Kannada News » National » Photos celebration of jallikattu pongal fragrance of dishes makar sankranti
Photo Gallery | ದೇಶದಲ್ಲಿ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಸಂಭ್ರಮದ ಆಚರಣೆಯ ಚಿತ್ರನೋಟ..
ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು.
Jan 14, 2021 | 2:30 PM
ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಕರ ಸಂಕ್ರಾಂತಿಯ ಪ್ರಯುಕ್ತ ತಮ್ಮ ನಿವಾಸದಲ್ಲಿ ಬಸವನಿಗೆ ಪೂಜೆ ಸಲ್ಲಿಸಿದರು.
ಗುಜರಾತ್ನ ಅಹಮದಾಬಾದ್‌ನಲ್ಲಿರುವ ಶ್ರೀ ಜಗನ್ನಾಥಜಿ ದೇವಸ್ಥಾನದಲ್ಲಿ ಸಂಕ್ರಾಂತಿ ಪ್ರಯುಕ್ತವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಾರ್ಥನೆ ಸಲ್ಲಿಸಿದರು
ಮಧುರೈನ ಅವನಿಯಪುರಂ ಪೊಂಗಲ್ ಪ್ರಯುಕ್ತವಾಗಿ ಜಲ್ಲಿಕಟ್ಟು ಆಚರಣೆಯನ್ನು ಸಡಗರದಿಂದ ನೆರವೇರಿಸುತ್ತಾರೆ. ಈ ಸಂದರ್ಭದಲ್ಲಿ ಯುವಕರು ಹೋರಿಯನ್ನು ಪಳಗಿಸಲು ಪ್ರಯತ್ನಿಸುತ್ತಿರುವುದು.
ತ್ರಿಪುರದಲ್ಲಿ ಸಂಕ್ರಾಂತಿ ಆಚರಣೆಯ ಅಂಗವಾಗಿ ಲಂಕಮುರದ ಮಹಿಳೆಯರು ತಮ್ಮ ಅಂಗಳವನ್ನು ರಂಗೋಲಿಯಿಂದ ಅಲಂಕರಿಸಿರುವುದು.
ದಕ್ಷಿಣ 24 ಪರಗಣದಲ್ಲಿ ಯಾತ್ರಿಕರು ಮಕರ ಸಮಯದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಆಚರಣೆಗಳಲ್ಲಿ ತೊಡಗಿರುವುದು.
ಬಿಹಾರದ ಪಾಟ್ನಾದಲ್ಲಿ ಗಾಳಿಪಟ ಮಾರಾಟಗಾರರು ಸಂಕ್ರಾಂತಿಯ ಪ್ರಯುಕ್ತ ಪಿಎಂ ಮೋದಿಯವರ ಭಾವಚಿತ್ರವಿರುವ ಗಾಳಿಪಟಗಳನ್ನು ತಯಾರಿಸಿರುವುದು.
ಮುಂಬೈನ ಧಾರಾವಿಯಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ಭಕ್ತರು ಸಿಹಿ ತಿನಿಸುಗಳನ್ನು ತಯಾರಿಸುವಲ್ಲಿ ನಿರತರಾಗಿರುವುದು