ಮನುಷ್ಯನ ದುರಾಸೆ ಮತ್ತು ಅಲ್ಪಾವಧಿಯಲ್ಲಿ ಹೆಚ್ಚು ಹಣ ಗಳಿಸುವ ಅತಿಯಾದ ಆಸೆ ಬದುಕನ್ನು ಛಿದ್ರಗೊಳಿಸುತ್ತಿದೆ. ಸುಂದರವಾಗಿರುವ ಜೀವನ ಕ್ಷಣಗಳಲ್ಲಿ ಬದಲಾಗಿಬಿಡುತ್ತದೆ. ಸಮಾಜದಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತಿದ್ದರೂ ಜನರ ಚಿಂತನೆ ಬದಲಾಗುತ್ತಿಲ್ಲ. ಕಷ್ಟಪಟ್ಟು ದುಡಿಮೆ ಮಾಡದೆ ಸುಲಭವಾಗಿ ಹಣ ಗಳಿಸುವ ದುರಾಸೆಗಲಿಂದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಸಾಫ್ಟ್ ವೇರ್ ಎಂಜಿನಿಯರ್ ( Software Engineer) ಕೆಲಸ.. ಒಳ್ಳೆಯ ಸಂಬಳ. ಇತ್ತೀಚೆಗೆ ಮದುವೆಯೂ ಆಗಿದೆ. 5 ತಿಂಗಳ ಮಗು ಇದೆ – ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇಷ್ಟು ಸಾಕಲ್ಲವಾ? ಉಹುಃ – ಸಾಲದು ಎಂಬ ಉತ್ತರ ಬಂದಾಗಲೇ ಅನಾಹುತಗಳು (Cricket Betting) ಘಟಿಸುವುದು. ಜೀವನದುದ್ದಕ್ಕೂ ಸಂತೋಷವಾಗಿರುವುದನ್ನು ಬಿಟ್ಟು, ದುರಂತ ಅಂತ್ತ ಕಂಡಿದ್ದಾನೆ ಆ ಯುವ ಟೆಕ್ಕಿ. ಅತ್ಯಾಶ್ ತನ್ನ ಜೀವನವನ್ನು ಹಾಳುಮಾಡಿಕೊಂಡ (Suicide) ಯುವಕ. ಆತನನ್ನು ನಂಬಿದ ಪತ್ನಿ ಮತ್ತು ಮಗು ಈಗ ರಸ್ತೆಗೆ ಬಿದ್ದಿದ್ದಾರೆ. ವಿವರಗಳಿಗೆ ಹೋಗುವುದಾದರೆ..
ಪಲ್ನಾಡು ಜಿಲ್ಲೆಯ ರೊಂಪಿಚರ್ಲ ಮಂಡಲದ ನಿವಾಸಿ ಗಂಗಿರೆಡಿ (34) ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗಷ್ಟೇ ವಿವಾಹವಾಗಿದ್ದ ಗಂಗಿರೆಡ್ಡಿಗೆ ಐದು ತಿಂಗಳ ಮಗನಿದ್ದಾನೆ. ಆದರೆ ಈ ವೇಳೆ ಗಂಗಿರೆಡ್ಡಿ ಬೆಟ್ಟಿಂಗ್ ಅಭ್ಯಾಸಕ್ಕೆ ದಾಸನಾಗಿದ್ದಾನೆ. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಷ್ಟ ಆದ ಸರಿದೂಗಿಸಲು ಮತ್ತೆ ಮತ್ತೆ ಬೆಟ್ಟಿಂಗ್ ಕಟ್ಟಲು ಇಳಿದಿದ್ದಾನೆ. ಆದರೆ ಸಾಲದ ಪ್ರ,ಮಾಣ ಬೆಟ್ಟದಂತೆ ಬೆಳೆದಿದೆ. ಪರಿಸ್ಥಿತಿ ಹದಗೆಟ್ಟಿದೆ. ಒಮ್ಮಗೇ 40 ಲಕ್ಷ ರೂ. ನಷ್ಟ ಅನುಭವಿಸಿದ್ದಾನೆ.
ಸಾಲದ ಹೊರೆ ಹೆಚ್ಚಾಗುತ್ತಿದ್ದಂತೆ ಹೇಳಿಕೊಳ್ಳಲಾಗದ ನೋವು ಹೆಚ್ಚಾಗಿದೆ. ಇನ್ನೇನು ಉಳಿದಿಲ್ಲವೆಂದು ಸಾಲದಿಂದ ಮುಕ್ತಿ ಪಡೆಯಲು ಆ ಕೆಟ್ಟ ನಿರ್ಧಾರಕ್ಕೆ ಬಂದಿದ್ದಾನೆ. ಅವನು ತನ್ನ ಹೆಂಡತಿ-ಮಗುವನ್ನು ಬಿಟ್ಟು ಮರಳಿ ಬಾರದ ಶಾಶ್ವತ ಲೋಕ ಸೇರಿಕೊಮಡಿದ್ದಾನೆ. ಸಾಲದ ಭಾದೆಯಿಂದ ಹೊರಬರಲು ಸೋಮವಾರ ಪಲ್ನಾಡು ಜಿಲ್ಲೆ ಸಾತುಲೂರು ರೈಲ್ವೇ ಹಳಿ ಮೇಲೆ ಮಲಗಿಬಿಟ್ಟಿದ್ದಾನೆ. ಯಾವುದೋ ಮಾಯದಲ್ಲಿ ಟ್ರೈನ್ ಬಂದು ಆತನ ಮೇಲೆ ಹಾದೊಹೋಗಿದೆ.
ಈ ಘಟನೆ ಸ್ಥಳೀಯವಾಗಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಒಳ್ಳೆಯ ಉದ್ಯೋಗ ಮಾಡಿಕೊಂಡು, ನೆಮ್ಮದಿಯ ಜೀವನ ನಡೆಸುತ್ತಿರುವ ವ್ಯಕ್ತಿ ಈ ರೀತಿಯ ಕೆಲಸ ಮಾಡುವ ಮೂಲಕ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ