Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಕ್ಕು ಅಂದರೆ ತುಂಬಾ ಇಷ್ಟನಾ? ಯಾಮಾರಿದ್ರೆ ಪ್ರಾಣ ತೆಗೆಯುತ್ತೆ ಹುಷಾರ್

ಪ್ರಾಣಿಗಳನ್ನು ಪ್ರೀತಿಯಿಂದ ಬೆಳೆಸುವವರು ಯಾವಾಗಲೂ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಹೆಚ್ಚಿನ ಸಮಯದಲ್ಲಿ ನಾಯಿ ಅಥವಾ ಬೆಕ್ಕುಗಳು ಕಚ್ಚುತ್ತವೆ, ತಮ್ಮ ಉಗುರುಗಳಿಂದ ಪರಚುತ್ತವೆ. ಅದನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ಬೆಕ್ಕು, ನಾಯಿಗಳ ಉಗುರಿನಿಂದ ಏನಾಗುತ್ತದೆ ಎಂದು ಅಸಡ್ಡೆ ಮಾಡುತ್ತೇವೆ. ಆದರೆ ಅವುಗಳ ಉಗುರಿನಿಂದ ಪ್ರಾಣವೇ ಹೋಗಬಹುದು ಎಂದರೆ ನಂಬುತ್ತೀರಾ? ಹೌದು. ಮಧ್ಯಪ್ರದೇಶದ ಶಹದೋಲ್ನಲ್ಲಿ ಯುವಕನೊಬ್ಬ ಕಥೆಯೂ ಹೀಗೆ ಆಗಿದೆ. ಆತನ ಮಾಡಿದ ಸಣ್ಣ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದಾನೆ. ಇದೆಲ್ಲಾ ನಿಜವೇ? ಪ್ರಾಣಿಗಳ ಉಗುರು ಜೀವ ತಗೆಯಬಹುದಾ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬೆಕ್ಕು ಅಂದರೆ ತುಂಬಾ ಇಷ್ಟನಾ? ಯಾಮಾರಿದ್ರೆ ಪ್ರಾಣ ತೆಗೆಯುತ್ತೆ ಹುಷಾರ್
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 22, 2025 | 3:54 PM

ನಾಯಿ, ಬೆಕ್ಕುಗಳನ್ನು ಇಷ್ಟ ಪಟ್ಟು ಸಾಕುವುದು ಬಹಳ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಕು ಪ್ರಾಣಿಗಳನ್ನು ಮನೆಯವರಂತೆ ಸಾಕಿ, ಬೆಳೆಸುತ್ತಾರೆ. ಆದರೆ ಪ್ರಾಣಿಗಳನ್ನು ಪ್ರೀತಿಯಿಂದ ಬೆಳೆಸುವವರು ಯಾವಾಗಲೂ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಹೆಚ್ಚಿನ ಸಮಯದಲ್ಲಿ ನಾಯಿ ಅಥವಾ ಬೆಕ್ಕುಗಳು ಕಚ್ಚುತ್ತವೆ, ತಮ್ಮ ಉಗುರುಗಳಿಂದ ಪರಚುತ್ತವೆ. ಅದನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ಬೆಕ್ಕು, ನಾಯಿಗಳ ಉಗುರಿನಿಂದ ಏನಾಗುತ್ತದೆ ಎಂದು ಅಸಡ್ಡೆ ಮಾಡುತ್ತೇವೆ. ಆದರೆ ಅವುಗಳ ಉಗುರಿನಿಂದ ಪ್ರಾಣವೇ ಹೋಗಬಹುದು ಎಂದರೆ ನಂಬುತ್ತೀರಾ? ಹೌದು. ಮಧ್ಯಪ್ರದೇಶದ ಶಹದೋಲ್ನಲ್ಲಿ ಯುವಕನೊಬ್ಬ ಕಥೆಯೂ ಹೀಗೆ ಆಗಿದೆ. ಆತನ ಮಾಡಿದ ಸಣ್ಣ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದಾನೆ. ಇದೆಲ್ಲಾ ನಿಜವೇ? ಪ್ರಾಣಿಗಳ ಉಗುರು ಜೀವ ತಗೆಯಬಹುದಾ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಶಹದೋಲ್ ಜಿಲ್ಲೆಯ ಅಮಲೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಬೆಳಕಿಗೆ ಬಂದಿದ್ದು, ಇದೀಗ ಪ್ರಾಣಿ ಪ್ರೀಯರಿಗೆ ಆತಂಕ ಉಂಟು ಮಾಡಿದೆ. ಸ್ವಲ್ಪ ದಿನಗಳ ಹಿಂದೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ವಾಸಿಸುವ 22 ವರ್ಷದ ದೀಪಕ್ ಕೋಲ್ ಎಂಬ ಯುವಕನ ಆರೋಗ್ಯ ಹದಗೆಟ್ಟಿದ್ದು ಚಿಕಿತ್ಸೆಗಾಗಿ ಎಸ್ಇಸಿಎಲ್ ಸೆಂಟ್ರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ, ದೀಪಕ್ ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ ಅದೇ ಊರಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪಕ್ ಈಗ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣವೇನೆಂದು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ಕುಟುಂಬ ಸದಸ್ಯರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

ಬೆಕ್ಕಿನ ದಾಳಿಯಿಂದ ಜೀವ ಕಳೆದುಕೊಂಡ?

ದೀಪಕ್ ಅವರ ಕುಟುಂಬ ಹೇಳುವ ಪ್ರಕಾರ, ಅವರ ಮನೆಯಲ್ಲಿ ಬೆಕ್ಕು ಒಂದು ದಿನ ದೀಪಕ್ ಮೇಲೆ ದಾಳಿ ಮಾಡಿ ತನ್ನ ಉಗುರುಗಳಿಂದ ಪರಚಿ ಕಚ್ಚಿತ್ತು. ದೀಪಕ್ ಬೆಕ್ಕಿನ ಉಗುರುಗಳಿಂದ ಗಾಯಗೊಂಡಿದ್ದ, ಆದರೆ ಅವನು ಅದನ್ನು ನಿರ್ಲಕ್ಷಿಸಿದ. ಘಟನೆ ನಡೆದ ಕೆಲವು ದಿನಗಳ ನಂತರ, ದೀಪಕ್ ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಡಲು ಪ್ರಾರಂಭಿಸಿತ್ತು. ಬೆಕ್ಕು ಉಗುರುಗಳಿಂದ ತೀವ್ರವಾಗಿ ದಾಳಿ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಅವರ ಕುಟುಂಬ ಸದಸ್ಯರು ಶಂಕಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಟೂತ್‌ಪೇಸ್ಟ್ ನೀಡಬೇಕು? ಈ ಕ್ರಮವನ್ನು ಪಾಲಿಸಿ, ಇಲ್ಲಿದೆ ವೈದ್ಯರ ಸಲಹೆ

ಐದು ವರ್ಷದ ಬಾಲಕನಲ್ಲಿ ಕಂಡುಬಂತು ರೇಬೀಸ್!

ಇದಕ್ಕೆ ಪೂರಕವೆಂಬಂತೆ, ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಐದು ವರ್ಷದ ಬಾಲಕನಿಗೆ ಸಾಕು ಬೆಕ್ಕು ಕಚ್ಚಿದ ಸ್ವಲ್ಪ ದಿನಗಳಲ್ಲಿ ರೇಬೀಸ್ ಸೋಂಕು ಕಂಡು ಬಂದಿದೆ. ಅದನ್ನು ಖಚಿತಪಡಿಸಿಕೊಳ್ಳಲು ಲಕ್ನೋದ ಕೆಜಿಎಂಯುಗೆ ಕಳುಹಿಸಲಾಗಿತ್ತು. ವಾಸ್ತವದಲ್ಲಿ, ಮಗುವಿನ ತಾಯಿ ಶಾಲು ಸೈಫಿ ಎನ್ನುವವರು, ಮಗ ಸಿಫನ್ ವರ್ತನೆಯಲ್ಲಿ ಬದಲಾವಣೆ ಕಂಡರು. ಅವನು ಕಿರಿಕಿರಿಗೊಂಡು ಕೋಪದಿಂದ ವಸ್ತುಗಳನ್ನು ಎಸೆಯುತ್ತಿದ್ದ, ಅದಲ್ಲದೆ ಫ್ಯಾನ್ ನಿಂದ ಬರುವ ಗಾಳಿಗೆ ಹೆದರಿ ಅಳುತ್ತಿದ್ದ.ಈ ರೀತಿಯ ಲಕ್ಷಣಗಳನ್ನು ಕಂಡು ಭಯಭೀತರಾದ ಕುಟುಂಬ ಸದಸ್ಯರು ಅವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ.

ಆಗ ಅಲ್ಲಿನ ವೈದ್ಯರು ಸಿಫನ್ ಅವರನ್ನು ಪರೀಕ್ಷಿಸಿ ಅವನಲ್ಲಿ ಹೈಡ್ರೋಫೋಬಿಯಾ (ನೀರಿನ ಭಯ) ಮತ್ತು ಏರೋಫೋಬಿಯಾ (ಗಾಳಿಯ ಭಯ) ರೋಗಲಕ್ಷಣಗಳನ್ನು ಗಮನಿಸಿದ್ದಾರೆ. ಸಾಮಾನ್ಯವಾಗಿ ಈ ಎರಡೂ ಲಕ್ಷಣಗಳು ರೇಬೀಸ್ ಸೋಂಕಿನಲ್ಲಿ ಕಂಡು ಬರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಇದಲ್ಲದೆ, ಹುಡುಗನಿಗೆ ನಿರಂತರವಾಗಿ ರಕ್ತಸ್ರಾವವಾಗುತ್ತಿದ್ದು, ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾನೆ. ಅವನಿಗೆ ಯೋಚನೆ ಮಾಡಲು ಕೂಡ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಗಮನಿಸಿದ ವೈದ್ಯರು ಕುಟುಂಬ ಸದಸ್ಯರನ್ನು ಪ್ರಶ್ನಿಸಿದಾಗ, ಸಿಫನ್ ಗೆ ಒಂದು ತಿಂಗಳ ಹಿಂದೆ ಸಾಕು ಬೆಕ್ಕು ಕಚ್ಚಿರುವುದು ತಿಳಿದು ಬಂದಿದೆ. ಆದರೆ ವಿಷಯದ ಗಂಭೀರತೆ ಯಾರಿಗೂ ತಿಳಿದಿರದ ಕಾರಣ ಮಗುವಿಗೂ ಲಸಿಕೆ ಹಾಕಲಿಲ್ಲ. ಅದಲ್ಲದೆ ಬೆಕ್ಕಿಗೂ ಲಸಿಕೆ ಹಾಕಿರಲಿಲ್ಲ. ಹಾಗಾಗಿ ಬಾಲಕನಿಗೆ ರೇಬೀಸ್ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಯಾವುದೇ ಸಾಕುಪ್ರಾಣಿ ಅಥವಾ ಬೀದಿಯಲ್ಲಿರುವ ಪ್ರಾಣಿ ಕಚ್ಚಿದರೆ ಅಥವಾ ತನ್ನ ಉಗುರಿನಿಂದ ದಾಳಿ ಮಾಡಿದರೆ ತಕ್ಷಣ ಎಆರ್ವಿ ತೆಗೆದುಕೊಳ್ಳುವುದು ಅವಶ್ಯಕ. ಇದನ್ನು ಮಾಡದಿದ್ದರೆ, ಸೋಂಕು ದೇಹದಲ್ಲಿ ಹರಡುತ್ತದೆ. ಬಳಿಕ ಪರಿಸ್ಥಿತಿ ಗಂಭೀರವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್