ಕೇರಳ: ಮಗನ ಸ್ನೇಹಿತನ ಜತೆ ತಾಯಿ ಪರಾರಿ

ಮಹಿಳೆಯೊಬ್ಬರು 14 ವರ್ಷದ ಬಾಲಕನ ಜತೆ ಓಡಿಹೋಗಿರುವ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ಆಕೆ ತನ್ನ ಮಗನ ಸ್ನೇಹಿತನ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಪಾಲಕ್ಕಾಡ್‌ನ ಅಲತೂರ್ ನಿವಾಸಿಯಾದ ಬಾಲಕ ಫೆಬ್ರವರಿ 25 ರಂದು ಶಾಲೆಗೆ ಹೋಗಿ ಮನೆಗೆ ಹಿಂತಿರುಗದ ನಂತರ ನಾಪತ್ತೆಯಾಗಿದ್ದ. ತನಿಖೆ ನಡೆಸಿದಾಗ, ಅವನು ಮಹಿಳೆಯೊಂದಿಗೆ ಹೋಗಿದ್ದಾನೆ ಎಂದು ಕುಟುಂಬಕ್ಕೆ ತಿಳಿದುಬಂದಿದೆ.

ಕೇರಳ: ಮಗನ ಸ್ನೇಹಿತನ ಜತೆ ತಾಯಿ ಪರಾರಿ
ಪೊಲೀಸ್​
Image Credit source: Kerala Kaumudi

Updated on: Feb 28, 2025 | 8:52 AM

ಕಾಸರಗೋಡು, ಫೆಬ್ರವರಿ 28: ಅಚ್ಚರಿ ಎನಿಸಿದರೂ ಇದು ಸತ್ಯ,  ಮಹಿಳೆಯೊಬ್ಬರು 14 ವರ್ಷದ ಬಾಲಕನ ಜತೆ ಓಡಿಹೋಗಿರುವ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ಆಕೆ ತನ್ನ ಮಗನ ಸ್ನೇಹಿತನ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಪಾಲಕ್ಕಾಡ್‌ನ ಅಲತೂರ್ ನಿವಾಸಿಯಾದ ಬಾಲಕ ಫೆಬ್ರವರಿ 25 ರಂದು ಶಾಲೆಗೆ ಹೋದವನು ಮನೆಗೆ ಹಿಂದಿರುಗಿರಲಿಲ್ಲ,  ತನಿಖೆ ನಡೆಸಿದಾಗ, ಅವನು ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂಬುದು ಕುಟುಂಬದ ಗಮನಕ್ಕೆ ಬಂದಿದೆ.

ಆಲತ್ತೂರು ಪೊಲೀಸರು ಬಾಲಕ ಮತ್ತು ಮಹಿಳೆಯನ್ನು ಎರ್ನಾಕುಲಂನಲ್ಲಿ ಪತ್ತೆಹಚ್ಚಿದ್ದು, ಆಕೆಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಬಾಲಕ ಅಪ್ರಾಪ್ತ ವಯಸ್ಕನಾಗಿರುವುದರಿಂದ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.

ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆಕೆಯ ಜೊತೆಗಿದ್ದ ಹುಡುಗ ಆಕೆಯ 14 ವರ್ಷದ ಮಗನ ಸ್ನೇಹಿತ ಎಂದು ವರದಿಯಾಗಿದೆ.

ಮತ್ತಷ್ಟು ಓದಿ: ಪುಣೆ: ಬಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿ ದತ್ತಾತ್ರೇಯ ಗಡೆ ಬಂಧನ

ಶಾಲಾ ಪರೀಕ್ಷೆ ಮುಗಿದ ನಂತರ ಬಾಲಕ ಮನೆಗೆ ಹಿಂತಿರುಗದ ಕಾರಣ ಆತನ ಕುಟುಂಬವು ಆತನನ್ನು ಹುಡುಕಲು ಪ್ರಾರಂಭಿಸಿತು. ನಂತರ, ಬಾಲಕ ಮಹಿಳೆಯೊಂದಿಗೆ ಇದ್ದಾನೆ ಎಂದು ಅವರಿಗೆ ತಿಳಿದುಬಂದಿತು, ಇದರಿಂದಾಗಿ ಅವರು ಅಲತ್ತೂರು ಪೊಲೀಸರಿಗೆ ದೂರು ನೀಡಿದರು. ಮಹಿಳೆಯನ್ನು ರಿಮಾಂಡ್ ಮಾಡಲಾಗಿದೆ. ಆ ಹುಡುಗ ತನ್ನೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ