ಪಂಜಾಬ್​ಗಾಗಿ ಹಮಾಸ್ ರೀತಿಯಲ್ಲೇ ದಾಳಿ ಮಾಡುತ್ತೇವೆ: ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ

|

Updated on: Oct 11, 2023 | 10:23 AM

ಪಂಜಾಬ್​ಗಾಗಿ ಹಮಾಸ್ ರೀತಿಯಲ್ಲೇ ದಾಳಿ ನಡೆಸುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಇಸ್ರೇಲ್​-ಪ್ಯಾಲೆಸ್ತೀನ್ ಸಂಘರ್ಷದಿಂದಾರೂ ಬುದ್ಧಿ ಕಲಿತುಕೊಳ್ಳಿ, ಹಮಾಸ್ ಮಾದರಿಯಲ್ಲೇ ನಾವು ದಾಳಿ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ್ದಾನೆ. ಇಸ್ರೇಲ್​ನಲ್ಲಿ ಹಮಾಸ್ ದಾಳಿಯಿಂದ ಪಾಠ ಕಲುಯುವಂತೆ ಪನ್ನು ಭಾರತ ಸರ್ಕಾರ ಹಾಗೂ ಪಂಜಾಬ್ ಸಿಎಂ ಮಾನ್​ಗೆ ಹೇಳಿದ್ದಾನೆ.

ಪಂಜಾಬ್​ಗಾಗಿ ಹಮಾಸ್ ರೀತಿಯಲ್ಲೇ ದಾಳಿ ಮಾಡುತ್ತೇವೆ: ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ
ಉಗ್ರ ಗುರುಪತ್ವಂತ್ ಸಿಂಗ್
Image Credit source: News 18
Follow us on

ಪಂಜಾಬ್​ಗಾಗಿ ಹಮಾಸ್ ರೀತಿಯಲ್ಲೇ ದಾಳಿ ನಡೆಸುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಇಸ್ರೇಲ್​-ಪ್ಯಾಲೆಸ್ತೀನ್ ಸಂಘರ್ಷದಿಂದಾರೂ ಬುದ್ಧಿ ಕಲಿತುಕೊಳ್ಳಿ, ಹಮಾಸ್ ಮಾದರಿಯಲ್ಲೇ ನಾವು ದಾಳಿ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ್ದಾನೆ. ಇಸ್ರೇಲ್​ನಲ್ಲಿ ಹಮಾಸ್ ದಾಳಿಯಿಂದ ಪಾಠ ಕಲುಯುವಂತೆ ಪನ್ನು ಭಾರತ ಸರ್ಕಾರ ಹಾಗೂ ಪಂಜಾಬ್ ಸಿಎಂ ಮಾನ್​ಗೆ ಹೇಳಿದ್ದಾನೆ.

ಖಲಿಸ್ತಾನಿ ಉಗ್ರ ಪನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ.ಇದು 40 ಸೆಕೆಂಡುಗಳ ವಿಡಿಯೋವಾಗಿದ್ದು, ಪನ್ನು ಭಾರತದ ವಿರುದ್ಧ ವಿಷ ಉಗುಳಿದ್ದಾನೆ. ನಾವು ಪಂಜಾಬ್​ನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ ಅದನ್ನು ಭಾರತದಿಂದ ಮುಕ್ತಗೊಳಿಸಲು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತೇವೆ ಎಂದಿದ್ದಾನೆ.

ಪಂಜಾಬ್​ನಲ್ಲಿ ವಾಸಿಸುವ ಜನರು ಪ್ಯಾಲೆಸ್ತೀನ್​ನಂತೆ ಹಿಂಸಾಚಾರವನ್ನು ಪ್ರಾರಂಭಿಸಿದರೆ ಪರಿಸ್ಥಿತಿ ವಿನಾಶಕಾರಿಯಾಗುತ್ತದೆ ಎಂದು ಹೇಳಿದ್ದಾನೆ.
ಕೆಲ ದಿನಗಳ ಹಿಂದೆ ವಿಶ್ವಕಪ್ ಕ್ರಿಕೆಟ್ ವೇಳೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸುವುದಾಗಿ ಬೆದರಿಕೆ ಹಾಕಿದ್ದ.

ಮತ್ತಷ್ಟು ಓದಿ: ಪಂಜಾಬ್: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಆಸ್ತಿಗಳ ಮೇಲೆ ಎನ್​ಐಎ ದಾಳಿ

ವಿಡಿಯೋದಲ್ಲಿ ಇದು ಕ್ರಿಕೆಟ್ ವಿಶ್ವಕಪ್ ಅಲ್ಲ, ಭಯೋತ್ಪಾದನಾ ವಿಶ್ವಕಪ್ ಎಂದು ಹೇಳಿದ್ದ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು, ಕ್ರೀಡಾಂಗಣದಲ್ಲಿ ಖಲಿಸ್ತಾನದ ಧ್ವಜ ಮಾತ್ರ ಕಾಣಿಸುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದ.

ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯ ಅಧಿಕಾರಿಗಳು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಆಸ್ತಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು ಆತ ನಿಷೇಧಿತ ಸಂಘಟನೆಯ ಸಿಖ್ ಫಾರ್ ಜಸ್ಟಿಸ್​ನ ಮುಖಂಡ. ಚಂಡೀಗಢ ಮತ್ತು ಅಮೃತಸರದಲ್ಲಿರುವ ಆತನ ಆಸ್ತಿಯನ್ನು ಎನ್‌ಐಎ ವಶಪಡಿಸಿಕೊಂಡಿದೆ. ಪನ್ನು ಅಮೃತಸರ ನಿವಾಸಿಯಾಗಿದ್ದು, ಆತನ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಎನ್​ಐಎ ಘೋಷಿಸಿದೆ.
ಕೆನಡಾದಲ್ಲಿ ಪನ್ನು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಭಾರತದಲ್ಲಿ ಪನ್ನು ವಿರುದ್ಧ ದೇಶವಿರೋಧಿ ಪಿತೂರಿ

ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿದ್ದು, ಅದರ ವಿವರಗಳನ್ನು ನೀಡಲಾಗಿದೆ. ಪನ್ನುನ ಅಪರಾಧಗಳ ಬಗ್ಗೆ ಕೆನಡಾಕ್ಕೆ ಹಲವಾರು ಬಾರಿ ತಿಳಿಸಲಾಗಿದೆ. ಆದರೆ ಕೆನಡಾ ಭಯೋತ್ಪಾದಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ