Daily Devotional: ಸ್ತ್ರೀಯರಿಗೆ ಎಡಗಣ್ಣು ಅದುರುವುದರ ಹಿಂದಿನ ರಹಸ್ಯ
ಈ ವಿಡಿಯೋದಲ್ಲಿ ಸ್ತ್ರೀಯರ ಎಡಗಣ್ಣು ಅದುರುವಿಕೆಯ ಅರ್ಥವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಜ್ಯೋತಿಷ್ಯದ ಪ್ರಕಾರ ವಿವಿಧ ವ್ಯಾಖ್ಯಾನಗಳನ್ನು ನೀಡಲಾಗಿದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರ ಅಭಿಪ್ರಾಯಗಳನ್ನೂ ಈ ವಿಡಿಯೋದಲ್ಲಿದೆ. ಕಣ್ಣು ಅದುರುವುದು ಸಾಮಾನ್ಯವಾಗಿದ್ದು, ಅದಕ್ಕೆ ಅನೇಕರು ವಿಭಿನ್ನ ಅರ್ಥಗಳನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ನಾವು ಎಷ್ಟೇ ವಿದ್ಯಾವಂತರಾದರೂ ಕೂಡಾ ಕೆಲವೊಂದು ಹೇಳಿಕೆ ಅಥವಾ ಆಚರಣೆಗಳನ್ನು ನಂಬಲೇಬೇಕಾಗುತ್ತದೆ. ಅದರಲ್ಲಿ ಒಂದು ಕಣ್ಣು ಅದುರುವುದು ಅಥವಾ ಮಿಟುಕಿಸುವುದು ಕೂಡಾ ಒಂದಾಗಿದೆ. ಸ್ತ್ರೀಯರಿಗೆ ಎಡಗಣ್ಣು ಅದುರಿದರೆ ಏನರ್ಥ. ಈ ವಿಚಾರವನ್ನು ಪ್ರಪಂಚದ ಇತರ ಭಾಗಗಳಲ್ಲಿಯೂ ಸಹ ಇದನ್ನು ಚರ್ಚಿಸಲಾಗುತ್ತಿದೆ ಮತ್ತು ಆಚರಿಸಲಾಗುತ್ತದೆ. ಕಣ್ಣಿನಲ್ಲಿ ಆಗುವ ಸಂಕೋಚನವು ಹೆಚ್ಚಿನ ಸಮಯದಲ್ಲಿ ಅದಾಗಿಯೇ ಸಂಭವಿಸುತ್ತದೆ ಮತ್ತು ದೀರ್ಘಕಾಲ ಉಳಿಯುವುದಿಲ್ಲ, ಇದಕ್ಕೆ ವಿಭಿನ್ನ ಅರ್ಥವನ್ನು ನೀಡಲಾಗಿದೆ. ಸ್ತ್ರೀಯರಿಗೆ ಎಡಗಣ್ಣು ಅದುರಿದರೆ ಏನರ್ಥ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.