ದೇಶದಲ್ಲಿ ಮತ್ತೆ 2 ವಾರ ಲಾಕ್‌ಡೌನ್ ಮುಂದುವರಿಕೆ

|

Updated on: May 01, 2020 | 7:26 PM

ದೆಹಲಿ: ಮಹಾಮಾರಿ ಕೊರೊನಾ ವೈರಸ್​ ತಡೆಗೆ ದೇಶದಲ್ಲಿ ಮತ್ತೆ 2 ವಾರಗಳ ಕಾಲ ಲಾಕ್‌ಡೌನ್ ಮುಂದುವರಿಕೆ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶಿಸಿದೆ. ಮೇ 17ರವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸಲಾಗಿದೆ. ಗ್ರೀನ್, ಆರೆಂಜ್‌ ವಲಯಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದ್ದು, ರೆಡ್‌ಜೋನ್‌ ವ್ಯಾಪ್ತಿಯಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ. ರೆಡ್‌ಜೋನ್‌ ವ್ಯಾಪ್ತಿಯ 130 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಯಥಾಸ್ಥಿತಿ ಇರಲಿದ್ದು, ಆರೆಂಜ್‌ ಜೋನ್‌ನ 284 ಜಿಲ್ಲೆ, ಗ್ರೀನ್‌ಜೋನ್‌ನ 319 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಬಸ್​, ವಿಮಾನ, ರೈಲು ಸಂಚಾರ ಇರಲ್ಲ: […]

ದೇಶದಲ್ಲಿ ಮತ್ತೆ 2 ವಾರ ಲಾಕ್‌ಡೌನ್ ಮುಂದುವರಿಕೆ
Follow us on

ದೆಹಲಿ: ಮಹಾಮಾರಿ ಕೊರೊನಾ ವೈರಸ್​ ತಡೆಗೆ ದೇಶದಲ್ಲಿ ಮತ್ತೆ 2 ವಾರಗಳ ಕಾಲ ಲಾಕ್‌ಡೌನ್ ಮುಂದುವರಿಕೆ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶಿಸಿದೆ. ಮೇ 17ರವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸಲಾಗಿದೆ.

ಗ್ರೀನ್, ಆರೆಂಜ್‌ ವಲಯಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದ್ದು, ರೆಡ್‌ಜೋನ್‌ ವ್ಯಾಪ್ತಿಯಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ. ರೆಡ್‌ಜೋನ್‌ ವ್ಯಾಪ್ತಿಯ 130 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಯಥಾಸ್ಥಿತಿ ಇರಲಿದ್ದು, ಆರೆಂಜ್‌ ಜೋನ್‌ನ 284 ಜಿಲ್ಲೆ, ಗ್ರೀನ್‌ಜೋನ್‌ನ 319 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ.

ಬಸ್​, ವಿಮಾನ, ರೈಲು ಸಂಚಾರ ಇರಲ್ಲ:
ಬಸ್​ ಸಂಚಾರ, ವಿಮಾನ, ರೈಲು, ಮೆಟ್ರೋ ಸೇವೆ ಎಂದಿನಂತೆ ಇರುವುದಿಲ್ಲ. ಯಾವುದೇ ಶಾಲಾ, ಕಾಲೇಜುಗಳು ಓಪನ್ ಮಾಡುವಂತಿಲ್ಲ. ಹೋಟೆಲ್‌, ರೆಸ್ಟೋರೆಂಟ್‌, ಪಬ್, ಮಾಲ್​, ಥಿಯೇಟರ್, ಜಿಮ್ ಸಹ‌ ತೆರೆಯುವಂತಿಲ್ಲ. ಖಾಸಗಿ ಕಂಪನಿ ಕಚೇರಿಗಳನ್ನು ಓಪನ್ ಮಾಡಬಹುದು. ಆದ್ರೆ ಖಾಸಗಿ ಕಂಪನಿಗಳಲ್ಲಿ ಶೇ.33ರಷ್ಟು ಸಿಬ್ಬಂದಿ ಮಾತ್ರ ಇರಬೇಕು ಎಂದು 2 ವಾರಗಳಿಗೆ ಅನ್ವಯವಾಗುವಂತೆ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

​ಗ್ರೀನ್​ ಜೋನ್​ನಲ್ಲಿ ಕೃಷಿ ಚಟುವಟಿಕೆ ಇರಲಿವೆ:
​ಗ್ರೀನ್​ ಜೋನ್​ನಲ್ಲಿ ಕೃಷಿ ಚಟುವಟಿಕೆಗಳು ಎಂದಿನಂತೆ ಇರಲಿವೆ. ಎಪಿಎಂಸಿ ಮಾರುಕಟ್ಟೆ, ಸರಕು ಸಾಗಣೆ ವಾಹನ ಸಂಚಾರ ಸಹ ಇರುತ್ತೆ. ಅಂತಾರಾಜ್ಯ ಬಸ್ ಸಂಚಾರ ಸಂಪೂರ್ಣ ಬಂದ್. ಇನ್ನು ಎಲ್ಲಾ ವಲಯಗಳಲ್ಲಿ ಅಗತ್ಯವಸ್ತುಗಳು ಎಂದಿನಂತೆ ಸಿಗುತ್ತೆ. ಅಂತಾರಾಜ್ಯ ಸಾರಿಗೆ ಸಂಪರ್ಕ ಸ್ಥಗಿತ ಮುಂದುವರಿಯುತ್ತೆ. ಆದ್ರೆ ಗೂಡ್ಸ್‌ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಇದೆ.

ಬೈಕ್​ನಲ್ಲಿ ಒಬ್ಬರಿಗೆ ಮಾತ್ರ ಸಂಚಾರಕ್ಕೆ ಅವಕಾಶ:
ಸರ್ಕಾರಿ ಕಚೇರಿಗೆ ಹಿರಿಯ ಅಧಿಕಾರಿಗಳು ಮಾತ್ರ ಬರಬೇಕು. ಆಟೋ, ಕಾರು, ಸೈಕಲ್ ರಿಕ್ಷಾ ಎಂದಿನಂತೆ ಸಂಚಾರವಿಲ್ಲ. ಬೈಕ್‌ನಲ್ಲಿ ಒಬ್ಬರಿಗೆ ಮಾತ್ರ ಸಂಚಾರಕ್ಕೆ ಅವಕಾಶ. ಕಾರಿನಲ್ಲಿ ಚಾಲಕ ಸೇರಿ ಮೂವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಕ್ಕಳು, ವಯೋ ವೃದ್ಧರು ಮನೆಯಲ್ಲೇ ಇರಬೇಕು.ಆರೆಂಜ್‌ ಜೋನ್‌ಗಳಲ್ಲಿ ಕಾರು, ಟ್ಯಾಕ್ಸಿ ಓಡಾಡಬಹುದು. ಗ್ರೀನ್‌ ಜೋನ್‌ಗಳಲ್ಲಿ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ರೆಡ್‌ಜೋನ್‌ನಲ್ಲಿ ಸಲೂನ್‌ ಓಪನ್ ಮಾಡುವಂತಿಲ್ಲ.

ಕರ್ನಾಟಕದ 3 ಜಿಲ್ಲೆಗಳು ರೆಡ್ ಜೋನ್:
ದೇಶದ 733 ಜಿಲ್ಲೆಗಳನ್ನೂ ಕೇಂದ್ರ ಸರ್ಕಾರ ರೆಡ್, ಆರೆಂಜ್, ಗ್ರೀನ್ ಜೋನ್​ಗಳೆಂದು ವರ್ಗೀಕರಣ ಮಾಡಿದೆ. ಅದರಲ್ಲಿ ಕರ್ನಾಟಕದ 3 ಜಿಲ್ಲೆಗಳು ಮಾತ್ರ ರೆಡ್ ಜೋನ್ ವ್ಯಾಪ್ತಿಗೆ ಬರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳು ರೆಡ್ ಜೋನ್ ವ್ಯಾಪ್ತಿಗೆ ಬರಲಿದೆ. ರಾಜ್ಯದ 13 ಜಿಲ್ಲೆಗಳು ಆರೆಂಜ್ ಜೋನ್ ವ್ಯಾಪ್ತಿಗೆ ಬರಲಿದ್ದು, ಉಳಿದ 14 ಜಿಲ್ಲೆಗಳು ಗ್ರೀನ್ ಜೋನ್ ವ್ಯಾಪ್ತಿಗೆ ಬರಲಿವೆ.

ಆರೋಗ್ಯ ಸೇತು ಌಪ್‌ ಕಡ್ಡಾಯ:
ಕಂಟೇನ್‌ಮೆಂಟ್‌ ವ್ಯಾಪ್ತಿಯಲ್ಲಿ ಆರೋಗ್ಯ ಸೇತು ಌಪ್‌ ಬಳಕೆ ಕಡ್ಡಾಯವಾಗಿದೆ. ಎಲ್ಲರೂ ಆರೋಗ್ಯ ಸೇತು ಌಪ್‌ ಬಳಸಬೇಕೆಂದು ಕೇಂದ್ರ ಸರ್ಕಾರ ಅದೇಶಿಸಿದೆ.

ಅಗತ್ಯವಲ್ಲದ ಉದ್ದೇಶಕ್ಕೆ ಸಾರ್ವಜನಿಕರು ಓಡಾಡುವಂತಿಲ್ಲ:
ಅಗತ್ಯವಲ್ಲದ ಉದ್ದೇಶಕ್ಕೆ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಸಾರ್ವಜನಿಕರು ಓಡಾಡುವಂತಿಲ್ಲ. 65 ವರ್ಷ ಮೇಲ್ಪಟ್ಟವರು, ಮಕ್ಕಳಿಗೆ ಓಡಾಟಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ವೃದ್ಧರು, ಗರ್ಭಿಣಿಯರು, ಮಕ್ಕಳು ಮನೆಯಲ್ಲಿಯೇ ಇರಬೇಕು. ಆರೋಗ್ಯ ಸಮಸ್ಯೆ ಇದ್ದರೆ ಆಸ್ಪತ್ರೆಗೆ ಹೋಗಲು ಅನುಮತಿ ನೀಡಲಾಗಿದೆ.

Published On - 6:25 pm, Fri, 1 May 20