ಉದ್ಯಮಿ ಮುಕೇಶ್ ಅಂಬಾನಿಗೆ ಜೀವ ಬೆದರಿಕೆ : ತೆಲಂಗಾಣದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

|

Updated on: Nov 04, 2023 | 5:29 PM

Mukesh Ambani: ಇತ್ತೀಚೆಗಷ್ಟೇ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರಿಗೆ ಬೆದರಿಕೆ ಇಮೇಲ್​​ ಒಂದು ಬಂದಿತ್ತು. ಇದೀಗ ಈ ಇಮೇಲ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂಬಾನಿಗೆ ಹಲವು ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದ ಆರೋಪದ ಮೇಲೆ ತೆಲಂಗಾಣದ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯನ್ನು ಗಣೇಶ್ ರಮೇಶ ವನಪರ್ದಿ ಎಂದು ಗುರುತಿಸಲಾಗಿದೆ.

ಉದ್ಯಮಿ ಮುಕೇಶ್ ಅಂಬಾನಿಗೆ ಜೀವ ಬೆದರಿಕೆ : ತೆಲಂಗಾಣದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಮುಖೇಶ್ ಅಂಬಾನಿ
Follow us on

ಇತ್ತೀಚೆಗಷ್ಟೇ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರಿಗೆ ಬೆದರಿಕೆ ಇಮೇಲ್​​ ಒಂದು ಬಂದಿತ್ತು. ಇದೀಗ ಈ ಇಮೇಲ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂಬಾನಿಗೆ ಹಲವು ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದ ಆರೋಪದ ಮೇಲೆ ತೆಲಂಗಾಣದ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯನ್ನು ಗಣೇಶ್ ರಮೇಶ ವನಪರ್ದಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್​​​​ 8ವರೆಗೆ ಪೊಲೀಸ್​​​ ಕಸ್ಟಡಿಗೆ ಒಪ್ಪಿಸಲಾಗಿದೆ. ಅಕ್ಟೋಬರ್ 31 ಮುಖೇಶ್ ಅಂಬಾನಿ ಅವರಿಗೆ 400 ಕೋಟಿ ನೀಡುವಂತೆ ಇಮೇಲ್​​ ಬಂದಿತ್ತು. ಒಂದು ವೇಳೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಮೇಲ್​​ನ ಆಧಾರದ ಮೇಲೆ ಅಂಬಾನಿ ಅವರು ಭದ್ರತಾ ಪಡೆ ಪೊಲೀಸರಿಗೆ ದೂರು ನೀಡಿದೆ.

ಈ ದೂರಿನ ಆಧಾರದ ಮೇಲೆ ಗಾಮದೇವಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಂಬಾನಿ ಅವರಿಗೆ ಇಂತಹ 5 ಇಮೇಲ್​​ಗಳು ಬಂದಿದೆ. ಮೊದಲು 20 ಕೋಟಿ ನಂತರ 200 ಕೋಟಿ, ಮೂರನೇ ಬಾರಿ 400 ಕೋಟಿ ರೂ, ಬೇಡಿಕೆ ಇಟ್ಟಿದ್ದಾನೆ, ಅದರೆ ಈ ಯಾವುದಕ್ಕೂ ಅಂಬಾನಿ ಅವರ ಭದ್ರತಾ ಪಡೆ ಪ್ರತಿಕ್ರಿಯೆ ನೀಡದ ಕಾರಣ, ನಿರ್ಲಕ್ಷಿಸಿದರೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮೇಲ್​​ ಮಾಡಿದ್ದಾರೆ.

ಇದನ್ನೂ ಓದಿ: ಉದ್ಯಮಿ ಮುಕೇಶ್ ಅಂಬಾನಿಗೆ ಮತ್ತೆ ಜೀವ ಬೆದರಿಕೆ, 400 ಕೋಟಿ ರೂ.ಗೆ ಬೇಡಿಕೆ

ಇನ್ನು ಇಂತಹ ಅನೇಕ ಕೃತ್ಯಗಳು ಪ್ರತಿದಿನ ನಡೆಯುತ್ತಿರುತ್ತದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಿದ ಪೊಲೀಸ್​​​ ಸಿಬ್ಬಂದಿ ಈಗ ಒಬ್ಬನ್ನು ಬಂಧಿಸಿ, ಕೋರ್ಟ್​​ಗೆ ಮುಂದೆ ನಿಲ್ಲಿಸಿದ್ದಾರೆ, ಇದೀಗ ಈ ಆರೋಪಿ ನವೆಂಬರ್​​ 8ರವರೆಗೆ ಪೊಲೀಸ್​​​ ಕಸ್ಟಡಿಯಲ್ಲಿ ಇರಿಸಲಾಗಿದೆ. ಆರೋಪಿಯ ಮೇಲೆ ಭಾರತೀಯ ದಂಡ ಸಂಹಿತೆಯ (IPC)ಸೆಕ್ಷನ್​ 387 (ಸಾವಿನ ಭಯ ಅಥವಾ ಸುಲಿಗೆ ಮಾಡುವ ಸಲುವಾಗಿ ವ್ಯಕ್ತಿಯನ್ನು ಬೆದರಿಸುವುದು ಅಥವಾ ಗಾಯಗೊಳಿಸುವುದು) ಮತ್ತು 506(2) (ಕ್ರಿಮಿನಲ್​​ ಬೆದರಿಕೆ)ಯ ಅಡಿಯಲ್ಲಿ ದೂರು ದಾಖಲಿಸಲಾಗಿದೆ.