ತಿರುವನಂತಪುರಂ: CPM ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಕೊಡಿಯೇರಿ ಬಾಲಕೃಷ್ಣನ್ ರಾಜೀನಾಮೆ ನೀಡಿದ್ದಾರೆ. ED ಅಧಿಕಾರಿಗಳಿಂದ ತಮ್ಮ ಮಗನ ಬಂಧನವಾಗಿರುವ ಹಿನ್ನೆಲೆಯಲ್ಲಿ ಬಾಲಕೃಷ್ಣನ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
NCBಯಿಂದ ಬಂಧನವಾಗಿದ್ದ ಕೆಲ ಡ್ರಗ್ ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಹಾಗೂ ನಟ ಬಿನೀಶ್ ಕೊಡಿಯೇರಿಯನ್ನು ED ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ತಿಂಗಳ 5 ರಂದು ಕೊಡಿಯೇರಿ ಬಾಲಕೃಷ್ಣನ್ ಮಗ ನಟ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 26 ಗಂಟೆಗಳ ಕಾಲ ಶೋಧ ನಡೆಸಿದ್ದರು.
ಈ ದಾಳಿಯ ವಿರುದ್ಧ ನಟನ ಸಂಬಂಧಿಕರು ಪ್ರತಿಭಟನೆ ನಡೆಸಿದಲ್ಲದೆ ಬಿನೀಶ್ ಪತ್ನಿ ರೆಣೀಟಾ ಹಾಗೂ ಮೂರು ವರ್ಷದ ಪುತ್ರನನ್ನು ED ಅಧಿಕಾರಿಗಳು ಕಾರಣವಿಲ್ಲದೆ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಶೋಧದ ಬಳಿಕ ನಟನ ಕುಟುಂಬದವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರ ಬಳಿ ದೂರ ಸಹ ದಾಖಲಿಸಿದ್ದರು.
ಇದನ್ನೂ ಓದಿ: 26 ಗಂಟೆಗಳ ನಂತರ.. ಬಿನೀಶ್ ಕೊಡಿಯೇರಿ ನಿವಾಸದಲ್ಲಿ ED ಶೋಧ ಅಂತ್ಯ
ಡ್ರಗ್ಸ್ ಜಾಲ: ವಿಚಾರಣೆ ಮಧ್ಯೆಯೇ ಮಾಜಿ ಗೃಹ ಸಚಿವರ ಪುತ್ರ ED ಕಸ್ಟಡಿಗೆ
Published On - 2:31 pm, Fri, 13 November 20