ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ

|

Updated on: Mar 16, 2021 | 6:16 PM

Loudspeakers in Mosques: ಅನುಮತಿ ನೀಡಿದ ಬಳಿಕವೂ ಮಸೀದಿಯಲ್ಲಿ ಲೌಡ್​ಸ್ಪೀಕರ್​ ಬಳಕೆಯಿಂದ ಶಬ್ದ ಮಾಲಿನ್ಯವು ನಿಗದಿತ ಪ್ರಮಾಣಕ್ಕಿಂತ 10 ಡೆಸಿಬಲ್ಸ್ ಮಾತ್ರ ಹೆಚ್ಚಾಗಿರಬಹುದು. ಪೋಂಡಾ ಪೊಲೀಸ್ ಠಾಣಾ ಇನ್ಸ್​ಪೆಕ್ಟರ್​ ಈ ಮಸೀದಿಗಳಲ್ಲಿ ಲೌಡ್​ಸ್ಪೀಕರ್​ ಬಳಕೆ ಮೇಲೆ ನಿಗಾವಹಿಸಿ, ನ್ಯಾಯಾಲಯದ ಆದೇಶ ಪಾಲಿಸಲಾಗುತ್ತಿದೆಯಾ? ಎಂಬುದನ್ನು ಕಾಲಕಾಲಕ್ಕೆ ಖಾತ್ರಿಪಡಿಸಬೇಕು.

ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ
ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ
Follow us on

ಪಣಜಿ: ಇನ್ಮುಂದೆ ದಕ್ಷಿಣ ಗೋವಾದಲ್ಲಿರುವ ಪೋಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪೋಂಡಾ ಮಸೀದಿ ಮತ್ತು ಬೆಳಗಾವಿ ಬೈಪಾಸ್​ ರಸ್ತೆಯಲ್ಲಿರುವ ಪಣಜಿ ಮಸೀದಿಯಲ್ಲಿ ಲೌಡ್​ಸ್ಪೀಕರ್​ ಅಥವಾ ಸಾರ್ವಜನಿಕವಾಗಿ ಸದ್ದು ಮಾಡುವ ಯಾವುದೇ ಯಂತ್ರಗಳ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಲೌಡ್​ಸ್ಪೀಕರ್ ಬಳಕೆಗೆ ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು ಮತ್ತು ನಿಗದಿತ ಪ್ರಮಾಣದಲ್ಲಿಯೇ ಶಬ್ದ ಪ್ರಮಾಣ ಇರಬೇಕು ಎಂದು ಪೋಂಡಾ ನ್ಯಾಯಾಲಯ ಆದೇಶ ನೀಡಿದೆ.

ಒಂದು ವೇಳೆ ಇಲ್ಲಿನ ಯಾವುದೇ ಮಸೀದಿಯವರು ಲೌಡ್​ಸ್ಪೀಕರ್​ ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ಶಬ್ದ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪಾಲಿಸಲಾಗುತ್ತಿದೆಯೇ? ಎಂಬುದನ್ನು ಖಾತ್ರಿಪಡಿಸಿಕೊಂಡು ಅನುಮತಿ ನೀಡಬೇಕಾಗುತ್ತದೆ. ಅನುಮತಿ ನೀಡಿದ ಬಳಿಕವೂ ಮಸೀದಿಯಲ್ಲಿ ಲೌಡ್​ಸ್ಪೀಕರ್​ ಬಳಕೆಯಿಂದ ಶಬ್ದ ಮಾಲಿನ್ಯವು ನಿಗದಿತ ಪ್ರಮಾಣಕ್ಕಿಂತ 10 ಡೆಸಿಬಲ್ಸ್ ಮಾತ್ರ ಹೆಚ್ಚಾಗಿರಬಹುದು.

ಆದರೆ ಅದಕ್ಕಿಂತ ಹೆಚ್ಚಾಗಿ ಇದ್ದರೆ ಕ್ರಮ ಕೈಗೊಳ್ಳಬಹುದು. ಪೋಂಡಾ ಪೊಲೀಸ್ ಠಾಣಾ ಇನ್ಸ್​ಪೆಕ್ಟರ್​ ಈ ಮಸೀದಿಗಳಲ್ಲಿ ಲೌಡ್​ಸ್ಪೀಕರ್​ ಬಳಕೆ ಮೇಲೆ ನಿಗಾವಹಿಸಿ, ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆಯಾ? ಎಂಬುದನ್ನು ಕಾಲಕಾಲಕ್ಕೆ ಖಾತ್ರಿಪಡಿಸಬೇಕು ಎಂದೂ ದಕ್ಷಿಣ ಗೋವಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಇದೇ ತಿಂಗಳ 11ರಂದು ಆದೇಶ ಹೊರಡಿಸಿದ್ದಾರೆ.

ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ

ಈ ಬಗ್ಗೆ ಪೋಂಡಾ ನ್ಯಾಯಾಲಯದಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಒಬ್ಬರು ದೂರು ದಾಖಲಿಸಿದ್ದರು. ಅದರ ವಿಚಾರಣೆ ನಡೆಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಆದೇಶ ಹೊರಡಿಸಿದೆ.