Ludhiana Court Blast Case: ಲುಧಿಯಾನ ಕೋರ್ಟ್​ ಸ್ಫೋಟ ಪ್ರಕರಣ; ತಲೆಮರೆಸಿಕೊಂಡಿದ್ದ ಉಗ್ರ ಹರ್​ಪ್ರೀತ್ ಸಿಂಗ್ ಬಂಧನ

| Updated By: ಸುಷ್ಮಾ ಚಕ್ರೆ

Updated on: Dec 02, 2022 | 9:44 AM

ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಲೂಧಿಯಾನ ಕೋರ್ಟ್ ಬಾಂಬ್ ಸ್ಫೋಟದ ಹಿಂದಿನ ಪ್ರಮುಖ ಸಂಚುಕೋರ ಹರ್​ಪ್ರೀತ್​ನನ್ನು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬಂಧಿಸಲಾಗಿದೆ.

Ludhiana Court Blast Case: ಲುಧಿಯಾನ ಕೋರ್ಟ್​ ಸ್ಫೋಟ ಪ್ರಕರಣ; ತಲೆಮರೆಸಿಕೊಂಡಿದ್ದ ಉಗ್ರ ಹರ್​ಪ್ರೀತ್ ಸಿಂಗ್ ಬಂಧನ
ಉಗ್ರ ಹರ್​ಪ್ರೀತ್ ಸಿಂಗ್
Follow us on

ನವದೆಹಲಿ: ಪಂಜಾಬ್​ನ ಲುಧಿಯಾನ ಕೋರ್ಟ್ ಕಟ್ಟಡ ಸ್ಫೋಟ ಪ್ರಕರಣದಲ್ಲಿ (Ludhiana Court Blast Case) ತಲೆಮರೆಸಿಕೊಂಡಿದ್ದ ಉಗ್ರ ಹರ್​ಪ್ರೀತ್ ಸಿಂಗ್​ನನ್ನು (Harpreet Singh) ಬಂಧಿಸಲಾಗಿದೆ. ಉಗ್ರ ಹರ್​ಪ್ರೀತ್ ಸಿಂಗ್​ನನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದು, ಆತ ಮಲೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದ. 2021ರ ಡಿಸೆಂಬರ್​​ನಲ್ಲಿ ಲುಧಿಯಾನದಲ್ಲಿ ಸ್ಫೋಟ ಸಂಭವಿಸಿತ್ತು. ಆ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿ, 6 ಜನ ಗಾಯಗೊಂಡಿದ್ದರು. ಲುಧಿಯಾನಾ ಸ್ಫೋಟ ಪ್ರಕರಣದ ರೂವಾರಿಯಲ್ಲಿ ಒಬ್ಬನಾಗಿರುವ ಹರ್​ಪ್ರೀತ್ ಈಗ ಬಂಧಿಸಲ್ಪಟ್ಟಿದ್ದಾನೆ.

ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಲೂಧಿಯಾನ ಕೋರ್ಟ್ ಬಾಂಬ್ ಸ್ಫೋಟದ ಹಿಂದಿನ ಪ್ರಮುಖ ಸಂಚುಕೋರ ಹರ್​ಪ್ರೀತ್​ನನ್ನು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬಂಧಿಸಲಾಗಿದೆ. ಲುಧಿಯಾನ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಹರ್​ಪ್ರೀತ್​ನನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಪಂಜಾಬ್‌ನ ಅಮೃತಸರದ ನಿವಾಸಿಯಾಗಿರುವ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾನನ್ನು ಕೌಲಾಲಂಪುರದಿಂದ ವಿಮಾನ ನಿಲ್ದಾಣಕ್ಕೆ ಬಂದ ಸ್ವಲ್ಪ ಸಮಯದ ನಂತರ ಬಂಧಿಸಲಾಯಿತು ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: Mangaluru Blast: ಮಂಗಳೂರು ಬಾಂಬ್ ಸ್ಫೋಟ ಪ್ರಕರಣ ಎನ್​ಐಎ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಲುಧಿಯಾನ ಕೋರ್ಟ್ ಕಟ್ಟಡದಲ್ಲಿ ನಡೆದ ಬೃಹತ್ ಬಾಂಬ್ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯು ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಎನ್ಐಎ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 am, Fri, 2 December 22