ಗೂಗಲ್​ ಮ್ಯಾಪ್​ ಫಾಲೋ ಮಾಡುತ್ತಾ ಹೋಗಿ ಕಾರು ಸಮೇತ ಕಾಲುವೆಗೆ ಬಿದ್ದ ಕುಟುಂಬ

ದೇಶದ ಯಾವ ಮೂಲೆಗೆ ಹೋಗಬೇಕಾದರೂ ಜನರಿಗಿಂತ ನಾವು ಗೂಗಲ್​ ಮ್ಯಾಪ್​ ಅನ್ನೇ ಹೆಚ್ಚು ನಂಬುತ್ತೇವೆ. ಅದು ಹೇಳುವುದೆಲ್ಲವೂ ಸತ್ಯ ಎಂದು ಭಾವಿಸುತ್ತೇವೆ. ಅದು ತೋರಿಸುವ ದಾರಿ ಸರಿ ಇದ್ದರೂ ಆ ಹಾದಿಯ ಸ್ಥಿತಿ ಹೇಗಿದೆ ಎಂಬುದರ ಅರಿವಿರುವುದಿಲ್ಲ.

ಗೂಗಲ್​ ಮ್ಯಾಪ್​ ಫಾಲೋ ಮಾಡುತ್ತಾ ಹೋಗಿ ಕಾರು ಸಮೇತ ಕಾಲುವೆಗೆ ಬಿದ್ದ ಕುಟುಂಬ
ಕಾರು

Updated on: Sep 11, 2024 | 1:58 PM

ಗೂಗಲ್​ ಮ್ಯಾಪ್​ ಸೂಚನೆಯಂತೆ ಶಾರ್ಟ್​ಕಟ್ ದಾರಿ ಇದೆ ಎಂದು ಹೋಗಿ ಕಾರೊಂದು ಕಾಲುವೆಗೆ ಉರುಳಿ ಬಿದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವಯನಾಡ್‌ನಿಂದ ಅಲಪ್ಪುಳಕ್ಕೆ ಕುಟುಂಬವನ್ನು ಹೊತ್ತೊಯ್ಯುತ್ತಿದ್ದ ವಾಹನವು ಪೂಂಗೋಡ್ ಕರ್ವ್‌ನಲ್ಲಿ ತೀಕ್ಷ್ಣವಾದ ತಿರುವಿನಲ್ಲಿ ಚಲಿಸುವಾಗ ಪಲ್ಟಿಯಾಗಿದೆ.

ಸ್ಥಳೀಯರು ಕ್ರೇನ್ ಬಳಸಿ ಕಾರನ್ನು ಕಾಲುವೆಯಿಂದ ಮೇಲಕ್ಕೆತ್ತಿದರು. ಮಲಪ್ಪುರಂನ ಚಾಲಕರು ಸಾಮಾನ್ಯವಾಗಿ ಕುನ್ನಂಕುಲಂ ರಸ್ತೆಯಲ್ಲಿ ಹೋಗುವ ಬದಲು ವರವೂರ್ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಆದರೆ, ಕುನ್ನಂಕುಲಂ-ವರವೂರ್ ರಸ್ತೆಯಲ್ಲಿರುವ ತಿರುವುಗಳು ಸವಾಲಿನಿಂದ ಕೂಡಿದ್ದು, ಭಯ ಹುಟ್ಟಿಸುವಂತಿದೆ.

ಮತ್ತಷ್ಟು ಓದಿ: Kerala: ಗೂಗಲ್ ಮ್ಯಾಪ್ ನಂಬಿ ಕಾರು ಓಡಿಸಿ, ತುಂಬಿ ಹರಿಯುತ್ತಿದ್ದ ಹಳ್ಳದೊಳಗೆ ಮುಳುಗಿದ ಕಾರು

ವಯನಾಡಿನಲ್ಲೂ ಅಂಥದ್ದೇ ಘಟನೆ ನಡೆದಿತ್ತು
ಗೂಗಲ್​ ಮ್ಯಾಪ್ ನೋಡುತ್ತಾ ಕಾರೊಂದು ರಸ್ತೆಯಿಂದ ಕೆಳಗೆ ಬಿದ್ದಿತ್ತು, ಗಾಯಗೊಂಡವರನ್ನು ಚಿಕ್ಕಮಗಳೂರು ನಿವಾಸಿಗಳಾದ ಬೆನೆಡಿಕ್ಟ್ (67), ಡಿಸೋಜಾ (60), ಲಾರೆನ್ಸ್ (62) ಎಂದು ಗುರುತಿಸಲಾಗಿತ್ತು.
ಮೂವರು ಪುಲ್ಪಲ್ಲಿಗೆ ತೆರಳುತ್ತಿದ್ದಾಗ ಅವರ ವಾಹನವು ಪಾದಚಾರಿಗಳಿಗೆ ಮಾತ್ರ ಮೀಸಲಾದ ಕಿರಿದಾದ ಸೇತುವೆಯ ಮೇಲೆ ತಪ್ಪಾಗಿ ಹೋಗಿತ್ತು. ಕಾರು 15 ಅಡಿ ಕೆಳಗೆ ಬಿದ್ದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:58 pm, Wed, 11 September 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us