LPG Cylinder Price Hike: ಇಂದು ಮಧ್ಯರಾತ್ರಿಯಿಂದಲೇ ಅಡುಗೆ ಅನಿಲ ಸಿಲಿಂಡರ್ ತುಟ್ಟಿ

ಪೆಟ್ರೋಲ್​ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗಲೇ ಅಡುಗೆ ಅನಿಲ ದರವನ್ನು ಏರಿಕೆ ಮಾಡಿರುವ ಬಗ್ಗೆ ಸಾಮಾನ್ಯರು ಆಕ್ರೋಶ ಹೊರ ಹಾಕಿದ್ದಾರೆ.

LPG Cylinder Price Hike: ಇಂದು ಮಧ್ಯರಾತ್ರಿಯಿಂದಲೇ ಅಡುಗೆ ಅನಿಲ ಸಿಲಿಂಡರ್ ತುಟ್ಟಿ
ಸಾಂದರ್ಭಿಕ ಚಿತ್ರ
Edited By:

Updated on: Feb 14, 2021 | 11:32 PM

ನವದೆಹಲಿ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್​ಡೌನ್​​ ಅವಧಿಯಲ್ಲಿ ತೈಲ ಬೆಲೆ ಯಾವುದೇ ಏರಿಳಿತ ಕಂಡಿರಲಿಲ್ಲ. ಆದರೆ, ಲಾಕ್​ಡೌನ್​ ಪೂರ್ಣಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಪೆಟ್ರೋಲ್​ ದರವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಲೀಟರ್ ಪೆಟ್ರೋಲ್​ ದರ ದೇಶಾದ್ಯಂತ 90 ರೂಪಾಯಿ ಗಡಿ ದಾಟಿದೆ. ಈಗ ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್​ಗೆ 50 ರೂಪಾಯಿ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದೆ.

ನಾಳೆಯಿಂದ ಪ್ರತಿ ಸಿಲಿಂಡರ್​ ಬೆಲೆ 50 ರೂಪಾಯಿ ಹೆಚ್ಚಾಗಲಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್​ ಬೆಲೆ 769 ರೂಪಾಯಿ ಆಗಲಿದೆ.  ಈ ಮೊದಲು 722 ರೂಪಾಯಿ ಇತ್ತು. ರಾಜ್ಯದಿಂದ ರಾಜ್ಯಕ್ಕೆ ಈ ದರ ಭಿನ್ನವಾಗಿರಲಿದೆ.

2020ರ ಏಪ್ರಿಲ್​ ಹಾಗೂ ಮೇ ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ಜೂನ್​, ಜುಲೈನಲ್ಲಿ ಮತ್ತೆ ಏರಿಕೆ ಕಂಡಿದ್ದ ದರ, ನಂತರ ನಾಲ್ಕು ತಿಂಗಳು ಯಾವುದೇ ಬದಲಾವಣೆ ಕಂಡಿರಲಿಲ್ಲ. 2021ರ ಜನವರಿ ತಿಂಗಳಲ್ಲಿ ಪ್ರತಿ ಸಿಲಿಂಡರ್​ ದರ 100 ರೂಪಾಯಿ ಏರಿಕೆ ಆಗಿತ್ತು.

ಪೆಟ್ರೋಲ್​ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗಲೇ ಅಡುಗೆ ಅನಿಲ ದರವನ್ನು ಏರಿಕೆ ಮಾಡಿರುವ ಬಗ್ಗೆ ಸಾಮಾನ್ಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Petrol Price Today: ಸತತ 6ನೇ ದಿನವೂ ಏರಿಕೆ ಕಂಡ ಪೆಟ್ರೋಲ್ ದರ; 29 ಪೈಸೆ ಹೆಚ್ಚಳ

Published On - 9:59 pm, Sun, 14 February 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us