ಸೂರ್ಯ ಗ್ರಹಣವಾಗಿರಲಿ, ಚಂದ್ರಗ್ರಹಣವಾಗಿರಲಿ. ಗ್ರಹಣ ಅಂದ್ರೇನೆ ಜನರಿಗೆ ಭಯ, ಆತಂಕ. ಅದ್ರಲ್ಲೂ ಇಂದಿನ ತೋಳ ಚಂದ್ರಗ್ರಹಣದಿಂದ ಏನೆಲ್ಲಾ ಸಮಸ್ಯೆ ಎದುರಾಗ್ತಿವೆ ಅನ್ನೋ ಟೆನ್ಷನ್ ಇದೆ. ಭಾರತದಲ್ಲಿ ಗ್ರಹಣದ ಸೈಡ್ ಎಫೆಕ್ಟ್ ಏನು? ಇದರ ಬಗ್ಗೆ ಜ್ಯೋತಿಷಿಗಳು ಮತ್ತು ಖಗೋಳ ತಜ್ಞರು ಏನ್ ಹೇಳಿದ್ದಾರೆ? ಎಲ್ಲಾ ಮಾಹಿತಿ ಇಲ್ಲಿ ತಿಳಿಯಿರಿ.
ಬೆಣ್ಣೆ ಮುದ್ದೆಯಂತೆ ಕಂಗೊಳಿಸೋ ಚಂದಿರ. ಹಾಲ್ಗೆನ್ನೆ ಮುಖವ ನೋಡಿ ಉಕ್ಕುಕ್ಕಿ ಹರಿಯೋ ಸಾಗರ. ಹೌದು, ಹುಣ್ಣಿಮೆಯಂದು ಇಡೀ ಜಗತ್ತನ್ನೇ ಹಾಲ್ನೊರೆಯಂತೆ ಬೆಳಗೋ ಶಶಿಗೆ ಇಂದು ರಾತ್ರಿ ಅಂಧಕಾರ ಆವರಿಸಲಿದೆ. ಅದೂ ಹುಣ್ಣಿಮೆಯಂದೇ ಅರ್ಧಭಾಗ ಕಗ್ಗತ್ತಲೇ ತುಂಬಿಕೊಳ್ಳಲಿದೆ. ಬೆಳದಿಂಗಳು ನೀಡೋ ಚಂದಿರನೇ ಮಂಕು ಕವಿಯಲಿದೆ. ಅದಕ್ಕೆ ಕಾರಣವೇ ಚಂದ್ರಗ್ರಹಣ.
ಸೂರ್ಯಗ್ರಹಣವಾಗಿ ತಿಂಗಳು ಕಳೆದಿಲ್ಲ. ಅಷ್ಟರಲ್ಲಾಗಲೇ ಖಗೋಳದಲ್ಲಿ ಮತ್ತೊಂದು ಕೌತುಕ ನಡೆಯಲಿದೆ. ಹೌದು, ಇಂದು ರಾತ್ರಿ ಚಂದ್ರಗ್ರಹಣ ಸಂಭವಿಸಲಿದ್ದು, ಬೂದು ಬಣ್ಣದಲ್ಲಿ ಸೌರ ಮಂಡಲದಲ್ಲಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಅಡ್ಡ ಬರುತ್ತೆ. ಈ ಬಾರಿಯ ಗ್ರಹಣ ಬೂದು ಬಣ್ಣದಲ್ಲಿರೋದ್ರಿಂದ ಇದನ್ನ ತೋಳ ಗ್ರಹಣ ಅಂತಲೂ ಕರೆಯಲಾಗುತ್ತೆ. ಆದ್ರೆ, ಪ್ರಾಕೃತಿಕ ಖಗೋಳದಲ್ಲಿ ನಡೆಯೋ ಈ ಅಚ್ಚರಿ ಹಲವರಿಗೆ ಭಯವನ್ನೂ ಉಂಟು ಮಾಡಿದೆ.
ಅಪಾಯಕಾರಿಯಾಗಲಿದೆಯಾ ಚಂದ್ರಗ್ರಹಣ?
ವರ್ಷದ ಆರಂಭದಲ್ಲೇ ನಭೋ ಮಂಡಲದಲ್ಲಿ ಉಂಟಾಗೋ ಚಂದ್ರಗ್ರಹಣ ಭೂಲೋಕದಲ್ಲಿರುವವರಲ್ಲಿ ನಡುಕ ಹುಟ್ಟಿಸಿದೆ. ನವಗ್ರಹಗಳ ಪೈಕಿ ಚಂದ್ರನ ಪ್ರಭಾವವೇ ಹೆಚ್ಚಿರೋದ್ರಿಂದ ಗ್ರಹಣದ ವೇಳೆ ವ್ಯಕ್ತಿಯ ಮಾನಸಿಕ ಸ್ಥಿತಿ ಮೇಲೂ ಪರಿಣಾಮ ಬೀರಲಿದೆಯಂತೆ. ಗ್ರಹಣದಿಂದ ಯಾರಿಗೆ ಏನಾಗುತ್ತೋ. ಗ್ರಹಣಕ್ಕೂ ಮುನ್ನ ಏನು ಮಾಡಬೇಕು? ಗ್ರಹಣ ಸಮಯದಲ್ಲಿ ಏನು ಮಾಡಬಾರದು? ಗ್ರಹಣದ ವೇಳೆ ಏನು ಮಾಡಬೇಕು? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ, ಆಚಾರ, ವಿಚಾರ ಏನ್ ಹೇಳುತ್ತೆ..? ಈ ಎಲ್ಲವನ್ನು ಡಿಟೇಲ್ ಆಗಿ ಇಲ್ಲಿ ತಿಳಿಯಿರಿ.
ಗ್ರಹಣಕ್ಕೂ ಮುನ್ನ ಏನು ಮಾಡಬೇಕು?
* ಗ್ರಹಣಕ್ಕೂ ಮುನ್ನ ಶಿವನ ಪ್ರಾರ್ಥನೆ ಮಾಡಬೇಕು
* ಮನೆಯ ಸುತ್ತ ಹಾಲು ಅಥವಾ ಮೊಸರನ್ನ ಚೆಲ್ಲುವುದು
* ಮನೆಯಲ್ಲಿರುವ ವಸ್ತುಗಳಿಗೆ ದರ್ಬೆ ಹಾಕುವುದು
* ತುಪ್ಪ, ಹಪ್ಪಳ, ಹಾಲು ಮೊಸರುಗಳಿಗೆ ದರ್ಬೆ ಹಾಕುವುದು
* ಗ್ರಹಣಕ್ಕೂ ಮುನ್ನ ಸ್ನಾನ ಮಾಡಬೇಕು
* ಗರ್ಭಿಣಿಯರು ಊಟ ಮಾಡಬೇಕು
ಗ್ರಹಣ ಸಮಯದಲ್ಲಿ ಏನು ಮಾಡಬಾರದು?
* ದೇವಸ್ಥಾನಗಳಿಗೆ ಭೇಟಿ ಕೊಡಬಾರದು
* ಸ್ನಾನ ಮಾಡಬಾರದು
* ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು
* ಊಟ ಮಾಡಬಾರದು
ಗ್ರಹಣದ ವೇಳೆ ಏನು ಮಾಡಬೇಕು?
*ದೇವರ ಧ್ಯಾನ ಮಾಡಬೇಕು
*ದಾನ ಮಾಡುವುದು
*ಗ್ರಹಣ ಮುಗಿದ ಬಳಿಕ ಮೋಕ್ಷ ಸ್ನಾನ ಮಾಡುವುದು
ಚಂದ್ರಗ್ರಹಣದಿಂದ ಸೃಷ್ಟಿಯ ಮೇಲೂ ಪರಿಣಾಮ!
ಪುರಾಣಗಳ ಪ್ರಕಾರ, ನವಗ್ರಹಗಳಲ್ಲಿ ಒಬ್ಬನಾದ ಚಂದ್ರನಿಗೆ ಗ್ರಹಣ ಆವರಿಸಿದ್ರೆ, ಸೃಷ್ಟಿಯ ಮೇಲೂ ಪರಿಣಾಮ ಬೀರಲಿದೆಯಂತೆ.
ಬರಿಗಣ್ಣಿಗೆ ಕಂಡರೂ ಮಸೂರ ಬಳಸಿ ನೋಡಬೇಕು!
ಹೌದು, ಚಂದ್ರಗ್ರಹಣದ ಸಂದರ್ಭದಲ್ಲಿ ಚಂದ್ರ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಗೋಚರಿಸುತ್ತಾನೆ. ಸೂರ್ಯಗ್ರಹಣದಂತೆ ಚಂದ್ರಗ್ರಹಣವನ್ನೂ ಕಾಣಬಹುದಾಗಿದೆ. ವಿಶೇಷ ಅಂದ್ರೆ, ಬರಿ ಗಣ್ಣಿಗೆ ಗೋಚರವಾಗುವ ಈ ಚಂದ್ರಗ್ರಹಣವನ್ನ ಮಸೂರ ಬಳಸಿ ನೋಡೋದು ಉತ್ತಮ ಅನ್ನೋದು ಖಗೋಳ ತಜ್ಞರ ಸಲಹೆ. ಒಟ್ನಲ್ಲಿ ಇಂದು ರಾತ್ರಿ ನಡೆಯಲಿರೋ ತೋಳ ಚಂದ್ರಗ್ರಹಣ ಭಾರತದಲ್ಲಿ ಅಷ್ಟಾಗಿ ಗೋಚರಿಸದೇ ಇರೋದ್ರಿಂದ, ಭಾರತೀಯರ ಮೇಲೂ ಕೆಟ್ಟ ಪರಿಣಾಮ ಬೀರಲ್ಲ ಅನ್ನೋದು ಜ್ಯೋತಿಷಿ ಮತ್ತು ವಿಜ್ಞಾನಿಗಳ ಅಂಬೋಣ.