ಬೆಕ್ಕನ್ನು ಸಾಕುತ್ತಿರುವಿರಾದರೆ ಫೆಲೈನ್ ಪ್ಯಾನ್ಲ್ಯೂಕೊಪೇನಿಯಾ ವೈರಸ್ ಬಗ್ಗೆ ಎಚ್ಚರದಿಂದಿರಿ, ಇದು ಮಾರಣಾಂತಿಕ
ರಾಯಚೂರಿನ ಪಶುವೈದ್ಯಕೀಯ ಆಸ್ಪತ್ರೆಗೆ ಎಫ್ಪಿವಿ ಸೋಂಕಿನಿಂದ ಬಳಲುತ್ತಿರುವ ತಮ್ಮ ಬೆಕ್ಕನ್ನು ಕರೆ ತಂದಿರುವ ಮಹಿಳೆಯರು ಹೇಳುವ ಪ್ರಕಾರ ಸೋಂಕು ತಗುಲಿದ ಮೇಲೆ ಬೆಕ್ಕುಗಳು ವಾಂತಿಬೇಧಿ ಮಾಡಿಕೊಳ್ಳಲಾರಂಭಿಸುತ್ತವೆ ಮತ್ತು ಊಟ ಮಾಡುವುದು, ಹಾಲು ಕುಡಿಯುವುದು ಬಿಟ್ಟು ತಮ್ಮ ಮಾಲೀಕರಿಂದ ಬಚ್ಚಿಟ್ಟುಕೊಳ್ಳುವುದನ್ನು ಪ್ರಯತ್ನ ಮಾಡುತ್ತವೆ. ಬೆಕ್ಕುಗಳಲ್ಲಿ ಕ್ರಿಯಾಶೀಲತೆ ಮಾಯವಾಗಿ ಸುಸ್ತಾಗಿಬಿಡುತ್ತವೆ.
ರಾಯಚೂರು, 25 ಮಾರ್ಚ್: ನೀವು ಮನೆಯಲ್ಲಿ ಬೆಕ್ಕು ಸಾಕುತ್ತಿರುವಿರಾದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಬೆಕ್ಕುಗಳನ್ನು ಕಾಡುವ ಅಥವಾ ಪೆಟ್ಗಳಿಗೆ ವಕ್ಕರಿಸಿರುವ ಫೆಲೈನ್ ಪ್ಯಾನ್ಲ್ಯೂಕೊಪೇನಿಯಾ ವೈರಸ್ ರಾಜ್ಯದ ಸಾಕುಪ್ರಾಣಿಪ್ರಿಯರಲ್ಲಿ ಹೊಸ ಆತಂಕವನ್ನು ಸೃಷ್ಟಿಸಿದೆ. ಇದು ಕೇವಲ ಬೆಕ್ಕುಗಳಲ್ಲಿ ಮಾತ್ರ ಸಾಂಕ್ರಾಮಿಕ ರೋಗ ಎಂದು ರಾಯಚೂರಿನ ಪಶುವೈದ್ಯರು ಹೇಳುತ್ತಾರೆ. ಎಫ್ಪಿವಿ ಒಂದು ಮಾರಣಾಂತಿಕ ಸೋಂಕು ಅಗಿರುವುದರಿಂದ ಬೆಕ್ಕು ಸಾಕಿರುವವರು ಹತ್ತಿರದ ಪಶುವೈದ್ಯಕೀಯ ಅಸ್ಪತ್ರೆಗೆ ಅದನ್ನು ಕರೆದೊಯ್ದು ಚೆಕಪ್ ಮಾಡಿಸುವುದು ಒಳಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Pet food ತಿಂದು ಹಕ್ಕಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ ಬೆಕ್ಕು, ಅಧ್ಯಯನದಿಂದ ದೃಢ
Latest Videos