AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಒಂದೇ ರನ್‌ವೇಯಲ್ಲಿ ವಿಮಾನಗಳ ಟೇಕ್​ ಆಫ್​​, ಲ್ಯಾಂಡಿಂಗ್​ ಪ್ರಕ್ರಿಯೆ, ತಪ್ಪಿದ ಭಾರೀ ಅನಾಹುತ

ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು. ಇಂದು (ಆ.23) ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಸ್ತಾರಾ ಏರ್‌ಲೈನ್ಸ್‌ನ ವಿಮಾನವೊಂದಕ್ಕೆ ಲ್ಯಾಂಡಿಂಗ್​​​​ಗೆ ಅನುಮತಿ ನೀಡಲಾಗಿತ್ತು. ಆದರೆ ಇದೇ ಸಮಯದಲ್ಲಿ ದೆಹಲಿಯಿಂದ ಬಾಗ್ಡೋಗ್ರಾಗೆ (UK-725) ಹೊರಟ ಮತ್ತೊಂದು ವಿಮಾನ ಟೇಕ್​​ ಆಫ್​​ ಪ್ರಕ್ರಿಯೆಯಲ್ಲಿತ್ತು.

ದೆಹಲಿ: ಒಂದೇ ರನ್‌ವೇಯಲ್ಲಿ ವಿಮಾನಗಳ ಟೇಕ್​ ಆಫ್​​, ಲ್ಯಾಂಡಿಂಗ್​ ಪ್ರಕ್ರಿಯೆ, ತಪ್ಪಿದ ಭಾರೀ ಅನಾಹುತ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 23, 2023 | 3:44 PM

Share

ಹೊಸದಿಲ್ಲಿ, ಆಗಸ್ಟ್ 23: ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಭಾರೀ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು. ಇಂದು (ಆ.23) ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಸ್ತಾರಾ ಏರ್‌ಲೈನ್ಸ್‌ನ ವಿಮಾನವೊಂದಕ್ಕೆ ಲ್ಯಾಂಡಿಂಗ್​​​​ಗೆ ಅನುಮತಿ ನೀಡಲಾಗಿತ್ತು. ಆದರೆ ಇದೇ ಸಮಯದಲ್ಲಿ ದೆಹಲಿಯಿಂದ ಬಾಗ್ಡೋಗ್ರಾಗೆ (UK-725) ಹೊರಟ ಮತ್ತೊಂದು ವಿಮಾನ ಟೇಕ್​​ ಆಫ್​​ ಪ್ರಕ್ರಿಯೆಯಲ್ಲಿತ್ತು. ಈ ವಿಚಾರ ತಿಳಿದು ತಕ್ಷಣ ATC (Air Traffic Control) ದೆಹಲಿಯಿಂದ ಬಾಗ್ಡೋಗ್ರಾಗೆ ಹೊರಟ ವಿಮಾನಕ್ಕೆ ಟೇಕ್-ಆಫ್ ಮಾಡದಂತೆ ಸೂಚನೆ ನೀಡಿ, ಭಾರೀ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ದೆಹಲಿ-ಬಾಗ್ಡೋಗ್ರಾ ವಿಮಾನವು ಇತ್ತೀಚೆಗೆ ಉದ್ಘಾಟನೆಗೊಂಡ ರನ್‌ವೇಯಲ್ಲಿ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು. ಅದೇ ಸಮಯದಲ್ಲಿ, ಅಹಮದಾಬಾದ್‌ನಿಂದ ಬರುತ್ತಿದ್ದ ವಿಸ್ತಾರಾ ವಿಮಾನವು ಇದೇ ರನ್‌ವೇಯಲ್ಲಿ ಬಂದು ಇಳಿದಿದೆ. ತಕ್ಷಣ ರನ್‌ವೇಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಟೇಕ್​​ ಆಫ್​​ ಆಗುತ್ತಿದ್ದ ವಿಮಾನಕ್ಕೆ ವಾಯು ಸಂಚಾರ ನಿಯಂತ್ರಣಾಲಯ (ATC) ಸೂಚನೆ ನೀಡಿದೆ.

ಇನ್ನು ಎರಡೂ ವಿಮಾನಗಳಿಗೆ ಏಕಕಾಲದಲ್ಲಿ ಒಂದೇ ರನ್‌ವೇಯಲ್ಲಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್​​ಗೆ ಅನುಮತಿ ನೀಡಲಾಗಿತ್ತು. ಆದರೆ ತಕ್ಷಣ ATC (ವಾಯು ಸಂಚಾರ ನಿಯಂತ್ರಣಾಲಯ) ನಿಯಂತ್ರಣ ತೆಗೆದುಕೊಂಡು ಭಾರೀ ಅನಾಹುತವನ್ನು ತಪ್ಪಿಸಿದೆ. ಈ ಸಮಯದಲ್ಲಿ ಕರ್ತವ್ಯದಲ್ಲಿದ್ದ ಎಟಿಸಿ ಅಧಿಕಾರಿಯು ಟೇಕ್-ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ವಿಸ್ತಾರಾ ವಿಮಾನದ ಲ್ಯಾಂಡಿಂಗ್​​​ಗೆ ನಿರ್ದೇಶಿಸಲಾಗಿತ್ತು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಇದನ್ನೂ ಓದಿ:  ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್​​ಜೆಟ್ ವಿಮಾನದಲ್ಲಿ ಅಗ್ನಿ ಅವಘಡ

ಇನ್ನು ವಿಮಾನಯಾನ ಅಧಿಕಾರಿಗಳು ದೆಹಲಿಯಿಂದ ಬಾಗ್ಡೋಗ್ರಾ ಹೋರಾಟ ವಿಮಾನದ ಇಂಧನ ಮೀಸಲು ಪರೀಕ್ಷೆ ಮತ್ತು ಬಾಗ್ಡೋಗ್ರಾ ಗಮ್ಯಸ್ಥಾನದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ನೋಡಿಕೊಂಡು ಟೇಕ್​​ ಆಪ್ ಮಾಡಲಾಗುವುದು ಎಂದು ಹೇಳಿದ್ದರು. ಒಂದು ವೇಳೆ ಟೇಕ್​​ ಆಪ್​​​ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದಿದ್ದರೆ ಖಂಡಿತ ದೊಡ್ಡ ಅನಾಹುತವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳು ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಕಾರ್ಯವಿಧಾನಗಳ ಸಮಯದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.

ಇನ್ನು ATC ಯಿಂದ ಬಂದ ಸೂಚನೆಯಂತೆ ಟೇಕ್-ಆಫ್ ಪ್ರಕ್ರಿಯೆಯನ್ನು ಮುಂದೂಡಲಾಗುವುದು ಎಂದು ಪೈಲೆಟ್​​ ಹೇಳಿದಾಗ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಆಂತಕ ಉಂಟಾಗಿದೆ ಎಂದು ಹೇಳಿದ್ದಾರೆ. ನಂತರ ಎಲ್ಲವನ್ನು ನೋಡಿಕೊಂಡು ದೆಹಲಿಯಿಂದ ಬಾಗ್ಡೋಗ್ರಾಗೆ ಹೊರಟಕ್ಕೆ ಟೇಕ್​​ ಆಫ್ ಆದೇಶವನ್ನು ನೀಡಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ