ಇಷ್ಟಾರ್ಥ ಸಿದ್ಧಿಗಾಗಿ ಭಕ್ತರಿಂದ ಊರಿನ ತುಂಬ ದೇವಸ್ಥಾನಗಳ ನಿರ್ಮಾಣ, ಸದ್ಯ ಈ ಗ್ರಾಮದಲ್ಲಿವೆ 120 ದೇಗುಲಗಳು!

ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಮೇಟಪಲ್ಲಿ ಮಂಡಲದ ವೆಲ್ಲುಲ್ಲ ಗ್ರಾಮವು 5,000 ಜನಸಂಖ್ಯೆಯನ್ನು ಹೊಂದಿದೆ. ಜೊತೆಗೆ ಈ ಗ್ರಾಮದಲ್ಲಿ 120ಕ್ಕೂ ಹೆಚ್ಚು ದೇವಾಲಯಗಳೂ ಇವೆ. ಅದೊಂದು ಆಧ್ಯಾತ್ಮಿಕ ಗ್ರಾಮ. ಅಲ್ಲಿ ಇಷ್ಟಾರ್ಥಗಳು ಈಡೇರಿದರೆ ದೇವಾಲಯಗಳು ನಿರ್ಮಾಣವಾಗುತ್ತವೆ. ಇದರಿಂದ ಗ್ರಾಮದಲ್ಲಿ ದೇವಸ್ಥಾನಗಳು ತುಂಬಿವೆ.

ಇಷ್ಟಾರ್ಥ ಸಿದ್ಧಿಗಾಗಿ ಭಕ್ತರಿಂದ ಊರಿನ ತುಂಬ ದೇವಸ್ಥಾನಗಳ ನಿರ್ಮಾಣ, ಸದ್ಯ ಈ ಗ್ರಾಮದಲ್ಲಿವೆ 120 ದೇಗುಲಗಳು!
ಈ ಗ್ರಾಮದಲ್ಲಿವೆ 120 ದೇಗುಲಗಳು!
Follow us
ಸಾಧು ಶ್ರೀನಾಥ್​
|

Updated on: Aug 23, 2023 | 2:59 PM

ಅದೊಂದು ಆಧ್ಯಾತ್ಮಿಕ ಗ್ರಾಮ. ಅಲ್ಲಿ ಇಷ್ಟಾರ್ಥಗಳು ಈಡೇರಿದರೆ ದೇವಾಲಯಗಳು (Temple) ನಿರ್ಮಾಣವಾಗುತ್ತವೆ. ಇದರಿಂದ ಗ್ರಾಮದಲ್ಲಿ ದೇವಸ್ಥಾನಗಳು ತುಂಬಿವೆ. ಈ ಗ್ರಾಮದಲ್ಲಿ 120ಕ್ಕೂ ಹೆಚ್ಚು ದೇವಾಲಯಗಳಿವೆ. ಇಷ್ಟಾರ್ಥ ಸಿದ್ಧಿಗಾಗಿ ದೇವರನ್ನು ಪ್ರಾರ್ಥಿಸುವುದು ಸಹಜ. ಬಯಸಿದ ಇಷ್ಟಾರ್ಥಗಳು ನೆರವೇರಿದರೆ, ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ ಅಥವಾ ಮತ್ತಿನ್ನೇನೋ ಅರ್ಪಿಸಲಾಗುತ್ತದೆ ಅಥವಾ ಇತರ ಯಾವುದೇ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಆದರೆ ಈ ಗ್ರಾಮದಲ್ಲಿ ಬೇಡಿಕೆಗೆ ತಕ್ಕಂತೆ ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ. ಈ ದೇವಸ್ಥಾನದ ಗ್ರಾಮದ ಬಗ್ಗೆ ತಿಳಿಯೋಣ ಬನ್ನೀ.. (Spiritual) ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಮೇಟಪಲ್ಲಿ ಮಂಡಲದ ವೆಲ್ಲುಲ್ಲ ಗ್ರಾಮವು 5,000 ಜನಸಂಖ್ಯೆಯನ್ನು ಹೊಂದಿದೆ (Vellulla village, Metpally mandal, Jagtial district, Telangana).

ಜಗಿತ್ಯಾಲ ಜಿಲ್ಲೆಯ ಮೇಟಪಲ್ಲಿ ಮಂಡಲದ ವೆಲ್ಲುಲ್ಲ ಗ್ರಾಮವು 5,000 ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದ ಶೇಕಡ 95ಕ್ಕೂ ಹೆಚ್ಚು ಜನರು ಕೃಷಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಸಾಕಷ್ಟು ಆಧ್ಯಾತ್ಮಿಕತೆ ಇದೆ. ಗ್ರಾಮವು ಬೆಳೆ, ಗದ್ದೆಗಳು ಮತ್ತು ಹಸಿರು ಹುಲ್ಲುಗಾವಲುಗಳಿಂದ ಸಮೃದ್ಧವಾಗಿದೆ. ಈ ಹಿಂದೆ ಇಲ್ಲಿಯೂ ಇತರೆ ಎಲ್ಲ ಗ್ರಾಮಗಳಂತೆ ಎರಡು-ಮೂರು ದೇವಸ್ಥಾನಗಳಿದ್ದವು. ಇಲ್ಲಿನ ದೇವಸ್ಥಾನಗಳಲ್ಲಿ ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದರು.

ಕಾಲಾಂತರದಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದರೆ ದೇವಸ್ಥಾನ ನಿರ್ಮಿಸುವುದಾಗಿ ಭಕ್ತರು ಹರಕೆ ಹೊತ್ತುಕೊಳ್ಳಲು ಆರಂಭಿಸಿದರು. ಕೋರಿಕೆಗಳನ್ನು ಪೂರೈಸುತ್ತಿದ್ದಂತೆ ಭಕ್ತರು ದೇವಾಲಯಗಳ ನಿರ್ಮಿಸತೊಡಗಿದರು. ಗ್ರಾಮದಲ್ಲಿ ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ಮಿಸಲಾರಂಭವಾಯಿತು. ಒಂದಲ್ಲ.. ಎರಡಲ್ಲ.. ಸದ್ಯ ಈ ಗ್ರಾಮದಲ್ಲಿ 120 ದೇವಸ್ಥಾನಗಳಿವೆ. ಇದರಲ್ಲಿ 50 ಹನುಮಾನ್ ದೇವಾಲಯಗಳಿವೆ. ರಸ್ತೆಯ ಇಕ್ಕೆಲಗಳಲ್ಲಿ ದೇವಾಲಯಗಳೇ ಕಾಣಸಿಗುತ್ತವೆ.

ಅಷ್ಟೇ ಅಲ್ಲ. ಗ್ರಾಮದ ಹೊರವಲಯದಲ್ಲಿ ವಿವಿಧ ದೇವಾಲಯಗಳಿವೆ. ಇಲ್ಲಿ ಪ್ರತಿದಿನ ಪೂಜೆಗಳು ನಡೆಯುತ್ತವೆ. ಪ್ರತಿ ದೇವಸ್ಥಾನದಲ್ಲಿ ಸ್ಥಳೀಯ ಅರ್ಚಕರಿಂದ ಪೂಜೆ ನಡೆಯುತ್ತದೆ. ಈ ಆಧ್ಯಾತ್ಮಿಕ ಗ್ರಾಮವನ್ನು ನೋಡಲು ಭಕ್ತರು ವಿವಿಧೆಡೆಯಿಂದ ಆಗಮಿಸುತ್ತಾರೆ. ಈ ಗ್ರಾಮದಲ್ಲಿ ಜಾತ್ರೆ, ಶ್ರಾವಣ ಮಾಸ ಮತ್ತಿತರ ಹಬ್ಬ ಹರಿದಿನಗಳಲ್ಲಿ ಪ್ರತಿ ದಿನ ಆಚರಣೆ ನಡೆಯುತ್ತದೆ. ಒಂದೇ ಗ್ರಾಮದಲ್ಲಿ ಇಷ್ಟೊಂದು ದೇವಸ್ಥಾನಗಳಿರುವುದು ಬಹಳ ಅಪರೂಪ.

ಇಲ್ಲಿ ಬರಗಾಲ, ನೀಸರ್ಗಿಕ ವಿಪತ್ತು ಎಂದು ಕೃಷಿ ವೈಫಲ್ಯದ ಮಾತೇ ಇಲ್ಲ. ಎರಡು ಬೆಳೆಗಳು ಬೆಳೆಯಲಾಗುತ್ತದೆ. ಜನರಿಗೆ ಒಳ್ಳೆಯದನ್ನು ತರಲು ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರು ಭಕ್ತಿ ಭಾವದಿಂದ ಹೇಳುತ್ತಾರೆ. ಸದ್ಯಕ್ಕೆ ಜಾಗದ ಕೊರತೆಯಿಂದ ಹೊಸ ದೇವಾಲಯಗಳ ನಿರ್ಮಾಣ ನಡೆಯುತ್ತಿಲ್ಲ. ಈ ಆಧ್ಯಾತ್ಮಿಕ ಗ್ರಾಮವನ್ನು ನೋಡಿದಾಗ ಭಕ್ತಿ ಭಾವ ಮೂಡುತ್ತದೆ. ಬೆಳಗ್ಗೆ ಮತ್ತು ಸಂಜೆ ಭಜನಾ ಕಾರ್ಯಕ್ರಮಗಳಿರುತ್ತವೆ.

ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ