ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ನೋಡ ನೋಡುತ್ತಿದ್ದಂತೆ ಎರಡು ಕಾರುಗಳು ಹೊತ್ತಿ ಉರಿದ ಘಟನೆ, ದಾವಣಗೆರೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಜನರು ನಿಸ್ಸಾಯಕರಾಗಿ ನಿಂತಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಕಾರುಗಳು ಸುಟ್ಟುಹೋಗಿದ್ದವು. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ.
ದಾವಣಗೆರೆ, ಮಾರ್ಚ್ 25: ದಾವಣಗೆರೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ ಓಮಿನಿ ಕಾರಿಗೆ ಬೆಂಕಿಹೊತ್ತಿಕೊಂಡು ಸಂಪೂರ್ಣ ಉರಿದುಹೋದ ಘಟನೆ ಸಂಭವಿಸಿದೆ. ಓಮಿನಿ ಪಕ್ಕದಲ್ಲಿದ್ದ ಇಕೋ ಕಾರಿಗೂ ಬೆಂಕಿ ಅವರಿಸಿತ್ತು. ಗ್ಯಾಸ್ ಲೀಕೆಜ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Latest Videos