‘ತಾಯಿ ಗಂಗೆಯೇ ನಮ್ಮನ್ನು ಕಾಪಾಡುತ್ತಾಳೆ‘: ಕೊರೊನಾ ಇದ್ದರೂ ಪೂರ್ಣ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು

|

Updated on: Jan 14, 2021 | 2:54 PM

ವಿಶ್ವ ಪ್ರಸಿದ್ಧ ಕುಂಭಮೇಳ ಹರಿದ್ವಾರದಲ್ಲಿ ಮಕರ ಸಂಕ್ರಾಂತಿಯಿಂದ ಆರಂಭವಾಗಿದೆ. 12 ವರ್ಷಕ್ಕೊಮ್ಮೆ ಜರುಗುವ ಪೂರ್ಣಕುಂಭ ಇದಾಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಜನದಟ್ಟಣೆ ಸೃಷ್ಟಿಯಾಗುವ ಧಾರ್ಮಿಕ ಉತ್ಸವ ಎಂಬ ಖ್ಯಾತಿಗೆ ಭಾಜನವಾಗಿದೆ.

‘ತಾಯಿ ಗಂಗೆಯೇ ನಮ್ಮನ್ನು ಕಾಪಾಡುತ್ತಾಳೆ‘: ಕೊರೊನಾ ಇದ್ದರೂ ಪೂರ್ಣ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು
ಮಕರ ಸಂಕ್ರಾಂತಿಯಂದು ಹರಿದ್ವಾರ ಪೂರ್ಣಕುಂಭದಂದು ನೆರೆದ ಯಾತ್ರಾರ್ಥಿಗಳು
Follow us on

ಹರಿದ್ವಾರ: ‘ತಾಯಿ ಗಂಗೆಯೇ ನಮ್ಮನ್ನು ಕಾಪಾಡುತ್ತಾಳೆ’ ಎಂದು ದೃಢವಾಗಿ ನುಡಿಯುತ್ತಾರೆ ಹರಿದ್ವಾರ ಪೂರ್ಣ ಕುಂಭಮೇಳದ ಆಯೋಜಕರು. ಕೊರೊನಾ ಸೋಂಕಿನ ಭೀತಿಯಿದ್ದರೂ ಕುಂಭಮೇಳದ ಆಯೋಜಕರು ಈ ಕುರಿತು ಯಾವುದೇ ಭಯ ವ್ಯಕ್ತಪಡಿಸಿಲ್ಲ. ಸ್ವಲ್ಪ ಆತಂಕವಿದ್ದರೂ, ನಿಯಮಗಳನ್ನು ಅನುಸರಿಸಿ ಮೇಳ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಹರಿದ್ವಾರದಲ್ಲಿ ಮಕರ ಸಂಕ್ರಾಂತಿಯಿಂದ ವಿಶ್ವ ಪ್ರಸಿದ್ಧ ಕುಂಭಮೇಳ ಆರಂಭವಾಗಿದೆ. 12 ವರ್ಷಕ್ಕೊಮ್ಮೆ ಜರುಗುವ ಪೂರ್ಣಕುಂಭ ಇದಾಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಜನದಟ್ಟಣೆ ಸೃಷ್ಟಿಯಾಗುವ ಧಾರ್ಮಿಕ ಉತ್ಸವ ಎಂಬ ಖ್ಯಾತಿಗೆ ಭಾಜನವಾಗಿದೆ. ಮಕರ ಸಂಕ್ರಾಂತಿಯಂದೇ 8 ಲಕ್ಷ ಭಕ್ತಾದಿಗಳು ಹರಿದ್ವಾರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಜನವರಿ 14 ರಿಂದ ಎಪ್ರಿಲ್ 27 ರವರೆಗೆ ಪೂರ್ಣ ಕುಂಭ ಜರುಗಲಿದೆ. ಈ ವೇಳೆ ಸಾಮಾಜಿಕ ಅಂತರ ಕಾಪಾಡಲು ಕೈಗೊಳ್ಳುವ ನಿಯಮಗಳನ್ನು ಜನವರಿ 11 ರ ಒಳಗೆ ಸಲ್ಲಿಸಲು ಉತ್ತರಾಖಂಡ್ ಸರ್ಕಾರದ ಬಳಿ ನೈನಿತಾನ್ ಉಚ್ಛ ನ್ಯಾಯಾಲಯ ತಿಳಿಸಿತ್ತು.

ಪೂರ್ಣಕುಂಭ ಮೇಳದ ನಿಮಿತ್ತ ಮುಂಜಾನೆ ಮಹಿಳೆಯರು ಗಂಗೆಗೆ ಆರತಿ ಬೆಳಗಿದರು

ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದರೆ ರೋಗ ರುಜಿನಗಳು ದೂರಾಗುವುದು ಎಂಬ ನಂಬಿಕೆಯಿದೆ. ಯೂರೋಪ್​ನಲ್ಲಿ ವಾಸಿಸುವ ಜನರಿಗಿಂತ ಭಾರತದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ, ಕುಂಭಮೇಳದಲ್ಲಿ ಪಾಲ್ಗೊಳ್ಳಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಾರೆ ಸಂಕ್ರಾಂತಿಯಂದು ಹರಿದ್ವಾರಕ್ಕೆ ಆಗಮಿಸಿದ ಸಂಜಯ್ ಶರ್ಮಾ. ಸಾವು ಎಂಬುದು ಬದುಕಿನ ಅತಿ ದೊಡ್ಡ ಸತ್ಯ. ಭಯದಿಂದ ಬದುಕುವುದರಲ್ಲಿ ಏನು ತಾನೇ ಖುಷಿಯಿದೆ? ಆದರೆ, ಈ ಸಲ ಪ್ರತಿ ಬಾರಿಯಷ್ಟು ಜನ ಸೇರದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.

ಆದರೆ, ಮತ್ತೋರ್ವ ಯಾತ್ರಾರ್ಥಿ 37 ವರ್ಷದ ಲಕ್ಷ್ಮೀ ಅವರಿಗೆ ಕೊರೊನಾ ಕುರಿತು ಕೊಂಚ ಭಯವಿದೆ. ಸಾಮಾಜಿಕ ಅಂತರ ಮತ್ತು ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಭಾಗವಹಿಸಿದ್ದಾಗಿ ಅವರು ತಿಳಿಸಿದ್ದಾರೆ.

ಸಂಕ್ರಾಂತಿ ಸಂಭ್ರಮ | ಎಳ್ಳುಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬಕ್ಕಿದೆ ಧಾರ್ಮಿಕ ಮಹತ್ವ

Published On - 2:52 pm, Thu, 14 January 21