೆ ನೋಡಲೂ ಅವರಿಗೆ ಧೈರ್ಯ ಸಾಕಾಗುವುದಿಲ್ಲ. ಗಾಯತ್ರಿ ಮಂತ್ರ, ಹನುಮಾನ್ ಚಾಲೀಸಾ ಮತ್ತಿತರೆ ಮಂತ್ರಗಳನ್ನು ಪಟಪಟನೆ ಪಠಿಸತೊಡಗುತ್ತಾರೆ. ದೆವ್ವ ಕಂಡರೆ ಹೆದರಿ ಜ್ವರ ಬಂದು ನಾಲ್ಕೈದು ದಿನ ಹಾಸಿಗೆ ಹಿಡಿದವರೂ ಇದ್ದಾರೆ. ದೆವ್ವಗಳ ಬಗ್ಗೆ ಬರೆಯುವುದು ಸುಲಭ. ಅದರ ಭಯ ಅನುಭವಿಸಿದವರಿಗೆ ಮಾತ್ರವೇ ಗೊತ್ತಾಗುತ್ತದೆ. ಇದೀಗ ಮಹಿಳೆಯೊಬ್ಬರು (woman) ತಮ್ಮ ಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇವರು ಹೇಳುವುದನ್ನು ಕೇಳಿ ಪಕ್ಕದಲ್ಲಿದ್ದವರು ನಕ್ಕರು ಅಷ್ಟೆ. ಆದರೂ ಮತ್ತೊಂದೆಡೆ ರಾತ್ರಿ ವೇಳೆ ಇಂತಹ ದೃಶ್ಯ ನಮಗೂ ಎದುರಾದರೆ ಗತಿಯೇನಪ್ಪಾ ಎಂಬ ಆತಂಕದಲ್ಲಿದ್ದಾರೆ.

ಈ ವೈರಲ್ ವಿಡಿಯೋವನ್ನು ಅನಿರುದ್ಧ ಜೋಶಿ ಎಂಬ ಮಹಿಳೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ರಾತ್ರಿ ನನಗೆ ಸುತರಾಂ ನಿದ್ದೆ ಬರಲಿಲ್ಲ ಎಂದಿದ್ದಾರೆ. ಆಕೆ ಎದುರಿಸಿದ ಸಮಸ್ಯೆ ಏನೆಂದರೆ, ಆ ರಾತ್ರಿ ನಿದ್ದೆ ಬಾರದೆ ಬಾಲ್ಕನಿಯಲ್ಲಿ ಸ್ವಲ್ಪ ಸಮಯ ಕಳೆಯಲು ಹೊರಗೆ ಬಂದಿದ್ದರಂತೆ. ತಂಪಾದ ಹವಾ ಬೀಸುತ್ತಿದ್ದು, ಸ್ವಲ್ಪ ಹೊತ್ತು ಬಾಲ್ಕನಿಯಲ್ಲಿ ಕುಳಿತುಕೊಳ್ಳುವ ಆಲೋಚನೆ ಮಾಡಿದ್ದಾರೆ. ಆದರೆ ಆ ಒಂದು ದೃಶ್ಯವನ್ನು ಕಂಡು ಭಯದಿಂದ ನಖಶಿಖಾಂತ ನಡುಗಿದ್ದಾರೆ. ಇದ್ದಕ್ಕಿದ್ದಂತೆ ಅವಳ ಹೃದಯ ನಿಂತಿತು. ಭಯದಿಂದ 10-15 ಬಾರಿ ಹನುಮಂತನ ಚಾಲೀಸಾವನ್ನು ಓದುತ್ತಾ ಮನೆ ಒಳಕ್ಕೆ ನುಗ್ಗಿ ಬಂದಿದ್ದಾರೆ. ಅಷ್ಟಕ್ಕೂ ಅವರು ನೋಡಿದ್ದಾದರೂ ಏನು ಅಂದರೆ… ಅವರ ಎದುರು ಮನ ಎಯ ಬಾಲ್ಕನಿಯ ಬಳಿ ಮರದ ಮೇಲೆ ಅವರು ಅಕ್ಷರಶಃ ದೆವ್ವವನ್ನು ನೋಡಿಬಿಟ್ಟಿದ್ದಾರೆ. ಆ ಭಯಾನಕ ದೃಸ್ಯ ಹೇಗಿತ್ತು ಅಂದರೆ ಅಪರಿಚಿತ ಹೆಣ್ಣಿನ ರೂಪವೊಂದು ಮರಕ್ಕೆ ನೇತಾಡುತ್ತಾ ಇತ್ತು.. ಮಧ್ಯರಾತ್ರಿ ಮರಗಳಲ್ಲಿನ ದೆವ್ವದ ಕಥೆಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಹುಣಸೆ ಮರ ಸೇರಿದಂತೆ, ದೊಡ್ಡ ಮರಗಳಿಗೆ ದೆವ್ವ ನೇತಾಡುವ ಕಥೆಗಳು ಅವರಿಗೆ ನೆನಪಾಗಿವೆ. ಆ ಮರದಲ್ಲಿರುವುದು ಅದು ಮಹಿಳೆಯ ದೆವ್ವವೇ ಸರು ಎಂದು ಖಚಿತವಾಗುವಷ್ಟು ಸ್ಪಷ್ಟವಾಗಿತ್ತು ಆ ದೃಶ್ಯ ಅವರಿಗೆ. ಅಷ್ಟೇ ಆ ಇಡೀ ರಾತ್ರಿ ಅವರಿಗೆ ನಿದ್ರೆ ಹತ್ತಿರಕ್ಕೂ ಬಂದಿಲ್ಲ. ಅವರು ಹನುಮಾನ್ ಚಾಲೀಸಾವನ್ನು ಕೇಳುವ ಮೂಲಕ ತಮ್ಮ ಭಯವನ್ನು ನಿವಾರಿಸಿಕೊಳ್ಳು ಯತ್ನಿಸಿದ್ದಾರೆ.

ರಾತ್ರಿಯಿಡೀ ದೆವ್ವದ ಭಯದಲ್ಲಿ ಕಳೆದ ಆ ಮಹಿಳೆ ಬೆಳಗಾನೆದ್ದು ದೆವ್ವ ಅಲ್ಲೇ ಇದೆಯಾ ಎಂದು ಇಣುಕಿ ನೋಡಿದ್ದಾರೆ! ಧೈರ್ಯ ತಂದುಕೊಂಡು ಬಾಲ್ಕನಿಗೆ ಹೋಗಿದ್ದಾರೆ. ಆದರೆ ಅಲ್ಲಿ ಕಂಡದ್ದು ಅವಳಿಗೆ ನಗು ತರಿಸಿದೆ. ಅಲ್ಲಿ ಗಾಳಿಗೆ ಒಣಗಿಹಾಕಿದ್ದ ನೈಟಿ ಕಂಡು ಗಾಬರಿಯಾಗಿದೆಯಷ್ಟೇ ಅವರಿಗೆ! ಅದು ಹೆಣ್ಣು ದೆವ್ವ ಎಂದು ಸಾರಲು ಅದು ನೈಟಿ ರೂಪದಲ್ಲಿ ಇದ್ದಿದ್ದೂ ಸಕಾರಣವಾಗಿದೆ. ಏನೇ ಆಗಲಿ, ಹಿಂದಿನ ರಾತ್ರಿಯ ಘಟನೆಯನ್ನು ನೆನಪಿಸಿಕೊಂಡ ಅವರಿಗೆ ನಗು ನಿಲ್ಲಲಿಲ್ಲ. ಯಾರೋ ವಿಚಿತ್ರದವರು ನೈಟಿಯನ್ನು ಒಗೆದು, ನೈಟಿಯಂತೆಯೇ ಹ್ಯಾಂಗರ್ ಹಾಕಿ ಮರಕ್ಕೆ ನೇತು ಹಾಕಿಬಿಟ್ಟಿದ್ದಾರೆ ಅಷ್ಟೇ! ರಾತ್ರಿ ಈ ಮಹಿಳೆ ಆ ನೈಟಿಯನ್ನೇ ನೋಡಿರುವುದು. ರಾತ್ರಿಯಿಡೀ ತಾವು ಹಾಕಿಕೊಂಡಿದ್ದ ನೈಟಿಯಲ್ಲೇ ಮುದುಡಿಕೊಂಡು, ತುಂಬಾ ತುಂಬಾ ಹೆದರಿಕೊಂಡು ಕಾಲ ಕಳೆದಿದ್ದಾರೆ. ತಾವು ಹೀಗೆ ಬೆಚ್ಚಿಬಿದ್ದ ಪ್ರಸಂಗವನ್ನ ನೆನೆದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವನ್ನು ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ. ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ಕೆಲವರಂತೂ ಕಥೆಯನ್ನು ಚೆನ್ನಾಗಿ ಹೆಣೆದಿದ್ದೀರಿ. ಇದು ನಿಜವಲ್ಲ. ಇದನ್ನು ವಿಡಿಯೋಗಾಗಿ ಮಾಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನೀವೆನಂತೀರಿ? ಮೊದಲು ವಿಡಿಯೋ ನೋಡಿ!

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:39 pm, Wed, 23 August 23

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್