ಆಹಾರ ಅರಸಿ ಮನೆಯೊಳಗೆ ಬಂದ ಚಿರತೆ ಮಾಡಿದ್ದೇನು ಗೊತ್ತಾ?

|

Updated on: Jul 19, 2020 | 1:50 PM

ದೆಹರಾದೂನ್​: ದೇಶದಲ್ಲಿ ಪ್ರಾಣಿ ಮತ್ತು ಮಾನವನ ನಡುವಿನ ಸಂಘರ್ಷ ದಿನೇ ದಿನೆ ಹೆಚ್ಚುತ್ತಲೇ ಇದೆ. ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶವಾಗುತ್ತಾ ಹೋದಂತೆ ವನ್ಯಜೀವಿಗಳಗೆ ಆಹಾರದ ಮೂಲವೇ ಬತ್ತಿಹೋಗುತ್ತಿದೆ. ಹೀಗಾಗಿ, ವನ್ಯ ಜೀವಿಗಳು ಆಹಾರ ಅರಸುತ್ತಾ ನಾಡಿನತ್ತ ಬರುತ್ತಿವೆ. ಅಂಥದ್ದೇ ಒಂದು ಘಟನೆ ನಿನ್ನೆ ರಾತ್ರಿ ಉತ್ತರಖಂಡ್ ರಾಜ್ಯದ ತಲ್ಲಿತಲ್​ನಲ್ಲಿ ನಡೆದಿದೆ. ಆಹಾರ ಅರಸಿ ಮನೆಯೊಂದಕ್ಕೆ ಲಗ್ಗೆಯಿಟ್ಟ ಚಿರತೆಗೆ ಏನು ಸಿಗದೆ ಕೊನೆಗೆ ತನ್ನನ್ನ ಅಟ್ಟಿಸಿಕೊಂಡು ಬಂದ ಸಾಕು ನಾಯಿಯನ್ನೇ ಕಸಿದುಕೊಂಡು ಹೋದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು […]

ಆಹಾರ ಅರಸಿ ಮನೆಯೊಳಗೆ ಬಂದ ಚಿರತೆ ಮಾಡಿದ್ದೇನು ಗೊತ್ತಾ?
Follow us on

ದೆಹರಾದೂನ್​: ದೇಶದಲ್ಲಿ ಪ್ರಾಣಿ ಮತ್ತು ಮಾನವನ ನಡುವಿನ ಸಂಘರ್ಷ ದಿನೇ ದಿನೆ ಹೆಚ್ಚುತ್ತಲೇ ಇದೆ. ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶವಾಗುತ್ತಾ ಹೋದಂತೆ ವನ್ಯಜೀವಿಗಳಗೆ ಆಹಾರದ ಮೂಲವೇ ಬತ್ತಿಹೋಗುತ್ತಿದೆ. ಹೀಗಾಗಿ, ವನ್ಯ ಜೀವಿಗಳು ಆಹಾರ ಅರಸುತ್ತಾ ನಾಡಿನತ್ತ ಬರುತ್ತಿವೆ.

ಅಂಥದ್ದೇ ಒಂದು ಘಟನೆ ನಿನ್ನೆ ರಾತ್ರಿ ಉತ್ತರಖಂಡ್ ರಾಜ್ಯದ ತಲ್ಲಿತಲ್​ನಲ್ಲಿ ನಡೆದಿದೆ. ಆಹಾರ ಅರಸಿ ಮನೆಯೊಂದಕ್ಕೆ ಲಗ್ಗೆಯಿಟ್ಟ ಚಿರತೆಗೆ ಏನು ಸಿಗದೆ ಕೊನೆಗೆ ತನ್ನನ್ನ ಅಟ್ಟಿಸಿಕೊಂಡು ಬಂದ ಸಾಕು ನಾಯಿಯನ್ನೇ ಕಸಿದುಕೊಂಡು ಹೋದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಕ್ಷಣ ತನ್ನ ತಪ್ಪು ಅರಿವಾದ ನಾಯಿ ಹಿಂದಿರುಗಿ ಮನೆಯೊಳಕ್ಕೆ ನುಗ್ಗುವ ಮುನ್ನವೇ ಚಿರತೆ ಅದರ ಕುತ್ತಿಗೆಗೆ ಬಾಯಿ ಹಾಕಿ ಎಳೆದುಕೊಂಡು ಹೋದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Published On - 1:45 pm, Sun, 19 July 20