AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಟೂತ್‌ಪೇಸ್ಟ್ ನೀಡಬೇಕು? ಈ ಕ್ರಮವನ್ನು ಪಾಲಿಸಿ, ಇಲ್ಲಿದೆ ವೈದ್ಯರ ಸಲಹೆ

ನಿಮ್ಮಲ್ಲಿ ಈ ಒಂದು ಪ್ರಶ್ನೆ ಮೂಡಿರಬಹುದು. ನಮ್ಮ ಮಗವಿಗೆ ಯಾವ ವಯಸ್ಸಿನಲ್ಲಿ ಹಲ್ಲುಜ್ಜಲು ಪ್ರಾರಂಭಿಸಬೇಕು ಎಂದು. ಇದಕ್ಕೆ ಕೆಲವೊಂದು ಸಲಹೆಗಳನ್ನು ಕೂಡ ನೀವು ಕೇಳಬಹುದು. ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ದಂತ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೇಶ್ ಈ ಬಗ್ಗೆ ಕೆಲವೊಂದು ಕ್ರಮಗಳನ್ನು ಹಾಗೂ ಸಲಹೆಗಳನ್ನು ನೀಡಿದ್ದಾರೆ. ಯಾವ ವಯಸ್ಸಿನಲ್ಲಿ ನಿಮ್ಮ ಮಗು ಹಲ್ಲುಜ್ಜಬೇಕು. ಹಾಗೂ ಪೋಷಕರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಇಲ್ಲಿ ಹೇಳಿದ್ದಾರೆ.

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಟೂತ್‌ಪೇಸ್ಟ್ ನೀಡಬೇಕು? ಈ ಕ್ರಮವನ್ನು ಪಾಲಿಸಿ, ಇಲ್ಲಿದೆ ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 22, 2025 | 3:09 PM

Share

ಮಗು ಜನಿಸಿದ ಎಷ್ಟು ವರ್ಷಗಳ ನಂತರ ಆ ಮಗು ಹಲ್ಲುಜ್ಜಲು ಪ್ರಾರಂಭಿಸಬೇಕು. ಈ ಬಗ್ಗೆ ಕೆಲವರಿಗೆ ಗೊಂದಲ ಇದೆ. ಹಲ್ಲುಜ್ಜುವುದನ್ನು ಸಾಮಾನ್ಯವಾಗಿ ಒಂದು ವರ್ಷದ ವಯಸ್ಸಿನಲ್ಲಿ ಅಥವಾ ಮೊದಲ ಹಲ್ಲು ಕಾಣಿಸಿಕೊಂಡ ನಂತರ ಮಾಡಬಹುದು ಎಂದು ಹೇಳುತ್ತಾರೆ. ಮಗುವು ಯಾವ ರೀತಿಯ ಟೂತ್‌ಪೇಸ್ಟ್ ಅನ್ನು ಬಳಸಬೇಕು ಎಂಬ ತಿಳಿದಿರಬೇಕು. ಮಗುವಿಗೆ ಟೂತ್‌ಪೇಸ್ಟ್ ಅನ್ನು ಉಗುಳಲು ಅಭ್ಯಾಸವಾದ ಹಲ್ಲುಜ್ಜುವುದನ್ನು ಕಲಿಸಬೇಕು. ಮಗುವಿಗೆ ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಅನ್ನು ಉಗುಳುವವರೆಗೂ ನೀಡಬಾರದು. ಟೂತ್‌ಪೇಸ್ಟ್ ಬಳಸಲು ಪ್ರಾರಂಭಿಸಲು ಸೂಕ್ತ ವಯಸ್ಸನ್ನು ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ದಂತ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೇಶ್ ಅವರು ಹೇಳುವ ಪ್ರಕಾರ, ಮಗುವಿಗೆ ಹಲ್ಲು ಹುಟ್ಟಲು ಪ್ರಾರಂಭಿಸಿದಾಗ, ಹಲ್ಲುಗಳು ಕಾಣಿಸಿಕೊಂಡ ನಂತರ ಸಾಮಾನ್ಯವಾಗಿ ಟೂತ್‌ಪೇಸ್ಟ್ ಅನ್ನು ಬಳಸಲು ಪ್ರಾರಂಭಿಸಬಹುದು. ಮಗುವಿಗೆ ಎರಡು ವರ್ಷದ ಹೊತ್ತಿಗೆ ಬಟಾಣಿ ಗಾತ್ರದ ಟೂತ್‌ಪೇಸ್ಟ್ ಹಚ್ಚಲು ಪ್ರಾರಂಭಿಸಿ, ನಂತರ ಅದನ್ನೇ ಹೆಚ್ಚಿಸಿ. ಇನ್ನು ಮುಖ್ಯವಾಗಿ ಹಲ್ಲುಗಳನ್ನು ಹಲ್ಲುಜ್ಜುವಾಗ ಮಕ್ಕಳು ಆಕಸ್ಮಿಕವಾಗಿ ಟೂತ್‌ಪೇಸ್ಟ್ ನುಂಗದಂತೆ ನೋಡಿಕೊಳ್ಳಿ.ಏಕೆಂದರೆ ಟೂತ್‌ಪೇಸ್ಟ್‌ನಲ್ಲಿ ಯಾವುದೇ ಅಪಾಯಕಾರಿ ರಾಸಾಯನಿಕಗಳು ಇದ್ದರೆ, ಅದು ಮಗುವಿಗೆ ಹಾನಿ ಮಾಡುತ್ತದೆ.ಈ ಬಗ್ಗೆ ವೈದ್ಯರನ್ನು ಕೂಡ ಸಂಪರ್ಕಿಸಿ ವಿಚಾರಿಸಬಹುದು.

ಇದನ್ನೂ ಓದಿ: ಮನೆ ಮೇಲಿರುವ ನೀರಿನ ಟ್ಯಾಂಕ್ ಸ್ಪಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಟೂತ್‌ಪೇಸ್ಟ್ ಹಚ್ಚಿ. 2-5 ವರ್ಷ ವಯಸ್ಸಿನ ಮಕ್ಕಳಿಗೆ ಬಟಾಣಿ ಗಾತ್ರದ ಫ್ಲೋರೈಡ್ ಟೂತ್‌ಪೇಸ್ಟ್ ಸುರಕ್ಷಿತವಾಗಿರುತ್ತದೆ. ನಿಮ್ಮ ಮಗುವು ಹಲ್ಲುಜ್ಜಲು ಅದರ ಹತ್ತಿರವೇ ನಿಂತಿರಿ, ಹಾಗೂ ಟೂತ್‌ಪೇಸ್ಟ್ ಅನ್ನು ಉಗುಳಲು ನೆನಪಿಸಬೇಕು. ಇದರ ಜತೆಗೆ ವೈದ್ಯರು ಹೇಳು ಅತಿ ಮುಖ್ಯವಾದ ವಿಚಾರವೆಂದರೆ ಚಿಕ್ಕ ವಯಸ್ಸಿನಲ್ಲೇ ಹಲ್ಲು ಕುಳಿಗಳನ್ನು ತಡೆಗಟ್ಟಲು ನಿಮ್ಮ ಮಗುವಿಗೆ ಸರಿಯಾದ ಹಲ್ಲುಜ್ಜುವ ತಂತ್ರಗಳನ್ನು ಕಲಿಸಿ. ನಿಮ್ಮ ಮಗು ಎಂದಿಗೂ ಬಾಯಿಯಲ್ಲಿ ಟೂತ್‌ಪೇಸ್ಟ್ ಹಾಕಿಕೊಳ್ಳದಂತೆ ನೋಡಿಕೊಳ್ಳಿ.

ನೀವು ನಿಮ್ಮ ಮಗುವಿನ ಹಲ್ಲುಗಳನ್ನು ಸಾಸಿವೆ ಎಣ್ಣೆ, ಉಪ್ಪು ಮತ್ತು ಅರಿಶಿನದಿಂದ ಹಲ್ಲುಜ್ಜಬಹುದು. ಇದು ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಒಸಡುಗಳನ್ನು ಬಲವಾಗಿಡುತ್ತದೆ. ಇದು ಚಿಕ್ಕ ಮಕ್ಕಳಿಗೆ ಅಲ್ಲದಿದ್ದರೂ, ವಯಸ್ಕರು ಈ ಕ್ರಮವನ್ನು ಅನುಸರಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ