Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ

ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ವಿವೇಕ ಬಿರಾದಾರ

Updated on:Mar 25, 2025 | 10:20 AM

ಕೋಲಾರ ನಗರದ ಕೀಲುಕೋಟೆ ಬಡಾವಣೆಯಲ್ಲಿ, ಸ್ಪಂದನ ರಂಗನಾಥ್ ಅವರ ಮನೆಯ ಹೆಲ್ಮೆಟ್‌ನಲ್ಲಿ ಹಾವು ಸಿಲುಕಿತ್ತು. ಮನೆಯವರು ಉರಗ ರಕ್ಷಕ ಆನಂದ್ ಅವರಿಗೆ ಸಹಾಯಕ್ಕಾಗಿ ಕರೆ ಮಾಡಿದರು. ಆನಂದ್ ತಕ್ಷಣ ಆಗಮಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಬಿಟ್ಟರು. ಈ ಘಟನೆಯು ಉರಗ ರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಹಾವುಗಳನ್ನು ಕೊಲ್ಲದೆ ರಕ್ಷಿಸುವುದು ಮುಖ್ಯ ಎಂದು ಈ ಘಟನೆ ಸಾರಿ ಹೇಳುತ್ತದೆ.

ಕೋಲಾರ ನಗರದ ಕೀಲುಕೋಟೆ ಬಡಾವಣೆಯ ಮನೆಯೊಂದರಲ್ಲಿ ಇಟ್ಟಿದ್ದ ಹೆಲ್ಮೆಟ್​ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಣೆ ಮಾಡಲಾಗಿದೆ. ಸ್ಪಂದನ ರಂಗನಾಥ್ ಅವರ ಮನೆಯಲ್ಲಿನ ಹೆಲ್ಮೆಟ್​ನಲ್ಲಿ ಹಾವು ಸೇರಿಕೊಂಡಿತ್ತು. ಮನೆಯವರು ಉರಗ ರಕ್ಷಕ ಜೀವಿ ಆನಂದ್ ಅವರಿಗೆ ವಿಚಾರ ತಿಳಿಸಿದರು. ಕೂಡಲೇ ಉರಗ ರಕ್ಷಕ ಆನಂದ್​ ಅವರು ಸ್ಪಂದನ ರಂಗನಾಥ್ ಅವರ ಮನೆಗೆ ಆಗಮಿಸಿ, ಹೆಲ್ಮೇಟ್​ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

Published on: Mar 25, 2025 10:17 AM